ಫಾತುಲ್ಹಾ: ಸ್ಪಿನ್ ಮಾಂತ್ರಿಕರಾದ ರವಿಚಂದ್ರನ್ ಅಶ್ವಿನ್ ಹಾಗೂ ಹರ್ಭಜನ್ ಸಿಂಗ್ ಅವರ ಪ್ರದರ್ಶನದ ಬಗ್ಗೆ ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಭಾನುವಾರ ಮುಕ್ತಾಯಗೊಂಡ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯ ಡ್ರಾ ಆಗಿತ್ತು. ಆದರೂ ಈ ಪಂದ್ಯದಲ್ಲಿ ಮಿಂಚಿದ ಅಶ್ವಿನ್ ಐದು ವಿಕೆಟ್ ಕಬಳಿಸಿದರೆ, ಹರ್ಭಜನ್ ಸಿಂಗ್ ಮೂರು ವಿಕೆಟ್ ಪಡೆದಿದ್ದರು.ಇವರಿಬ್ಬರ ಪ್ರದರ್ಶನದ ಬಗ್ಗೆ ಪಂದ್ಯದ ನಂತರ ತೃಪ್ತಿ ವ್ಯಕ್ತಪಡಿಸಿದ ಕೊಹ್ಲಿ, ಪಂದ್ಯ ಡ್ರಾ ಆಗಿದ್ದಕ್ಕೆ ಬೇಸರವಿಲ್ಲ, ಆದರೆ ನಮ್ಮ ತಂಡದ ಬೌಲಿಂಗ್ ನನಗೆ ಹೆಚ್ಚು ತೃಪ್ತಿ ಕೊಟ್ಟಿದೆ. ಅದರಲ್ಲೂ ವಿಶೇಷವಾಗಿ ನಮ್ಮ ತಂಡದಲ್ಲಿನ ಸ್ಪಿನ್ ಅವಳಿಗಳಾದ ಅಶ್ವಿನ್ ಹಾಗೂ ಹರ್ಭಜನ್ ಸಿಂಗ್ ಅವರ ಸ್ಪಿನ್ ಮೋಡಿ ನನಗೆ ಖುಷಿ ಕೊಟ್ಟಿದೆ.
ಸೆಹ್ವಾಗ್ ಸ್ಥಾನ ಶಿಖರ್ ತುಂಬಬಲ್ಲರು: ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್ ಅವರ ಬ್ಯಾಟಿಂಗ್ ಪ್ರದರ್ಶನವನ್ನು ಹೊಗಳಿರುವ ನಾಯಕ ವಿರಾಟ್ ಕೊಹ್ಲಿ, ಧವನ್ ದಿಗ್ಗಜ ಆಟಗಾರ ಪ್ರದರ್ಶನವನ್ನು ಹೊಗಳಿರುವ ನಾಯಕ ವಿರಾಟ್ ಕೊಹ್ಲಿ, ಧವನ್ ದಿಗ್ಗಜ ಆಟಗಾರ ವಿರೇಂದ್ರ ಸೆಹವಾಗ್ ಅವರ ಸ್ಥಾನವನ್ನು ತುಂಬಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಶಿಖರ್ ಧವನ್ ಅವರ ಮೇಲೆ ನಾವು ನಂಬಿಕೆ ಇಟ್ಟಿದ್ದೇವೆ. ಅವರು ಕ್ರೀಸ್ ನಲ್ಲಿ ನಿಂತರೆ, ವಿರೇಂದ್ರ ಸೆಹವಾಗ್ ರೀತಿಯಲ್ಲಿ ತಂಡಕ್ಕೆ ಉತ್ತಮ ಕಾಣಿಕೆ ನೀಡುತ್ತಾರೆ. ಹಾಗಾಗಿ ಅವರು ಪಂದ್ಯದ ಒಂದು ಸೆಷನ್ ನಲ್ಲಿ ಫಲಿತಾಂಶ ಬದಲಿಸಬಲ್ಲರು. ಈ ಪಂದ್ಯದಲ್ಲಿ ಗಳಿಸಿರುವ ಆತ್ಮ ವಿಶ್ವಾಸವನ್ನು ಮುಂದಿನ ದಿನಗಳಲ್ಲಿನ ಸರಣಿಯಲ್ಲೂ ಮುಂದುವರಿಲುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.