ಜೂ.11ರಿಂದ ಬೆಂಗಳೂರಿನಲ್ಲಿ ಲೂಯಿಸ್ ಫಿಲಪ್ ಕಪ್
ಪ್ರತಿಷ್ಠಿತ ಗಾಲ್ಫ್ ಟೂರ್ನಿಗಳ ಪೈಕಿ ಒಂದಾದ ಲೂಯಿಸ್ ಫಿಲಿಪ್ ಕಪ್ನ ನಾಲ್ಕನೇ ಆವೃತ್ತಿಯನ್ನು ಲೂಯಿಸ್ ಫಿಲಿಪ್ ಬೆಂಗಳೂರಿನಲ್ಲಿ...
ಬೆಂಗಳೂರು: ಪ್ರತಿಷ್ಠಿತ ಗಾಲ್ಫ್ ಟೂರ್ನಿಗಳ ಪೈಕಿ ಒಂದಾದ ಲೂಯಿಸ್ ಫಿಲಿಪ್ ಕಪ್ನ ನಾಲ್ಕನೇ ಆವೃತ್ತಿಯನ್ನು ಲೂಯಿಸ್ ಫಿಲಿಪ್ ಬೆಂಗಳೂರಿನಲ್ಲಿ ಆಯೋಜಿಸಿದೆ.
ಏಷ್ಯಾ ಟೂರ್ ಹಾಗೂ ಪ್ರೊಫೆಷನಲ್ ಗಾಲ್ಫ್ ಟೂರ್ ಆಫ್ ಇಂಡಿಯಾ, ಜ್ಯೋತಿ ರಾಂಧ್ವಾ, ಎಸ್ಎಸ್ಪಿ ಚೌರಾಸಿಯಾ, ರಾಹಿಲ್ ಗಂಗ್ಜಿ, ಗಗನಜಿತ್ ಭುಲ್ಲಾರ್ ಹಾಗೂ ರಷೀದ್ ಖಾನ್ರ ನೇತೃತ್ವದಲ್ಲಿ ನಾಲ್ಕನೇ ಆವೃತ್ತಿ ಆಯೋಜಿಸಲಾಗಿದ್ದು, ಪ್ರತಿಷ್ಠಿತ ವೃತ್ತಿಪರರ ಆಟಕ್ಕೆ ಸಾಕ್ಷಿಯಾಗಲಿದೆ.
ಬೆಂಗಳೂರಿನ ಕರ್ನಾಟಕ ಗಾಲ್ಫ್ ಅಸೋಸಿಯೇಷನ್ನಲ್ಲಿ ಜೂನ್ 11ರಿಂದ 13ರವರೆಗೆ ನಡೆಯುವ ಈ ಟೂರ್ನಿಯಲ್ಲಿ ಒಟ್ಟು ಏಳು ತಂಡಗಳು ಸ್ಪರ್ಧಿಸಲಿವೆ.