ಶ್ರೀನಿವಾಸನ್- ವಿರಾಟ್ ಕೊಹ್ಲಿ(ಸಾಂದರ್ಭಿಕ ಚಿತ್ರ) 
ಕ್ರೀಡೆ

ವಿರಾಟ್ ಕೊಹ್ಲಿ ಭಾರತ ತಂಡದ ನಾಯಕರಾಗಲು ಶ್ರೀನಿವಾಸನ್ ಅಡ್ಡಗಾಲು ಹಾಕಿದ್ದರು!

ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಆಯ್ಕೆ ಸಮಿತಿ ನಿರ್ಧಾರದಲ್ಲಿ ಮಧ್ಯ ಪ್ರವೇಶಿಸದೇ ಇದ್ದಿದ್ದರೆ ವಿರಾಟ್ ಕೊಹ್ಲಿ 3 ವರ್ಷಗಳ ಹಿಂದೆಯೇ ನಾಯಕರಾಗಿರುತ್ತಿದ್ದರು.

ನವದೆಹಲಿ: ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಆಯ್ಕೆ ಸಮಿತಿ ನಿರ್ಧಾರದಲ್ಲಿ ಮಧ್ಯ ಪ್ರವೇಶಿಸದೇ ಇದ್ದಿದ್ದರೆ ವಿರಾಟ್ ಕೊಹ್ಲಿ  3  ವರ್ಷಗಳ ಹಿಂದೆಯೇ ಭಾರತ ಏಕದಿನ ತಂಡದ ನಾಯಕರಾಗಿರುತ್ತಿದ್ದರು ಎಂದು  ಬಿಸಿಸಿಐ ಆಯ್ಕೆ ಸಮಿತಿಯ ಮಾಜಿ ಸದಸ್ಯ ರಾಜಾ ವೆಂಕಟ್ ತಿಳಿಸಿದ್ದಾರೆ.

ಬಂಗಾಲಿಯ ಎಬೆಲಾ ಎಂಬ ಪತ್ರಿಕೆಯಲ್ಲಿ ತಮ್ಮ ಅಂಕಣದಲ್ಲಿ ಈ ಕುರಿತು  ಪ್ರಸ್ತಾಪ ಮಾಡಿರುವ  ವೆಂಕಟ್, 2011 ರ ಅಂತ್ಯ  ಹಾಗೂ 2012 ರ ಆರಂಭದ ಅವಧಿಯಲ್ಲಿ   ಭಾರತ ಆಸ್ಟ್ರೇಲಿಯಾ  ಪ್ರವಾಸ ಕೈಗೊಂಡಿತ್ತು. ಆ ಸಂದರ್ಭದಲ್ಲಿ  ಆಯ್ಕೆ ಸಮಿತಿಯ ಸಾಕಷ್ಟು ಸದಸ್ಯರು ನಾಯಕತ್ವವನ್ನು ವಿರಾಟ್ ಕೋಹ್ಲಿಗೆ ನೀಡುವ ಮೂಲಕ ತಂಡಕ್ಕೆ ಹೊಸ ರೂಪ ನೀಡುವ ನಿರ್ಧಾರಕ್ಕೆ ಬಂದಿದ್ದರು. ಆದರೆ ಆಗಿನ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಮಧ್ಯ ಪ್ರವೇಶದಿಂದ  ಈ ನಿರ್ಧಾರ ತೆಗೆದುಕೊಳ್ಳಲಾಗಲಿಲ್ಲ ಎಂದು  ತಿಳಿಸಿದ್ದಾರೆ.

ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್ ಸರಣಿಯಲ್ಲಿ 0  -3 ಅಂತರದ ಹಿನ್ನಡೆ  ಅನುಭವಿಸಿತ್ತು. ಆಡಿಲೇಡ್ ನಲ್ಲಿ ನಡೆ ಯಬೇಕಿದ್ದ ಅಂತಿಮ ಪಂದ್ಯಕ್ಕೂ ಮುನ್ನ ಆಯ್ಕೆ ಸಮಿತಿಯ ಇಬ್ಬರು ಸದಸ್ಯರಾದ ಮೊಹಿಂದರ್ ಅಮರ್ ನಾಥ್ ಮತ್ತು ನರೇಂದ್ರ ಹಿರ್ವಾನಿ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಿ ತಂಡದ ಪರಿಸ್ಥಿತಿ ಅವಲೋಕಿಸಿದ್ದರು. ತಂಡದಲ್ಲಿ ಒಗ್ಗಟ್ಟಿನ ಕೊರತೆ ಎದ್ದುಕಾಣುತ್ತಿತ್ತು.  ಹಾಗಾಗಿ ಏಕದಿನ ಸ ರಾಣಿಗೆ  ನೂತನ ನಾಯಕನ ಆಯ್ಕೆಗೆ ಚಿಂತನೆ  ನಡೆಸಲಾಗಿತ್ತು. ತಂಡಕ್ಕೆ ಸ್ಪೂರ್ತಿ ನೀಡಬಲ್ಲ ಆಟಗಾರ ಯಾರೆಂದು ನೋಡಿದಾಗ ಕೊಹ್ಲಿ ಈ ಸ್ಥಾನಕ್ಕೆ ಸೂಕ್ತ ಎಂದು ಭಾವಿಸಿದ್ದೆವು. ಆದರೆ ಶ್ರೀನಿವಾಸನ್ ಒಪ್ಪಿಗೆ ನೀಡಿರಲಿಲ್ಲ ಎಂದಿದ್ದಾರೆ.      

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!