ಅನುರಾಗ್ ಠಾಕೂರ್(ಸಂಗ್ರಹ ಚಿತ್ರ) 
ಕ್ರೀಡೆ

ಉಗ್ರರ ದಾಳಿಯೂ, ಸರಣಿಯೂ ಒಟ್ಟೊಟ್ಟಿಗೆ ನಡೆಯದು: ಪಿಸಿಬಿಗೆ ಬಿಸಿಸಿಐ ಎಚ್ಚರಿಕೆ

ಉಗ್ರರ ದಾಳಿಯ ಜತೆ ಜತೆಗೆ ಕ್ರಿಕೆಟ್ ಸರಣಿಯನ್ನು ಒಟ್ಟೊಟ್ಟಿಗೆ ನಡೆಸಲು ಆಗದು ಎಂದು ಭಾರತದೊಂದಿಗೆ ಕ್ರಿಕೆಟ್ ಆಡಲು ತುದಿಗಾಲಲ್ಲಿ ನಿಂತ್ರಿರುವ ಪಾಕಿಸ್ತಾನ ಕ್ರಿಕೆಟ್...

ನವದೆಹಲಿ: ಉಗ್ರರ ದಾಳಿಯ ಜತೆ ಜತೆಗೆ ಕ್ರಿಕೆಟ್ ಸರಣಿಯನ್ನು ಒಟ್ಟೊಟ್ಟಿಗೆ ನಡೆಸಲು ಆಗದು ಎಂದು ಭಾರತದೊಂದಿಗೆ ಕ್ರಿಕೆಟ್ ಆಡಲು ತುದಿಗಾಲಲ್ಲಿ ನಿಂತ್ರಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಸೋಮವಾರ ಬಿಸಿ ತಾಕಿಸಿದೆ.

ಭದ್ರತಾ ವಿಷಯದಲ್ಲಿ ಭಾರತ ಎಂದೂ ರಾಜಿ ಮಾಡಿಕೊಳ್ಳುವುದಿಲ್ಲ. ದ್ವೀಪಕ್ಷೀಯ ಕ್ರಿಕೆಟ್ಗಾಗಿ ಹಂಬಲಿಸುತ್ತಿರುವ ಪಿಸಿಬಿ ತನ್ನ ದೇಶದ ಭಯೋತ್ಪಾದನಾ ಕೃತ್ಯಕ್ಕೆ ಸೂಕ್ತ ಉತ್ತರ ಕಂಡುಕೊಳ್ಳಬೇಕು. ಇದಾಗದ ಹೊರತು ಯಾವುದೇ ಕಾರಣಕ್ಕೂ ಭಾರತ, ಪಾಕಿಸ್ತಾನ ಕ್ರಿಕೆಟ್ ನಡೆಯುವ ಮಾತೇ ಇಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಖಂಡತುಂಡವಾಗಿ ಪಿಸಿಬಿಗೆ ಹಾಗೂ ಪರೋಕ್ಷವಾಗಿ ಪಾಕ್ ಸರ್ಕಾರಕ್ಕೆ ಚುರುಕು ಮುಟ್ಟಿಸಿದ್ದಾರೆ.

'ಪಂಜಾಬ್‍ನ ಗುರುದಾಸ್ ಪುರದಲ್ಲಿ ಉಗ್ರರು ನಡೆಸಿದ ದಾಳಿಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ನಾನೊಬ್ಬ ಭಾರತೀಯನಾಗಿ ನನಗೆ ಕ್ರಿಕೆಟ್‍ಗಿಂತ ಭಾರತೀಯನೊಬ್ಬನ ಜೀವವೇ ಅಮೂಲ್ಯ'' ಎಂದು ಅನುರಾಗ್ ಠಾಕೂರ್ ಸ್ಪಷ್ಟಪಡಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಫ್ಯೂಚರ್ ಟೂರ್ ಪ್ರೋಗ್ರಾಂ(ಎಫ್ ಟಿಪಿ)ನಡಿ ಭಾರತ ಹಾಗೂ ಪಾಕಿಸ್ತಾನ ಎರಡು ಟೆಸ್ಟ್, ಐದು ಏಕದಿನ ಪಂದ್ಯಗಳನ್ನು ತಟಸ್ಥ ತಾಣ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ನಲ್ಲಿ ಈ ವರ್ಷಾಂತ್ಯದಲ್ಲಿ ಆಡುವ ಸಾಧ್ಯತೆ ಇತ್ತಾದರೂ, ಸೋಮವಾರದ ಪಂಜಾಬ್ ದಾಳಿಯಿಂದ ಅದಕ್ಕೆ ಗ್ರಹಣ ಹಿಡಿದಂತಾಗಿದೆ.

ಭಾರತ ಮತ್ತು ಪಾಕಿಸ್ತಾನ ನಡುವಣದ ದ್ವಿಪಕ್ಷೀಯ ಕ್ರಿಕೆಟ್ ಕೊನೆಯ ಬಾರಿಗೆ 2007ರಲ್ಲಿ ನಡೆದಿದ್ದು, ಅಲ್ಲಿಂದಾಚೆಗೆ ಪ್ರಮುಖ ದ್ವಿಪಕ್ಷೀಯ ಸರಣಿಗೆ ಭಯೋತ್ಪಾದನಾ ಕೃತ್ಯ ಅಡ್ಡಿಯಾಗಿದೆ. ಉಗ್ರರ ಉಪಟಳದಿಂದಾಗಿ ಅದು ನೆನೆಗುದಿಗೆ ಬಿದ್ದಿದೆ.

ಭಾರತ ಸರಣಿ ನಂತರ ನಿವೃತ್ತಿ

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಮಿಸ್ಬಾ ಉಲ್ ಹಕ್, ಭಾರತ ವಿರುದ್ದ ಸರಣಿಯ ನಂತರವಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‍ನಿಂದ ನಿವೃತ್ತಿ ಪಡೆಯುವುದಾಗಿ ತಿಳಿಸಿದ್ದಾರೆ. ನನ್ನಲ್ಲಿ ಈಗ ಹೆಚ್ಚು ಕ್ರಿಕೆಟ್ ಆಡುವ ಸಾಮರ್ಥ್ಯವಿಲ್ಲ ಎಂಬ ಅರಿವು ಇದೆ. ಮುಂದಿನ ಕೆಲ ದಿನಗಳಲ್ಲಿ ಆದಷ್ಟು ಟೆಸ್ಟ್ ಪಂದ್ಯಗಳನ್ನಾಡುವ ಆಸೆ ಇದೆ. ಒಂದು ವೇಳೆ ಭಾರತ ಮತ್ತು ಪಾಕ್ ಸರಣಿ ನಡೆದರೆ, ಆ ಸರಣಿಯಲ್ಲಿ ಆಡುತ್ತೇನೆ. ಆನಂತರ ನಿವೃತ್ತಿ ಪಡೆಯುತ್ತೇನೆ. ಹಾಗಾಗಿ ಭಾರತ ವಿರುದ್ಧ ಸರಣಿಯನ್ನೇ ಎದುರು ನೋಡುತ್ತಿದ್ದೇನೆ'' ಎಂದು ಮಿಸ್ಬಾ ಉಲ್ ಹಕ್ ತಿಳಿಸಿದ್ದಾರೆ. ಅಂದ್ಹಾಗೆ ಮಿಸ್ಬಾ ಉಲ್ ಹಕ್ ಈಗಾಗಲೇ ಟಿ20 ಹಾಗೂ ಏಕದಿನ ಮಾದರಿಗೆ ವಿದಾಯ ಹೇಳಿದ್ದು, ಕೇವಲ ಟೆಸ್ಟ್ ಕ್ರಿಕೆಟ್‍ನಲ್ಲಷ್ಟೇ ಆಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!

ಶಾಲೆಗಳಲ್ಲಿ ಸಂವಿಧಾನದ ಪ್ರಸ್ತಾವನೆ ಪಠಣೆ: ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್!

9/11 ಮಾದರಿಯಲ್ಲೇ ಇಸ್ರೇಲ್ ಧ್ವಂಸಕ್ಕೆ ಸಂಚು..! ಫ್ಲೈದುಬೈ ಏರ್‌ಲೈನ್ಸ್ ಸೇರಿದ್ದೇ ಆ ಕ್ರೂರ ಉದ್ದೇಶಕ್ಕಾಗಿ; ಸತ್ಯ ಬಾಯಿಬಿಟ್ಟ ಕಿಲ್ಲರ್ ಪೈಲಟ್ ಹಮಾಮ್..!