ನವದೆಹಲಿ: ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿಗೆ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸುವಂತೆ ಜಾರಿ ನಿರ್ದೇಶನಾಲಯ (ಇಡಿ) ಮುಂಬೈ ಸೆಷನ್ ನ್ಯಾಯಾಲಯವನ್ನು ಕೋರಿದೆ.
ಹಣಕಾಸು ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ 15 ದಿನಗಳೊಳಗಾಗಿ ಹಾಜರಾಗಲು ಲಲಿತ್ ಮೋದಿಗೆ ಜಾರಿ ನಿರ್ದೇಶನಾಲಯ ಈ ಮುಂಚೆ ನೋಟಿಸ್ ನೀಡಿ, ವಿಫಲವಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿತ್ತು.
2010ರಲ್ಲಿ ಚೆನ್ನೈಯಲ್ಲಿ ಬಿಸಿಸಿಐ ಪ್ರಸಾರ ಹಕ್ಕು ನೀಡಲು ಮತ್ತು ವಾಣಿಜ್ಯ ಪ್ರಸಾರ ಸಮಯಕ್ಕಾಗಿ ಲಲಿತ್ ಮೋದಿ 470 ಕೋಟಿ ರೂ. ಅವ್ಯವಹಾರ ನಡೆಸಿದ್ದಾರೆ ಎಂದು ಪ್ರಕರಣ ದಾಖಲಿಸಿತ್ತು. ಈ ಸಂಬಂಧ ಹಣಕಾಸು ಅವ್ಯವಹಾರ ತಡೆ ಕಾಯ್ದೆ ಅಡಿಯಲ್ಲಿ ಮೋದಿಗೆ ಸಮನ್ಸ್ ಜಾರಿಗೊಳಿಸಿತ್ತು.