ಕೋಲ್ಕತ್ತ: ಪೋಲಿಸ್ ಮೇಲೆ ಹಲ್ಲೆ ನಡೆಸಿದ್ದಕ್ಕೆ ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಅವರ ಅಪ್ರಾಪ್ತ ಮೊಮ್ಮಗ ಮತ್ತು ಅವರ ಕಾರ್ ಚಾಲಕನನ್ನು ಬಂಧಿಸಲಾಗಿದೆ. ಬಾಲಕನನ್ನು ಬಾಲಾಪರಾಧ ನ್ಯಾಯಾಲಯ ಸಮಿತಿಯ ಮುಂದೆಯೂ ಚಾಲಕನನ್ನು ನ್ಯಾಯಾಂಗ ಬಂಧನಕ್ಕೂ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಲುಗಡೆಯಲ್ಲದ ಪ್ರದೇಶದಲ್ಲಿ ಆದಿತ್ಯ ಮತ್ತು ಅವನ ಚಾಲಕ ಕಾರ್ ನಿಲ್ಲಿಸಿದ್ದರಿಂದ ಸಂಚಾರಿ ಪೊಲೀಸರು ತಡೆದಿದ್ದಕ್ಕೆ ಪೂರ್ವ ಮೆಟ್ರೊಪಾಲಿಟನ್ ಬೈಪಾಸ್ ನಲ್ಲಿ ಪೋಲೀಸರ ಮೇಲೆ ಬುಧವಾರ ರಾತ್ರಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
"ಆದಿತ್ಯ ಅಪ್ರಾಪ್ತನಾಗಿರುವುದರಿಂದ ನಾವು ಅವನನ್ನು ಬಾಲಾಪರಾಧ ನ್ಯಾಯಾಲಯ ಸಮಿತಿಗೆ ಗುರುವಾರ ಒಪ್ಪಿಸಿದ್ದೇವೆ. ಅವರು ಈ ಘಟನೆಯ ಬಗ್ಗೆ ವರದಿ ಕೇಳಿದ್ದಾರೆ" ಎಂದು ಪೋಲಿಸ್ ಉಪಮಹಾನಿರ್ದೇಶಕ ಸಂತೋಶ್ ಪಾಂಡೆ ತಿಳಿಸಿದ್ದಾರೆ. ಆದಿತ್ಯ ೧೦ನೆಯ ತರಗತಿಯ ವಿದ್ಯಾರ್ಥಿ.
ಚಾಲಕ ಜಾಕಿರ್ ಹುಸೇನ್ ಅವರನ್ನು ಜೂನ್ ೧೭ರವರೆಗೆ ನ್ಯಾಯಂಗ ಬಂಧನಕ್ಕೆ ಬಶಪಡಿಸಲಾಗಿದೆ.
"ನಿಲುಗಡೆ ನಿಷೇಧಿಸಲಾಗಿರುವ ಪ್ರದೇಶದಲ್ಲಿ ಕಾರು ನಿಲ್ಲಿಸಿದ್ದಕ್ಕೆ ಕ್ರಮ ಕೈಗೊಳ್ಳಲು ಪೊಲೀಸ ಮುಂದಾದಾಗ ಅವರ ಮೇಲೆ ಹಲ್ಲೆ ಮಾಡಿದ್ದಾರೆ" ಎಂದು ಪಾಂಡೆ ತಿಳಿಸಿದ್ದಾರೆ.