ಸ್ಟಾವೆಂಜರ್(ನಾರ್ವೆ): ಮಾಜಿ ವಿಶ್ವ ಚಾಂಪಿಯನ್ ಭಾರತದ ಚೆಸ್ ತಾರೆ ವಿಶ್ವನಾಥನ್ ಆನಂದ್ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡುವಲ್ಲ ವಿಫಲವಾಗಿದ್ದು ಟೂರ್ನಿಯಲ್ಲಿ ಡ್ರಾ ಫಲಿತಾಂಶಕ್ಕೆ ತೃಪ್ತಿ ಪಟ್ಟಿದ್ದಾರೆ.ಮೊದಲ ಸುತ್ತಿನ ಪಂದ್ಯದಲ್ಲಿ ಆನಂದ್ ತಮ್ಮ ಎದುರಾಳಿ ಇಟಲಿಯ ಫ್ಯಾಭಿಯಾನೋ ಕರೌನಾ ವಿರುದ್ಧ ಡ್ರಾ ಸಾಧಿಸಿದ್ದಾರೆ.ಆನಂದ್ ವಿರುದ್ಧ ರಕ್ಷಣಾತ್ಮಕ ಆಟ ಪ್ರಯೋಗಿಸಿದ ಕರೌನೌ ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾದರು.