ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

403 ರನ್‌ಗಳ ದಾಖಲೆ ಜೊತೆಯಾಟ ಆಡಿದ ಕರ್ನಾಟಕದ ದಾಂಡಿಗರು

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಡಿವಿಷನ್ ಲೀಗ್ ಪಂದ್ಯದ ವೇಳೆ ಪವನ್ ದೇಶಪಾಂಡೆ ಮತ್ತು ಅನಿರುದ್ಧ ಜೋಶಿ ಹೊಸ ದಾಖಲೆ...

ಪವನ್ ದೇಶಪಾಂಡೆ, ಅನಿರುದ್ಧ ಜೋಶಿ
Vishwanath S
Updated On : 9 Jun 2015, 4:03 am

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಡಿವಿಷನ್ ಲೀಗ್ ಪಂದ್ಯದ ವೇಳೆ ಪವನ್ ದೇಶಪಾಂಡೆ ಮತ್ತು ಅನಿರುದ್ಧ ಜೋಶಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಅಜೇಯ ದ್ವಿಶತಕಗಳನ್ನು ಭಾರಿಸಿದ ಇಬ್ಬರೂ ಬ್ಯಾಟ್ಸ್ ಮ್ಯಾನಗಳು 5ನೇ ವಿಕೆಟ್ ಗೆ 403 ರನ್ ಗಳ ದಾಖಲೆ ಜೊತೆಯಾಟವಾಡಿದ್ದಾರೆ.

ಕರ್ನಾಟಕ ಕ್ರಿಕೆಟ್ ಸಂಸ್ಥೆ ಆಶ್ರಯದಲ್ಲಿ ವಲ್ಚರ್ಸ್ ಕ್ರಿಕೆಟ್ ಕ್ಲಬ್ ಮತ್ತು ಸೋಷಿಯಲ್ ಕ್ರಿಕೆಟರ್ಸ್ ನಡುವಿನ 2 ದಿನಗಳ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು.

ಮೊದಲು ಬ್ಯಾಟ್ ಮಾಡಿದ ಸೋಷಿಯಲ್ ಕ್ರಿಕೆಟರ್ಸ್ ತಂಡ 327 ಗಳಿಸಿತ್ತು. ಈ ಮೊತ್ತವನ್ನು ಬೆನ್ನತ್ತಿದ ವಲ್ಚರ್ಸ್ 4 ವಿಕೆಟ್ ನಷ್ಟಕ್ಕೆ 458 ರನ್ ಗಳಿಸಿತು. ಮೊದಲಿಗೆ ಪ್ರಮುಖ ನಾಲ್ಕು ವಿಕೆಟ್ ಗಳನ್ನು ಕಳೆದುಕೊಂಡ ವಲ್ಚರ್ಸ್ ತಂಡ 55 ಗಳಿಸಿತು. ಈ ವೇಳೆ ತಂಡಕ್ಕೆ ಆಸೆಯಾದ ಪವನ್ ದೇಶಪಾಂಡೆ ಮತ್ತು ಅನಿರುದ್ಧ ಜೋಷಿ 5ನೇ ವಿಕೆಟ್'ಗೆ ಬರೋಬ್ಬರಿ 403 ರನ್'ಗಳ ಮುರಿಯದ ಜೊತೆಯಾಟ ಆಡಿದ್ದಾರೆ. ಇದು ಕರ್ನಾಟಕ ಪ್ರಥಮ ದರ್ಜೆ ಲೀಗ್ ಮಟ್ಟಿಗೆ ಹೊಸ ದಾಖಲೆಯಾಗಿದೆ.

ಸುನೀಲ್ ಜೋಷಿಯವರ ಸಂಬಂಧಿ ಅನಿರುದ್ಧ್ ಜೋಷಿ ಮಿಂಚಿನ ಗತಿಯಲ್ಲಿ ರನ್ ಪೇರಿಸಿ 199 ಎಸೆತಗಳಲ್ಲಿ ಅಜೇಯ 212 ರನ್ ಗಳಿಸಿದರೆ, 25 ವರ್ಷದ ಪವನ್ ದೇಶಪಾಂಡೆ 258 ಎಸೆತಗಳಲ್ಲಿ ಅಜೇಯ 204 ರನ್ ಗಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement