ನವದೆಹಲಿ: ಹಿಮಾಚಲ ಪ್ರದೇಶದ ಲಹೌಲ್-ಸ್ಪಿಟಿ ಜಿಲ್ಲೆಯಲ್ಲಿ ಸದ್ಯದಲ್ಲೇ ಕ್ರಿಕೆಟ್ ಮೈದಾನವೊಂದು ನಿರ್ಮಿತವಾಗಲಿದ್ದು, ಇದು ವಿಶ್ವದ ಅತಿ ಎತ್ತರದ ಕ್ರಿಕೆಟ್ ಅಂಗಣ ಎಂಬ ಖ್ಯಾತಿಗೆ ಪಾತ್ರವಾಗಲಿದೆ.
ಈ ಕ್ರೀಡಾಂಗಣ ಸಮುದ್ರ ಮಟ್ಟಕ್ಕಿಂತ 3,048 ಮೀ.ಎತ್ತರದಲ್ಲಿ ನಿರ್ಮಿಸವಾಗಲಿದೆ. ಈ ಕ್ರೀಡಾಂಗಣದ ಸುತ್ತಮುತ್ತ ಬೆಟ್ಟ, ಕರೆರೆ ಹಾಗೂ ಚೀನಾಬ್ ನದಿ ಆವೃತಗೊಂಡಿದ್ದು, ಅತ್ಯಂತ ಸುಂದರ ಹಾಗೂ ಮನಮೋಹಕ ಮೈದಾನವಾಗುವ ನಿರೀಕ್ಷೆ ಇದೆ.
ಕಳೆದ 2 ವರ್ಷದಿಂದ ಈ ಕ್ರೀಡಾಂಗಣದ ಯೋಜನೆಗೆ ಪ್ರಕ್ರಿಯೆ ನಡೆಯುತ್ತಿದ್ದು, ಅಧಿಕಾರಿಗಳು ಜಿಲ್ಲಾ ಸಂಸ್ಥೆಗೆ ಕಾಮಕಾರಿ ಆರಂಭಿಸಲು ಅನುಮತಿ ನೀಡಿದ್ದಾರೆ. ಆದರೆ ಎರಡು ಜಿಲ್ಲಾ ಸಂಸ್ಥೆಗಳು ಈ ಕ್ರೀಡಾಂಗಣದ ನಿರ್ಮಾಣ ಮಾಡಲಿದ್ದು, ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ ಪರಿಧಿಗೆ ಬರುವುದಿಲ್ಲ. ಈ ಕ್ರೀಡಾಂಗಣದ ನಿರ್ಮಾಣಕ್ಕೆ ಬಿಸಿಸಿಐ ಹಾಗೂ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಆರ್ಥಿಕ ನೆರವು ನೀಡುತ್ತಿಲ್ಲ. ಹಾಗಾಗಿ ಈ ಕಾಮಗಾರಿಗೆ ಅಭಿಮಾನಿಗಳಿಂದ ದೇಣಿಗೆ ಸಂಗ್ರಹಿಸುವ ನಿರ್ಧಾರಕ್ಕೆ ಬರಲಾಗಿದೆ. ಜತೆಗೆ ಬಿಸಿಸಿಐನಿಂದ ಮತ್ತೆ ಆರ್ಥಿಕ ನೆರವು ಕೋರುವ ನಿರ್ಧಾರ ಕೈಗೊಳ್ಳಲಾಗಿದೆ.