ಮುಂಬೈ: ಭಾರತ ರತ್ನ ಪ್ರಶಸ್ತಿ ಪಡೆದಿರುವ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಯಾವುದೇ ಉತ್ಪನ್ನಗಳ ಪ್ರಚಾರ ಮಾಡದಂತೆ ನಿರ್ದೇಶನ ನೀಡಬೇಕೆಂದು ಮುಂಬೈ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಕೆಯಾಗಿದೆ.
ಐಪಿಎಲ್ ಅರ್ಜಿಯ ವಿಚಾರಣೆ ನಡೆಸುವುದಾಗಿ ಮುಂಬೈ ಹೈಕೋರ್ಟ್ ತಿಳಿಸಿದೆ. ಇದೇ ವೇಳೆ ಭಾರತ ರತ್ನ ಪಡೆದವರು ಉತ್ಪನ್ನಗಳ ಪ್ರಚಾರ ಮಾಡುವ ಬಗ್ಗೆ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳಿವೆಯೇ ಎಂದು ಸಹಾಯಕ ಸಾಲಿಸಿಟರ್ ಜನರಲ್ ನ್ನು ಪ್ರಶ್ನಿಸಿದೆ.
ಮುಖ್ಯ ನ್ಯಾಯಮೂರ್ತಿ ಎ.ಎಂ ಖಾನ್ವಿಲ್ಕರ್ ಹಾಗೂ ನ್ಯಾ.ತ್ರಿವೇದಿ ದ್ವಿಸದಸ್ಯ ಪೀಠದಲ್ಲಿ ಪಿಐಎಲ್ ವಿಚಾರಣೆ ನಡೆಯುತ್ತಿದ್ದು, ಭಾರತದ ಪರಮೋಚ್ಛ ನಾಗರಿಕ ಪ್ರಶಸ್ತಿ ಭಾರತ ರತ್ನ ಸ್ವೀಕರಿಸಿದ ನಂತರವೂ ಸಚಿನ್ ತೆಂಡೂಲ್ಕರ್ ವಾಣಿಜ್ಯೋತ್ಪನ್ನಗಳ ಪ್ರಚಾರ ಮಾಡುತ್ತಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.
ಭಾರತ ತಂಡದ ಮಾಜಿ ಕ್ರಿಕೆಟಿಗ ಸಚಿನ್, ಪ್ರಸ್ತುತ ಸಾನ್ಯೊ ಬಿಪಿಎಲ್, ತೋಷಿಬಾ, ಪ್ರಕಾಶಕ ಭಾರತ, ಬೂಸ್ಟ್, ಎಂ.ಆರ್.ಎಫ್ 12 ಉತ್ಪನ್ನಗಳ ಪ್ರಚಾರ ಮಾಡುತ್ತಿದ್ದಾರೆ.