ವಿರಾಟ್ ಕೊಹ್ಲಿ, ವಿಜಯ್ ಮಲ್ಯ 
ಕ್ರೀಡೆ

ಯುಬಿಯಿಂದ ರು. 170 ಕೋಟಿ ಮೊತ್ತ ಆರ್‍ಸಿಬಿಗೆ?

ಮೂರು ವರ್ಷಗಳ ಹಿಂದೆ ಉದ್ಯಮಿ ವಿಜಯ್ ಮಲ್ಯ ಅವರು, ತಮ್ಮ ಒಡೆತನದಲ್ಲಿದ್ದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್(ಯುಎಸ್ಎಲ್)ನ ಖಾತೆಯಲ್ಲಿದ್ದ...

ನವದೆಹಲಿ: ಮೂರು ವರ್ಷಗಳ ಹಿಂದೆ ಉದ್ಯಮಿ ವಿಜಯ್ ಮಲ್ಯ ಅವರು, ತಮ್ಮ ಒಡೆತನದಲ್ಲಿದ್ದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್(ಯುಎಸ್ಎಲ್)ನ ಖಾತೆಯಲ್ಲಿದ್ದ ಸುಮಾರು ರು. 170 ಕೋಟಿಯಷ್ಟು ಹಣವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‍ಸಿಬಿ) ತಂಡದ ಖಾತೆಗೆ ವರ್ಗಾಯಿಸಿದ್ದರೆಂದು ಡಿಎನ್‍ಎ ವರದಿ ಮಾಡಿರುವುದಾಗಿ ಖಾಸಗಿ ಚಾನೆಲ್ ಒಂದು ಹೇಳಿದೆ.

ಯುಎಸ್‍ಎಲ್‍ನಲ್ಲಿದ್ದ ಆರ್‍ಸಿಬಿಯ ಷೇರುಗಳಿಗೆ ನೀಡಬೇಕಿದ್ದ ಲಾಭಾಂಶದ ರೂಪದಲ್ಲಿ ಈ ಹಣದ ವರ್ಗಾವಣೆ ನಡೆದಿತ್ತು. 2011ರ ಮಾ. 11ರಂದು ಯುಬಿಯ ಷೇರುಗಳನ್ನು ಆರ್‍ಸಿಬಿ ಪಡೆದಿತ್ತು. ಪ್ರತಿ ಷೇರಿನ ಬೆಲೆ ರು. 10ನಂತೆ ಷೇರುಗಳನ್ನು ಖರೀದಿಸಲಾಗಿತ್ತು.

ನಂತರ, ಯುಎಸ್ಎಲ್ ನ ಲಾಭಾಂಶದಲ್ಲಿ ಪ್ರತಿ ಷೇರ್ ಗೆ ರು. 3,62,240 ಲೆಕ್ಕಾಚಾರದಲ್ಲಿ ಆರ್‍ಸಿಬಿ ಖಾತೆಗೆ ರು.170 ಕೋಟಿ ವರ್ಗಾಯಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಲೇಟ್ ಆದರೂ, ಸರಿಯಾದ ನಿರ್ಧಾರ: ರಾಜ್ಯ BJP ಉಸ್ತುವಾರಿ ರಾಧಾ ಮೋಹನದಾಸ್ ಬದಲಾವಣೆಗೆ 2 ಕಾರಣ ನೀಡಿದ ಯತ್ನಾಳ್

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ನಿತ್ಯ 4,000 ಕ್ಯೂಸೆಕ್ ನೀರು ಬಿಡಲು CWRC ಸೂಚನೆ; CM ಡಿಕೆಶಿ ಹೇಳಿದ್ದೇನು?

ಕೋಲಾರ: ಚೆನ್ನೈ - ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ: ಮೂವರು ಸಾವು, ಇಬ್ಬರ ಸ್ಥಿತಿ ಗಂಭೀರ!

ಸಂಘರ್ಷ ಹಿಂದೂ ಮಹಾಸಾಗರವನ್ನೂ ತಲುಪಬಹುದು: ಮಧ್ಯಪ್ರಾಚ್ಯ ಯುದ್ಧ ವಿಸ್ತರಣೆ ಸುಳಿವು ನೀಡಿದ ಇರಾನ್; ಭಾರತದ ಇಂಧನ-ಸಾಗರ ವ್ಯಾಪಾರಕ್ಕೆ ಹೆಚ್ಚಿದ ಆತಂಕ..!

ಪತ್ನಿಯ ಕುಟುಂಬದವರಿಗೆ ಅವಹೇಳನಕಾರಿ ಸಂದೇಶ ಕಳುಹಿಸುವುದು ಮಾನಸಿಕ ಕ್ರೌರ್ಯ; ವಿಚ್ಛೇದನಕ್ಕೆ ಛತ್ತೀಸ್‌ಗಢ ಹೈಕೋರ್ಟ್ ಅನುಮತಿ