ಕ್ರೀಡೆ

ಕ್ರಿಕೆಟ್ ಗೆ ಮ್ಯಾಟ್ ಪ್ರಯರ್ ವಿದಾಯ

Shilpa D

ಇಂಗ್ಲೆಂಡ್ ತಂಡದ ಮಾಜಿ ವಿಕೆಟ್ ಕೀಪರ್ ಮ್ಯಾಟ್ ಪ್ರಯರ್ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಅವರು 33ನೇ ವಯಸ್ಸಿನಲ್ಲಿಯೇ ವಿದಾಯ ಹೇಳಬೇಕಾದ ಪರಿಸ್ಥಿತಿಗೆ ಸಿಲುಕಿದ್ದಾರೆ.

 ಈ ದಿನ ನನ್ನ ಪಾಲಿಗೆ ನೋವಿನ ದಿನ.  ಹೆಚ್ಚು ಪ್ರೀತಿಸುವ ಆಟದಿಂದ ದೂರ ಸರಿಯಬೇಕಾಗಿದೆ ಎಂದು ಪ್ರಯರ್ ಹೇಳಿದ್ದಾಗಿ ಇಸಿಬಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ. ಇಂಗ್ಲೆಂಡ್ ಪರ 79 ಟೆಸ್ಟ್ ಆಡಿರುವ ಅವರು 40.18ರ ಸರಾಸರಿಯಲ್ಲಿ 7 ಶತಕ ಮತ್ತು  28 ಅರ್ಧಶತಕ ಒಳಗೊಂಡ 4099 ರನ್ ಗಳಿಸಿದ್ದಾರೆ. ಅಜೇಯ ವಯಕ್ತಿಕ ಗರಿಷ್ಠ  ಮೊತ್ತವಾಗಿದೆ. ವಿಕೆಟ್ ಹಿಂದೆ 243 ಕ್ಯಾಚ್ ಪಡೆದು ಸ್ಟಂಪಿಂಗ್ ಮಾಡಿದ್ದಾರೆ.ಅಲ್ಲದೇ 68 ಏಕದಿನ ಪಂದ್ಯಗಳನ್ನಾಡಿ 40.18ರ ಸರಾಸರಿಯಲ್ಲಿ 1282 ರನ್ ಗಳಿಸಿದ್ದಾರೆ. ಇದರಲ್ಲಿ 3 ಕ್ಯಾಚ್ ಪಡೆದು 8 ಸ್ಟಂಪಿಂಗ್ ಮಾಡಿದ್ದಾರೆ. 10 ಟಿ-20 ಪಂದ್ಯಗಳಿಂದ 21.16 ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.





SCROLL FOR NEXT