ಕ್ರೀಡೆ

ಪವಾರ್ ಪುನಾರಾಯ್ಕೆ

Shilpa D

ಮುಂಬೈ: ಐಸಿಸಿ ಹಾಗೂ ಬಿಸಿಸಿಐನ ಮಾಜಿ ಅಧ್ಯಕ್ಷ ಶರದ್ ಪವಾರ್ ಅವರು ಮಹಾರಾಷ್ಟ್ರ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ಪುನಾರಾಯ್ಕೆಯಾಗಿದ್ದಾರೆ. ಅಧ್ಯಕ್ಷ ಪಟ್ಟಕ್ಕಾಗಿ ಬುಧವಾರ ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ ಅವರು, ತಮ್ಮ ಪ್ರತಿಸ್ಪರ್ಧಿ ವಿಜಯ್ ಪಾಟೀಲ್ ವಿರುದ್ಧ 27 ಮತಗಳ ಅಂತರದಲ್ಲಿ ಜಯಶಾಲಿಯದರು.

ಪವಾರ್ ಅವರಿಗೆ  172 ಮತ ಪ್ರಾಪ್ತಿಯಾದರೇ ಪಾಟೀಲ್ ಅವರಿಗೆ 145 ಮತಗಳು ಬಂದವು. ಎನ್ ಸಿಪಿ ಪಕ್ಷದ ಅಧ್ಯಕ್ಷರೂ ಆಗಿರುವ ಪವಾರ್ ಅವರ ವಿರುದ್ಧ ಚುನಾವಣೆಗೆ ನಿಂತಿದ್ದ ಪಾಟೀಲ್ ಅವರಿಗೆ ಶಿವಸೇನೆ ಪಕ್ಷದ ಬೆಂಬಲ ಸಿಕ್ಕಿದ್ದ ಹಿನ್ನೆಲೆಯಲ್ಲಿ ಅಧ್ಯಕ್ಷೀಯ ಚುನಾವಣೆ ರಾಜಕೀಯದ ರಂಗು ಪಡೆದಿತ್ತು. ಇದೀಗ ಪವಾರ್ ಅವರಿಗೆ ಪಟ್ಟ ಒಲಿದಿದೆ.

SCROLL FOR NEXT