ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ವಿಶ್ವ ಆರ್ಚರಿ: ಫೈನಲ್ ಗೆ ರಜತ್ ಚೌಹಾಣ್

ಅತ್ಯುತ್ತಮ ಪ್ರದರ್ಶನ ನೀಡಿದ ಭಾರತದ ಆರ್ಚರಿ ಪಟು ರಜತ್ ಚೌಹಾಣ್, ವಿಶ್ವ ಆರ್ಚರಿ ಚಾಂಪಿಯನ್‍ಶಿಪ್ ನ ಸೆಮಿಫೈನಲ್‍ಗೆ ಪ್ರವೇಶಿಸಿದ್ದು ಕನಿಷ್ಠ ಬೆಳ್ಳಿ...

ರಜತ್ ಚೌಹಾಣ್
Vishwanath S
Updated On : 31 Jul 2015, 11:44 am

ಕೋಪನ್‍ಹೆಗನ್: ಅತ್ಯುತ್ತಮ ಪ್ರದರ್ಶನ ನೀಡಿದ ಭಾರತದ ಆರ್ಚರಿ ಪಟು ರಜತ್ ಚೌಹಾಣ್, ವಿಶ್ವ ಆರ್ಚರಿ ಚಾಂಪಿಯನ್‍ಶಿಪ್ ನ ಸೆಮಿಫೈನಲ್‍ಗೆ ಪ್ರವೇಶಿಸಿದ್ದು ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿಕೊಂಡಿದ್ದಾರೆ.

ಗುರುವಾರ ನಡೆದ ಪುರುಷರ ಕಾಂಪೌಂಡ್ ವಿಭಾಗದಲ್ಲಿ ರಜತ್ ಅಂತಿಮ ಸುತ್ತಿಗೆ ಅರ್ಹತೆ ಪಡೆದರು. 2014ರ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದ ರಜತ್, ಕೊಲಂಬಿಯಾದ ಕ್ಯಾಮಿಲೊ ಕಾರ್ಡೊನಾ ಅವರನ್ನು 14-31-38 ಅಂಕಗಳ ಅಂತರದಿಂದ ಗೆಲುವು ಮಣಿಸಿದರು.

ರಜತ್ ಶನಿವಾರ ನಡೆಯಲಿರುವ ಅಂತಿಮ ಸುತ್ತಿನ ಪಂದ್ಯದಲ್ಲಿ ಸ್ಥಳೀಯ ಆಟಗಾರ ಸ್ಟೀಫನ್ ಹನ್ಸೆನ್ ವಿರುದ್ಧ ಸೆಣಸಲಿದ್ದಾರೆ. ಇನ್ನು ಮಹಿಳೆಯರ ರಿಕರ್ವ್ ವಿಭಾಗದಲ್ಲಿ ಲಕ್ಷ್ಮಿರಾಣಿ ಮಜ್ಹಿ ಕಂಚಿನ ಪದಕದ ಸುತ್ತಿಗೆ ಪ್ರವೇಶಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement