ಕ್ರೀಡೆ

ಸೋಲಿನ ಭೀತಿಯಲ್ಲಿ ಪೂಜಾರ ಪಡೆ

Rashmi Kasaragodu

ಚೆನ್ನೈ: ಮೊದಲ ಇನ್ನಿಂಗ್ಸ್‍ನಲ್ಲಿ ಅನುಭವಿಸಿದ್ದ ಬ್ಯಾಟಿಂಗ್  ವೈಫಲ್ಯವನ್ನು ಮೆಟ್ಟಿ ನಿಲ್ಲುವಲ್ಲಿ  ವಿಫಲವಾದ ಆತಿಥೇಯ ಭಾರತ ಎ ತಂಡ, ಪ್ರವಾಸಿ ಆಸ್ಟ್ರೇಲಿಯಾ ಎ ತಂಡದ ವಿರುದ್ಧ ನಡೆಯುತ್ತಿರುವ ಎರಡನೇ ಹಾಗೂ ಅಂತಿಮ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ನೋಲಿನ ಭೀತಿಗೆ ಸಿಲುಕಿದೆ.

ಚೇಪಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಶುಕ್ರವಾರದಂದು  ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ  83 ಓವರ್ಗಳಲ್ಲಿ 6 ವಿಕೆಟ್ಗೆ  267 ರನ್ ಮಾಡಿರುವ ಭಾರತ ಎ ತಂಡ ಆ ಮೂಲಕ  53 ರನ್ ಗಳ ಅಲ್ಪ ಮುನ್ನಡೆ ಕಂಡಿದೆ.

ಶನಿವಾರ ಪಂದ್ಯದ ಕೊನೇ ದಿನವಾಗಿದ್ದು ಪ್ರವಾಸಿಗರು ಗೆಲುವಿನ ಕನಸು ಹೊತ್ತಿದ್ದರೆ, ಉಳಿದ ನಾಲ್ಕು ವಿಕೆಟ್ ಗಳಿಂದ ಇನ್ನಷ್ಟು ರನ್ ಕಲೆಹಾಕಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಅವಕಾಶಕ್ಕಾಗಿ ಪೂಜಾರ ಪಡೆ
ಶ್ರಮಿಸಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ದಿನದಾಟದ ಅಂತ್ಯಕ್ಕೆ ಬಾಬಾ ಅಪರಾಜಿತ್ (28) ಮತ್ತು ಕರ್ನಾಟಕದ ಶ್ರೇಯಸ್ ಗೋಪಾಲ್ (0) ಕ್ರೀಸ್‍ನಲ್ಲಿದ್ದರು. ಈ ಈರ್ವರು ಆಟಗಾರರು ತೋರುವ ಪ್ರದರ್ಶನದ ಮೇಲೆ ಪಂದ್ಯದ ಫಲಿತಾಂಶ
ನಿರ್ಧಾರವಾಗಲಿದೆ.
ಮತ್ತೆ ತಡವರಿಸಿದ ಬ್ಯಾಟಿಂಗ್: ಇನ್ನು ಪಂದ್ಯದ ಎರಡನೇ ದಿನದಂದು 9 ವಿಕೆಟ್‍ಗೆ 329 ರನ್ ಗಳಿಸಿದ್ದ ಆಸ್ಟ್ರೇಲಿಯಾ `ಎ'ತಂಡ, ಶುಕ್ರವಾರ ಆಟ ಮುಂದುವರೆಸಿ 20 ರನ್ ಗಳನ್ನು ಕಲೆಹಾಕುವುದರೊಂದಿಗೆ  107.5 ಓವರ್ ಗಳಲ್ಲಿ 349ಕ್ಕೆ ಆಲೌಟ್ ಆಯಿತು. ಬಳಿಕ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ಮತ್ತೆ ಸ್ಥಿರ ಪ್ರದರ್ಶನದ ಕೊರತೆಯಿಂದ ಕಂಗೆಟ್ಟಿತು.ವಿರಾಟ್ ಕೊ ಹ್ಲಿ (45) ಅಭಿನವ್ ಮುಕುಂದ್ (59) ಕರುಣ್  ನಾಯರ್ (31) ಶ್ರೇಯಸ್ ಅಯ್ಯರ್ (49) ಮತ್ತು ನಮನ್ ಓಜಾ 30 ರನ್ ಗಳಿಸಿ ಔಟಾದರು.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ`ಎ' ಮೊದಲ ಇನ್ನಿಂಗ್ಸ್ 107.5 ಓವರ್‍ಗಳಲ್ಲಿ 349, ಭಾರತ `ಎ' ಎರಡನೇ ಇನ್ನಿಂಗ್ಸ್ 83 ಓವರ್‍ಗಳಲ್ಲಿ 6 ವಿಕೆಟ್‍ಗೆ
267 (ಅಭಿನವ್ 59, ಕೊಹ್ಲಿ 45, ಶ್ರೇಯಸ್ ಐಯ್ಯರ್ 49; ಸ್ಟೀಫನ್ ಒ'ಕೇಫಿ 83ಕ್ಕೆ 3)

SCROLL FOR NEXT