ನವದೆಹಲಿ: ಭಾರತದ ಕುಸ್ತಿಪಟುಗಳು ಇಟಲಿಯ ಸಸ್ಸಾರಿ ನಗರದಲ್ಲಿ ನಡೆದ ಅಂತಾರಾಷ್ಟ್ರೀಯ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ 8 ಚಿನ್ನದ ಪದಕಗಳು ಒಳಗೊಂಡಂತೆ ಒಟ್ಟು 9 ಪದಕಗಳನ್ನು ಗೆದ್ದುಕೊಳ್ಳುವ ಮೂಲಕ ಅಪೂರ್ವ ಸಾಧನೆ ಮಾಡಿದ್ದಾರೆ.
ಭರವಸೆಯ ಕುಸ್ತಿಪಟುಗಳಾದ ಸೋನು (61ಕೆ.ಜಿ.), ಸೋಮವೀರ್ (86ಕೆ.ಜಿ.), ಮೌಸಮ್ ಖತ್ರಿ (97 ಕೆ.ಜಿ) ಮತ್ತು ಹಿತೇಂದರ್ (125 ಕೆ.ಜಿ.) ಅವರು ತಮ್ಮ ಪ್ರತ್ಯೇಕ ತೂಕದ
ವಿಭಾಗಗಳಲ್ಲಿ ಚಿನ್ನದ ಪದಕ ಜಯಿಸಿದರು.
ಅಮಿತ್ ಕುಮಾರ್ (57ಕೆ.ಜಿ), ಒಲಿಂಪಿಕ್ಸ್ ಪದಕದ ಖ್ಯಾತಿಯ ಯೋಗೇಶ್ವರ್ ದತ್ (65ಕೆ.ಜಿ.), ಪ್ರವೀಣ್ ರಾಣಾ (70ಕೆ.ಜಿ.), ನರಸಿಂಗ್ ಯಾದವ್ (74ಕೆ.ಜಿ.) ವಿವಿಧ ವಿಭಾಗಗಳಲ್ಲಿ ಸ್ವರ್ಣ ಪದಕ ಸಂಪಾದಿಸಿದ್ದರು. ಪುರುಷರ ಫ್ರೀಸ್ಟೈಲ್ ಸ್ಪರ್ಧೆಯಲ್ಲಿಯೇ ಭಾರತಕ್ಕೆ ಚಿನ್ನ ಲಭಿಸಿದವು. ಈ ಮಧ್ಯೆ ರಜನೀಶ್ 65 ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ ಕಂಚಿನ ಪದಕಕ್ಕೆ ಸಮಾಧಾನಗೊಂಡರು.