ಕ್ರೀಡೆ

ದ್ರಾವಿಡ್ ಆಯ್ಕೆ ಅತ್ಯುತ್ತಮ: ಕೆವಿನ್

Mainashree

ನವದೆಹಲಿ: ಗೋಡೆ ಖ್ಯಾತಿಯ ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರನ್ನು ಭಾರತ ಎ ಮತ್ತು 19 ವರ್ಷದೊಳಗಿನ ತಂಡದ ಕೋಚ್ ಆಗಿ ನೇಮಕ ಮಾಡಿರುವ ಬಿಸಿಸಿಐ ನಿರ್ಧಾರ ಅತ್ಯುತ್ತಮ ಎಂದು ಇಂಗ್ಲೆಂಡ್ ತಂಡದ ಆಟಗಾರ ಕೆವಿನ್ ಪೀಟರ್ಸನ್ ಅಭಿಪ್ರಾಯಪಟ್ಟಿದ್ದಾರೆ.

ಭಾನುವಾರ ಟ್ವಿಟರ್‍ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿಕೊಂಡಿರುವ ಪೀಟರ್ಸನ್, ದ್ರಾವಿಡ್ ಅವರನ್ನು ಭಾರತ ಎ ಮತ್ತು 19 ವರ್ಷದೊಳಗಿನ ತಂಡದ ಕೋಚ್ ಆಯ್ಕೆ ಮಾಡಿರುವುದು ಅತ್ಯುತ್ತಮ. ಯುವ ಆಟಗಾರರು ಅವರಿಂದ ಕಲಿಯಲು ಸಾಕಷ್ಟು ಉತ್ಸುಕರಾಗಿರುತ್ತಾರೆ. ಅಲ್ಲದೆ ತಂಡದ ಡ್ರೇಸಿಂಗ್ ರೂಮ್ ನಲ್ಲಿನ ವಾತವರಣ ಅತ್ಯುತ್ತಮವಾಗಿರುತ್ತದೆ ಎಂದು ತಿಳಿಸಿದ್ದಾರೆ.

ದ್ರಾವಿಡ್ ತಮ್ಮ ಸ್ಥಿರ ಆಟದಿಂದ ಸಾಕಷ್ಟು ಗಮನ ಸೆಳೆದಿದ್ದರು. ಆಧುನಿಕ ಕ್ರಿಕೆಟ್‍ನ ತಜ್ಞನಾಗಿದ್ದಾರೆ. ವಿಶ್ವದಾದ್ಯಂತ ಅತ್ಯುತ್ತಮ ರನ್ ಗಳಿಸಿದ್ದಾರೆ. ಅವರೊಬ್ಬ ಪ್ರಬಲ ಎದುರಾಳಿಯಾಗಿದ್ದರು. ಬಿಸಿಸಿಐ ನಿರ್ಧಾರಕ್ಕೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ.

SCROLL FOR NEXT