ಕ್ರೀಡೆ

ವಿಶ್ವ ಜೂನಿಯರ್ ಗಾಲ್ಫ್ ಪ್ರಶಸ್ತಿ ಗೆದ್ದ ಬಾಲಪ್ರತಿಭೆ ಶುಭಂ ಜಗ್ಲಾನ್

ಲಾಸ್ ವೇಗಾಸ್ ನಲ್ಲಿ ಗುರುವಾರ ನಡೆದ ಐಜೆಜಿಎ ವಿಶ್ವ ತಾರೆಯರ ಜೂನಿಯರ್ ಗಾಲ್ಫ್ ಸ್ಪರ್ಧೆಯಲ್ಲಿ ಭಾರತದ ಅಪ್ರತಿಮ ಬಾಲಪ್ರತಿಭೆ ಶುಭಂ ಜಗ್ಲಾನ್...

ನವದಹೆಲಿ: ಲಾಸ್ ವೇಗಾಸ್ ನಲ್ಲಿ ಗುರುವಾರ ನಡೆದ ಐಜೆಜಿಎ ವರ್ಲ್ಡ್ ಸ್ಟಾರ್ಸ್ ಆಫ್ ಜೂನಿಯರ್ ಗಾಲ್ಫ್ ಸ್ಪರ್ಧೆಯಲ್ಲಿ ಭಾರತದ ಅಪ್ರತಿಮ ಬಾಲ ಪ್ರತಿಭೆ ಶುಭಂ ಜಗ್ಲಾನ್ ಗಾಲ್ಫ್ ಪ್ರಶಸ್ತಿ ಗೆದ್ದುಕೊಂಡಿದ್ದಾನೆ.

10 ವರ್ಷದ ಹರೆಯ ಶುಭಂ ಜಗ್ಲಾನ್ ಹರಿಯಾಣದ ಗ್ರಾಮೀಣ ಪ್ರತಿಭೆಯಾಗಿದ್ದು, ಕಳೆದ ಭಾನುವಾರವಷ್ಟೇ ಕ್ಯಾಲಿಫೋರ್ನಿಯದ ವೆಲ್ಕ್ ರಿಸಾರ್ಟ್ ಫೌಂಟೇನ್ ಕೋರ್ಸ್ ನಲ್ಲಿ ನಡೆದಿದ್ದ ಜೂನಿಯರ್ ವಿಶ್ವ ಗಾಲ್ಫ್ ಚಾಂಪಿಯನ್ ಶಿಪ್ ಪ್ರಶಸ್ತಿಯನ್ನು ಗೆದ್ದಿದ್ದ. ಇದೀಗ ಮತ್ತೆ ಐಜೆಜಿಎ ವಿಶ್ವ ತಾರೆಯರ ಜೂನಿಯರ್ ಗಾಲ್ಫ್ ಸ್ಪರ್ಧೆಯಲ್ಲಿ ಮತ್ತೊಂದು ಪ್ರಶಸ್ತಿ ಗಳಿಸುವ ಮೂಲಕ ಇತಿಹಾಸ ಪುಸ್ತಕದಲ್ಲಿ ತನ್ನ ಹೆಸರನ್ನು ದಾಖಲಿಸ ಹೊರಟಿದ್ದಾನೆ.

ಗುರುವಾರ ಲಾಸ್ ವೇಗಾಸ್ ನಲ್ಲಿ ನಡೆದ ಐಜೆಜಿಎ ವಿಶ್ವ ತಾರೆಯರ ಜೂನಿಯರ್ ಗಾಲ್ಫ್ ಸ್ಪರ್ಧೆಯಲ್ಲಿ ಶುಭಂ ಜಗ್ಲಾನ್ 3 ಸುತ್ತುಗಳ ಹೋರಾಟದಲ್ಲಿ 106 ಅಂಕಗಳನ್ನು ಗಳಿಸಿದ್ದ. ಈ ಮೂಲಕ ಜಸ್ಟಿನ ಡ್ಯಾಂಗ್, ಸಿಹಾನ್ ಸಂಧು ಹಾಗೂ ಥಯ್ಲಾಂಡ್  ನ ಪಾಂಗ್ಸಪಕ್ ಲೋಪಾಕ್ ದೀ ವಿರುದ್ಧ 5 ಸ್ಟ್ರೋಕ್ ಗಳ ವಿಜಯ ದಾಖಲಿಸಿ 9-10 ವರ್ಷ ಹುಡುಗರ ವರ್ಗದಲ್ಲಿ ಪ್ರಶಸ್ತಿ ಗೆದ್ದಿದ್ದಾನೆ.

ತನ್ನ ಪ್ರಶಸ್ತಿ ಹಾಗೂ ಸಾಧನೆ ಕುರಿತಂತೆ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಸಂತಸ ವ್ಯಕ್ತಪಡಿಸಿರುವ ಶುಭಂ ಜಗ್ಲಾನ್, ನನ್ನ ಗೆಲವು ಬಹುವರ್ಷಗಳ ಕನಸಾಗಿದ್ದು, ಎಲ್ಲವೂ ಒಂದು ಕನಸು ಎಂಬಂತಿದೆ. ಪ್ರಶಸ್ತಿ ಗೆದ್ದಿದ್ದು ಬಹಳ ಸಂತೋಷವಾಗುತ್ತಿದ್ದು, ನನ್ನ ಎಲ್ಲಾ ಗೆಳೆಯರು ತಮ್ಮ ಶುಭಹಾರೈಕೆಗಳನ್ನು ತಿಳಿಸುತ್ತಿದ್ದಾರೆ ಎಂದು ಹೇಳಿದ್ದಾನೆ.

ಇದೀಗ ನಾನು ಏನೇ ಮಾಡಿದ್ದರೂ ಅದು ನನ್ನ ಕುಟುಂಬ ಬೆಂಬಲದಿಂದ ಹಾಗೂ ನನ್ನ ಕೋಚ್ ನೀಡಿದ ತರಬೇತಿಯಿಂದಷ್ಟೇ. ನನ್ನ ಶಾಲೆ ನನ್ನ ಸಾಧನೆಗೆ ಸಾಕಷ್ಟು ಸಹಾಯ ಮಾಡಿತ್ತು. ಅಮೆರಿಕಗೆ ಹೋಗಲು, ಆಟವಾಡಲು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಶಾಲೆ ನೀಡಿತ್ತು. ಪ್ರಾಮಾಣಿಕವಾಗಿ ನಾನು ಆಟವಾಡುತ್ತೇನೆ. ಅದಕ್ಕಾಗಿ ಶ್ರಮ ಪಡುತ್ತೇನೆ. ಗೆಲ್ಲುವ ಪ್ರಯತ್ನದಲ್ಲಿ ಯಾವುದೇ ಕಾರಣಕ್ಕೂ ಅಡ್ಡ ದಾರಿ ಹಿಡಿಯುವ ಪ್ರಯತ್ನ ಮಾಡಿಲ್ಲ ಎಂದು ಹೇಳಿಕೊಂಡಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT