ಕಜ್(ಗುಜರಾತ್): ಭಾರತೀಯ ಕ್ರಿಕೆಟಿಗ ರವೀಂದ್ರ ಜಡೇಜಾ ಅವರು ತಮ್ಮ ಕುಲದೇವರ ಹರಕೆ ತೀರಿಸುವ ಸಲುವಾಗಿ 350 ಕಿ.ಮೀ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.
ಗುಜರಾತ್ ನ ಜಾಮ್ ನಗರದಿಂದ ಪಾದಯಾತ್ರೆ ಕೈಗೊಂಡಿರುವ ಜಡೇಜಾ ಕಜ್ ಜಿಲ್ಲೆಯಲ್ಲಿನ ರಜಪೂತ್ ಸಮುದಾಯದ ಕುಲದೇವರು ಆಶಾ ಪುರದ ಮಾತೆಯ ದರ್ಶನ ಪಡೆದು ಹರಕೆ ತೀರಿಸಲಿದ್ದಾರೆ.
ದಿನಕ್ಕೆ 25 ಕಿ.ಮೀ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದಾರೆ. ಜಡೇಜಾಗೆ ತಂದೆ ಅನಿರುದ್ಧಾ ಸಿಂಗ್ ಜಡೇಜಾ ಹಾಗೂ ಕೆಲ ಆಪ್ತರು ಸಾಥ್ ನೀಡುತ್ತಿದ್ದಾರೆ. ಸದ್ಯ ಸಮಕಿಯಾಲಿ ಎಂಬ ಹಳ್ಳಿಗೆ ತಲುಪಿರುವ ಅವರು, ಕಜ್ ನಲ್ಲಿರುವ ದೇವಿ ದರ್ಶನಕ್ಕಾಗಿ ಇನ್ನು 180 ಕಿ.ಮೀ ಸಂಚರಿಸಬೇಕಿದ್ದು, ಇನ್ನು ಒಂದು ವಾರದ ಅವಶ್ಯಕತೆ ಇದೆ.
ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡುವ ಸಲುವಾಗಿ ಆಶಾ ಪುರದ ದೇವಿಗೆ ಹರಕೆ ಹೊತ್ತಿದ್ದರು. ಹರಕೆ ಬಳಿಕ ಜಡೇಜಾ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದರು. ನಂತರ ಮಾತೆಯನ್ನು ಮರೆತ್ತಿದ್ದ ಜಡೇಜಾ ದೇವಿಯ ಅವಕೃಪೆಗೆ ಪಾತ್ರರಾಗಿದ್ದರು. ಮೊದ ಮೊದಲು ಉತ್ತಮ ಪ್ರದರ್ಶನ ನೀಡುತ್ತಿದ್ದ ಜಡೇಜಾ ಇತ್ತೀಚಿನ ದಿನಗಳಲ್ಲಿ ಜಡೇಜಾ ತೀರ ಕಳಪೆ ಆಟ ಪ್ರದರ್ಶನ ನೀಡುತ್ತಿದ್ದು, ಆಯ್ಕೆಯಿಂದ ವಂಚಿತರಾಗುತ್ತಿದ್ದಾರೆ. ಇದರಿಂದಾಗಿ ಮಾತೆಯ ಹರಕೆ ತೀರಿಸುವ ಸಲುವಾಗಿ ಪಾದಯಾತ್ರೆ ನಡೆಸುತ್ತಿದ್ದಾರೆ.