ರಾಫೆಲ್ ನಡಾಲ್ 
ಕ್ರೀಡೆ

ಮತ್ತೆ ಕ್ಲೇ ಕೋರ್ಟ್ ನತ್ತ ನಡಾಲ್ ಹೆಜ್ಜೆ

ತಮ್ಮ ಲಯವನ್ನು ಕಳೆದುಕೊಂಡು ಮಂಕಾಗಿರುವ ಸ್ಪೇನ್‍ನ ಖ್ಯಾತ ಟೆನಿಸ್ ತಾರೆ ರಾಫೆಲ್ ನಡಾಲ್,

ಹ್ಯಾಂಬರ್ಗ್: ತಮ್ಮ ಲಯವನ್ನು ಕಳೆದುಕೊಂಡು ಮಂಕಾಗಿರುವ ಸ್ಪೇನ್‍ನ ಖ್ಯಾತ ಟೆನಿಸ್ ತಾರೆ ರಾಫೆಲ್ ನಡಾಲ್, ಕ್ರೀಡೆಯಲ್ಲಿ ಮತ್ತೆ ತಮ್ಮ ನಿಯಂತ್ರಣ ಕಂಡುಕೊಳ್ಳಲು ಕ್ಲೇ ಕೋರ್ಟ್‍ನತ್ತ ಮುಖ ಮಾಡಿದ್ದಾರೆ.

ಮುಂದಿನ ವಾರ ಹ್ಯಾಂಬರ್ಗ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪಾಲ್ಗೋಳ್ಳಲಿರುವ ನಡಾಲ್, ಟೂರ್ನಿಯಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದಾರೆ. ಯುಎಸ್ ಓಪನ್ ಟೆನಿಸ್ ಟೂರ್ನಿ ಸಮೀಪದಲ್ಲಿರುವಾಗಲೇ ಹ್ಯಾಂಬರ್ಗ್ ಓಪನ್‍ನಲ್ಲಿ ಆಡಲು ನಡಾಲ್ ನಿರ್ಧರಿಸಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಸದ್ಯದ ಪರಿಸ್ಥಿತಿ ಸಂಪೂರ್ಣ ವಿಬಿನ್ನವಾಗಿದೆ. ಕಳೆದ 10 ಅಥವಾ 11ವರ್ಷಗಳಿಗಿಂತ ಈ ವರ್ಷ ಹೆಚ್ಚು ಸೋಲನುಭವಿಸಿದ್ದೇನೆ. ಈ ಹೊಸ ಪರಿಸ್ಥಿತಿಯನ್ನು ಸ್ವೀಕರಿಸಬೇಕಿದೆ. ಅಲ್ಲದೆ ಈ ಬಗ್ಗೆ ಹೆಚ್ಚು ಗಮನಹರಿಸಬೇಕಿದೆ. ಕಠಿಣ ಪರಿಶ್ರಮದಿಂದ ಮತ್ತೆ ನಿಯಂತ್ರಣ ಕಂಡುಕೊಳ್ಳಬೇಕಿದೆ.

 ಪ್ರಸ್ತುತ ದೈಹಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದು, ಯಾವುದೇ ಗಾಯದ ಸಮಸ್ಯೆಗಳಿಲ್ಲದಿರುವುದು ಸಂತಸದ ವಿಚಾರ ಎಂದು ನಡಾಲ್ ತಿಳಿಸಿರುವುದಾಗಿ ಖಾಸಗಿ ಚಾನೆಲ್ ವೊಂದು  ವರದಿ ಮಾಡಿದೆ. 2015ರಲ್ಲಿ ನಡಾಲ್ ವಿಶ್ವ ರ್ಯಾಂಕಿಂಗ್‍ನಲ್ಲಿ 10ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇದು ಕಳೆದ ಒಂದು ದಶಕದಲ್ಲಿ ಅಂತ್ಯಂತ ಕೆಳ ಸ್ಥಾನವಾಗಿದೆ. ಈ ವರ್ಷ 12 ಪಂದ್ಯಗಳಲ್ಲಿ ಪರಾಭವಗೊಂಡಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

42 ಎಸೆತ, 102 ರನ್: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯೇ ಉಡೀಸ್‌ ಮಾಡಿದ ಶ್ರೇಯಸ್ ಅಯ್ಯರ್‌!

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ