ಜಕಾರ್ತ: ಇಂಡೋನೇಷಿಯನ್ ಓಪನ್ ಟೂರ್ನಿಯಿಂದ ಭಾರತದ ಭರವಸೆಯ ಶಟ್ಲರ್ ಪರುಪಳ್ಳಿ ಕಶ್ಯಪ್ ಹೊರಬಿದ್ದಿದ್ದಾರೆ.
ವಿಶ್ವದ ನಂಬರ್ ಒನ್ ಆಟಗಾರ ಚೀನಾದ ಚೆನ್ ಲಾಂಗ್ ವಿರುದ್ಧ ಗೆದ್ದು, ಇಂಡೋನೇಷಿಯನ್ ಓಪನ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಪರುಪಳ್ಳಿ ಕಶ್ಯಪ್ ಮೊಮೊಟ ಕೆಂಟೋ ವಿರುದ್ಧ ಸೋತು ಟೂರ್ನಿಯಿಂದ ಹೊರಬಂದಿದ್ದಾರೆ.
ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಎಂಟನೇ ಶ್ರೇಯಾಂಕದ ಮೊಮೊಟ ಕೆಂಟೋ ವಿರುದ್ಧ ಒಂದು ಗಂಟೆ 11 ನಿಮಿಷಗಳ ಅವಧಿಯ ಜಿದ್ಧಾಜಿದ್ದಿನ ಸೆಣಸಾಟದಲ್ಲಿ ಸೋತ್ತಿದ್ದಾರೆ. ಕೆಂಟೋ 21-12, 17-21, 19-21 ಅಂತರದಿಂದ ಗೆಲವು ಸಾಧಿಸಿ ವಿಜಯದ ನಗೆ ಬೀರಿದರು. ಈ ಹಿಂದೆ ನಡೆದ ಸ್ಪರ್ಧೆಯಲ್ಲೂ ಕೆಂಟೋ, ಕಶ್ಯಪ್‌ರನ್ನು ಮಣಿಸಿ ಮುನ್ನಡೆದಿದ್ದರು.