ಅಮೆರಿಕ: ಅಗತ್ಯಕ್ಕಿಂತ ಹೆಚ್ಚಿನ ಹಣ ಕೈ ತುಂಬಿದ್ರೆ, ಏನು ಮಾಡೋದು .ಯಾವ ರೀತಿ ಖರ್ಚು ಮಾಡೋದು ಎನ್ನೋ ಯೋಚನೆಗೆ ಶತಮಾನದ ಬಾಕ್ಸಿಂಗ್ ವೀರ ಎಫ್ ಎಂ ಮೇ ವೆದರ್ ದಾರಿ ತೋರಿಸಿಕೊಟ್ಟಿದ್ದಾರೆ. ಹಣವನ್ನು ಹೇಗೆ ಖರ್ಚು ಮಾಡಬಹುದು ಎಂದು ತಿಳಿಸಿಕೊಟ್ಟಿದ್ದಾರೆ.
ಶತಮಾನದ ಬಾಕ್ಸರ್ ಎಫ್ ಎಂ ಮೇ ವೆದರ್ ವಿಶ್ವದಲ್ಲೇ ಅತ್ಯಂತ ದುಬಾರಿ ಕಾರುಗಳನ್ನು ಹೊಂದಿರುವ ಕ್ರೀಡಾಪಟು ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಲಾಸ್ ವೆಗಾಸ್ ನಲ್ಲಿ ನಡೆದ ಶತಮಾನದ ಬಾಕ್ಸಿಂಗ್ ಪಂದ್ಯದಲ್ಲಿ ಎದುರಾಳಿಗೆ ಮಣ್ಣು ಮುಕ್ಕಿಸಿ, 120 ಮಿಲಿಯನ್ ಪೌಂಡ್ ಮೊತ್ತವನ್ನು ಜೇಬಿಗಿಳಿಸಿಕೊಂಡ ಮೈಮಿ 4.6ಮಿಲಿಯನ್ ಪೌಂಡ್ ಮೊತ್ತದ ವಿಶ್ವದ ಅತ್ಯಂತ ದುಬಾರಿ ಕಾರುಗಳನ್ನು ಖರೀದಿಸಿದ್ದಾನೆ.
ನಿರೀಕ್ಷೆಗಿಂತ ಹೆಚ್ಚು ಹಣ ಹರಿದು ಬಂದರೆ ನೆಮ್ಮದಿಗಿಂತ ಹಣ ಖರ್ಚು ಮಾಡುವುದೇ ದೊಡ್ಡ ತಲನೋವು. ಇಂಥ ತಲೆನೋವಿನಿಂದ ಬಚವಾಗುವ ಉದ್ದೇಶದಿಂದ ಮೈಮಿ ಎರಡು ರೋಲ್ಸ್ ರಾಯ್ಸ್, ಮರ್ಸಿಡಿಸ್ ಮೆಬ್ಯಾಕ್, ಮರ್ಸಿಡಿಸ್ ಜಿ-63, ಎಎಂಜಿ ವಿ8 ಬಿಟರ್ಬೊ, ಅವೆಂಟೆಂಡರ್ ಹೆಲ್ಪಿ ಮತ್ತಿತರ ದುಬಾರಿ ಕಾರುಗಳನ್ನು ಖರೀದಿಸಿದ್ದಾನೆ. ಕೈ ತುಂಬಾ ಹಣ ಬಂದ ಕೂಡಲೇ ಶಾಪಿಂಗ್ ಮಾಡಲು ಹೊರಟ ಮೈಮಿ ವಿಶ್ವದ ಅತ್ಯಂತ ದುಬಾರಿ 100 ಕಾರುಗಳನ್ನು ಪರಿಶೀಲಿಸಿ ಅವುಗಳಲ್ಲಿ 10 ಕಾರುಗಳನ್ನು ಖರೀದಿಸಿದ್ದಾನೆ ಎಂದು ಅಮೆರಿಕಾದ ಡೈಲಿ ಮೇಲ್ ಪತ್ರಿಕೆ ವರದಿ ಮಾಡಿದೆ.
ಮೈಮಿ ಖರೀದಿಸಿರುವ 10 ಕಾರುಗಳು ಕೂಡ ಬಿಳಿ ಬಣ್ಣದ್ದವಾಗಿರುವುದು ಮತ್ತೊಂದು ವಿಶೇಷ.