ಕ್ರೀಡೆ

ಪಾಕಿಸ್ತಾನ ತಂಡದಿಂದ ಅಜ್ಮಲ್‍ಗೆ ಕೊಕ್, ಶೆಹಜಾದ್ ವಾಪಸ್

Mainashree

ಕರಾಚಿ: ಮುಂಬರುವ ಶ್ರೀಲಂಕಾ ಟೆಸ್ಟ್ ಕ್ರಿಕೆಟ್ ಪ್ರವಾಸಕ್ಕಾಗಿ 15 ಸದಸ್ಯರ ಪಾಕಿಸ್ತಾನ ತಂಡವನ್ನು ಬುಧವಾರ ಪ್ರಕಟಿಸಲಾಗಿದೆ. ಆಫ್ ಸ್ಪಿನ್ನರ್ ಸಯೀದ್ ಅಜ್ಮಲ್ ಅವರನ್ನು ಕೈಬಿಡಲಾಗಿದ್ದು, ಅಹ್ಮದ್ ಶೆಹಜಾದ್, ಶಾನ್ ಮಸೂದ್ ಮತ್ತು ಎಹಸಾನ್ ಆದಿಲ್ ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ತಂಡ ಪ್ರತಿನಿಧಿಸಿದ್ದ ಅಜ್ಮಲ್ ಗೆ ಕೊಕ್ ನೀಡಲು ಆಯ್ಕೆದಾರರು ನಿರ್ಧರಿಸಿದ್ದಾರೆ. ಈ ಮಧ್ಯೆ 2015ರ ವಿಶ್ವಕಪ್ ಪಂದ್ಯಾವಳಿ ನಂತರ ಅಶಿಸ್ತಿನ ಕಾರಣಕ್ಕೆ ಟೆಸ್ಟ್ ಹಾಗೂ ಏಕದಿನ ಈ ಎರಡೂ ಮಾದರಿಗಳಿಂದ ಶೆಹಜಾದ್ ಅವರನ್ನು ಹೊರಗಿಡಲಾಗಿತ್ತು. ಬಳಿಕ ಜಿಂಬಾಬ್ವೆ ವಿರುದ್ಧದ  ಸರಣಿಗೆ ಅವರನ್ನು ಆಯ್ಕೆಡಲಾಗಿತ್ತಾದರೂ, ಬೆಂಚ್ ಆಟಗಾರರಾಗಿಯೇ ಉಳಿದುಕೊಂಡಿದ್ದರು.
ಪಾಕಿಸ್ತಾನ ಟೆಸ್ಟ್ ತಂಡದ ಪ್ರತಿಭಾನ್ವಿತ ಆಟಗಾರರಾಗಿರುವ ಶೆಹಜಾದ್‍ಗೆ ಒಂದು ಅವಕಾಶ ನೀಡುವ ಉದ್ದೇಶದಿಂದ ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆ ಮಾಡಲಾಗಿದೆ ಎಂದು ಮುಖ್ಯ ಆಯ್ಕೆದಾರ ಹರೂನ್ ರಶೀದ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಲಿವೆ. ಮೊದಲ ಟೆಸ್ಟ್ ಪಂದ್ಯ ಜೂನ್ 17ರಿಂದ ಗಾಲೆಯಲ್ಲಿ ಆರಂಭವಾಗಲಿದೆ. ಇದಾದ ಬಳಿಕ ಐದು ಪಂದ್ಯಗಳ ಏಕದಿನ ಸರಣಿ ಹಾಗೂ ಎರಡು ಪಂದ್ಯಗಳ ಟಿ-20 ಸರಣಿ ನಡೆಯಲಿವೆ.
ಪಾಕಿಸ್ತಾನ ತಂಡ: ಮೊಹಮ್ಮದ್ ಹಫೀಜ್, ಅಹ್ಮದ್ ಶೆಹಜಾದ್, ಶಾನ್ ಮಸೂದ್, ಅಜರ್ ಅಲಿ, ಮಿಸ್ಬಾ-ಉಲ್-ಹಕ್ (ನಾಯಕಿ), ಯೂನಿಸ್ ಖಾನ್, ಅಸಾದ್ ಶಫೀರ್, ಹ್ಯಾರಿಸ್ ಸೊಹೇಲ್, ಸರ್ಫರಾಜ್ ಅಹ್ಮದ್ (ವಿಕೆಟ್ ಕೀಪರ್), ಯಾಸಿರ್ ಶಾ, ಜುಲ್ಫೀಕರ್ ಬಬರ್, ವಾಹಬ್ ರಿಯಾಜ್, ಜುನೈದ್ ಖಾನ್, ಇಮ್ರಾನ್ ಖಾನ್, ಎಹಸಾನ್ ಆದಿಲ್.

SCROLL FOR NEXT