ಬಾಂಗ್ಲಾದೇಶ ತಂಡ 
ಕ್ರೀಡೆ

ಢಾಕಾದಲ್ಲಿ ಧೋನಿ ಹುಡುಗರ ಶವಾಸನ

ಇತ್ತ ಭಾರತದಲ್ಲಿ ಭಾನುವಾರ ಯೋಗ ದಿನಾಚರಣೆ ನಿಮಿತ್ತ ಎಲ್ಲರೂ ಯೋಗ ಮಾಡಿ ಬೆವರು ಹರಿಸಿದರೆ, ನೆರೆಯ ಬಾಂಗ್ಲಾದೇಶದಲ್ಲಿ ಆತಿಥೇಯರ ವಿರುದ್ಧ...

ಮೀರ್ಪುರ (ಬಾಂಗ್ಲಾದೇಶ): ಇತ್ತ ಭಾರತದಲ್ಲಿ ಭಾನುವಾರ ಯೋಗ ದಿನಾಚರಣೆ ನಿಮಿತ್ತ ಎಲ್ಲರೂ ಯೋಗ ಮಾಡಿ ಬೆವರು ಹರಿಸಿದರೆ, ನೆರೆಯ ಬಾಂಗ್ಲಾದೇಶದಲ್ಲಿ ಆತಿಥೇಯರ ವಿರುದ್ಧ ತಮ್ಮ ದ್ವಿತೀಯ ಏಕದಿನ ಪಂದ್ಯ ದಯನೀಯ ಸೋಲು ಕಂಡಿತು. ಈಗಾಗಲೇ ಸರಣಿಯ ಮೊದಲ ಪಂದ್ಯವನ್ನು ಸೋತಿದ್ದ ಭಾರತ, ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿತ್ತು. ಆದರೆ, ಇದರಲ್ಲಿ ಯಶಸ್ಸು ಕಾಣದೇ 6 ವಿಕೆಟ್‍ಗಳ ಸೋಲು ಕಂಡಿತು.

ಇಲ್ಲಿನ ಶೇರೆ ಬಾಂಗ್ಲಾ ಮೈದಾನದಲ್ಲಿ ಟಾಸ್ ಗೆದ್ದ ಭಾರತ ತಂಡ, ಮೊದಲು ಬ್ಯಾಟ್ ಮಾಡುವ ನಿರ್ಧಾರ ಕೈಗೊಂಡಿತು. ಆದರೆ, 44ನೇ ಓವರ್‍ನಲ್ಲಿ ಮಳೆ ಅಡ್ಡಿಪಡಿಸಿದ ಕಾರಣ, ಇತ್ತಂಡಗಳ ಓವರ್ ಮಿತಿಯನ್ನು 47 ರನ್‍ಗಳಿಗೆ ಇಳಿಸಲಾಗಿತ್ತು. ಬ್ಯಾಟಿಂಗ್ ಮುಂದುವರಿಸಿದ ಧೋನಿ ಪಡೆ, 45 ಓವರ್‍ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 200 ರನ್‍ಗಳ ಸಾಧಾರಣ ಮೊತ್ತ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾದೇಶ ತಂಡಕ್ಕೆ ಡಕ್‍ವರ್ತ್ ಲೂಯಿಸ್ ನಿಯಮದ ಪ್ರಕಾರ, 47 ಓವರ್‍ಗಳಲ್ಲಿ 199 ರನ್ ಪೇರಿಸುವ ಗುರಿ ನೀಡಲಾಯಿತು. ಇದನ್ನು ಬೆನ್ನಟ್ಟಿದ ಬಾಂಗ್ಲಾದೇಶ 38 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿ, ಗೆಲವಿನ ನಗೆ ಬೀರಿತು.
ಭಾರತ ನೀಡಿದ್ದ ಸವಾಲನ್ನು ಬೆನ್ನಟ್ಟಿದ ಬಾಂಗ್ಲಾದೇಶ, ಕೇವಲ 34 ರನ್‍ಗಳಿಗೆ ಆರಂಭಿಕ ತಮೀಮ್ ಇಕ್ಬಾಲ್ ಅವರನ್ನು ಕಳೆದುಕೊಂಡರೂ, ಎರಡನೇ ವಿಕೆಟ್‍ಗೆ ಜೋಡಿಯಾದ ಸೌಮ್ಯ ಸರ್ಕಾರ್ ಹಾಗೂ ಲಿಟ್ಟನ್ ದಾಸ್ 52 ರನ್ ಸೇರಿಸಿ, ಇನಿಂಗ್ಸ್‍ಗೆ ಚೇತರಿಕೆ ತಂದರು. ಆದರೆ, ತಂಡದ ಮೊತ್ತ 86 ರನ್ ಆಗಿದ್ದಾಗ ಸೌಮ್ಯ ಸರ್ಕಾರ್ ಅವರು ವಿಕೆಟ್ ಒಪ್ಪಿಸಿ ಹೊರನಡೆದರು. ಇದಾದ ನಂತರ ಕೆಲವೇ ನಿಮಿಷಗಳಲ್ಲಿ ಲಿಟ್ಟನ್ ದಾಸ್ ಅವರೂ ಪೆವಿಲಿಯನ್‍ನತ್ತ ಹೆಜ್ಜೆ ಹಾಕಿದರು.
ಆಗ, 4ನೇ ವಿಕೆಟ್‍ಗೆ ಜೊತೆಯಾಗಿದ್ದು ಮುಷ್ಫೀಕರ್ ರಹೀಂ ಹಾಗೂ ಶಕೀಬ್ ಅಲ್ ಹಸನ್. ಈ ಜೋಡಿ, 54 ರನ್‍ಗಳ ಜೊತೆಯಾಟವಾಡಿತು. ತಂಡದ ಮೊತ್ತ 152 ರನ್ ಆಗಿದ್ದಾಗ, ಮುಷ್ಫೀಕರ್ ಅವರು ಔಟಾದರು. ಆದರೆ, ಕ್ರೀಸ್‍ನಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಬೀಸಿದ ಶಕೀಬ್ ಅಲ್ ಹಸನ್, ಅಜೇಯ 51 ರನ್ (62 ಎಸೆತ, 5 ಬೌಂಡರಿ) ಗಳಿಸಿ, ತಂಡವನ್ನು ಗೆಲವಿನ ದಡ ಸೇರಿಸಿದರು. ಅವರ ಈ ಪ್ರಯತ್ನದಲ್ಲಿ ಸಬ್ಬೀರ್ ರಹಮಾನ್ (ಅಜೇಯ 22 ರನ್) ಉತ್ತಮ ಸಾಥ್
ನೀಡಿದರು.

ಬಾಂಗ್ಲಾದೇಶ ಸಾಧನೆ
ಭಾರತ ವಿರುದ್ಧ ಏಕದಿನ ಸರಣಿ ಗೆಲ್ಲುವ ಮೂಲಕ, ಬಾಂಗ್ಲಾದೇಶ ತನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ವಿರುದ್ಧ ಸರಣಿ ಗೆದ್ದ ಐತಿಹಾಸಿಕ ಸಾಧನೆ ಮಾಡಿದೆ. ಅಲ್ಲದೆ, ಐಸಿಸಿ ರ್ಯಾಂಕಿಂಗ್‍ನಲ್ಲಿ ಒಟ್ಟು 93 ಅಂಕ ಗಳಿಸಿ ಏಳನೇ ಸ್ಥಾನಕ್ಕೆ ಜಿಗಿದಿದೆಯಲ್ಲದೆ, 2017ರಲ್ಲಿ ಇಂಗ್ಲೆಂಡ್‍ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಆಡುವ ಅರ್ಹತೆಯನ್ನೂ ಪಡೆದುಕೊಂಡಿದೆ.

ಮುಸ್ತಫಿಜುರ್ ದಾಖಲೆ
ಭಾನುವಾರದ ಪಂದ್ಯದಲ್ಲಿ ಭಾರತ ತಂಡದ ಆರು ವಿಕೆಟ್ ಕಬಳಿಸಿ, ತಮ್ಮ ತಂಡದ ಗೆಲವಿನಲ್ಲಿ ಪ್ರಧಾನ ಪಾತ್ರ ವಹಿಸಿದ ಬಾಂಗ್ಲಾದೇಶ ತಂಡದ ಎಡಗೈ ವೇಗಿ, 19 ವರ್ಷ ವಯಸ್ಸಿನ ಮುಸ್ತಫಿಜುರ್ ರಹಮಾನ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ ಮೊದಲೆರಡೇ ಪಂದ್ಯಗಳಿಂದ ಒಟ್ಟು 11 ವಿಕೆಟ್ (ಮೊದಲ ಪಂದ್ಯದಲ್ಲಿ 5, ಎರಡನೇ ಪಂದ್ಯದಲ್ಲಿ 6) ಸಂಪಾದಿಸಿದ ವಿಶ್ವದ ಎರಡನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಹಿಂದೆ, ಜಿಂಬಾಬ್ವೆ ತಂಡ ಬ್ರಯಾನ್ ವಿಟೋರಿ ಸಹ ಪದಾರ್ಪಣೆಯ ಮೊದಲೆರಡು ಪಂದ್ಯಗಳಲ್ಲಿ ತಲಾ 5 ವಿಕೆಟ್ ಪಡೆದಿದ್ದರು.

ಸ್ಕೋರ್ ವಿವರ
ಭಾರತ 45 ಓವರ್‍ಗಳಲ್ಲಿ 200 ರನ್‍ಗೆ ಆಲೌಟ್
ರೋಹಿತ್ ಶರ್ಮಾ ಸಿ ಸಬ್ಬಿರ್ ಬಿ ಮುಸ್ತಫಿಜುರ್ 0, ಶಿಖರ್ ಧವನ್ ಸಿ ಲಿಟ್ಟನ್ ಬಿ ನಾಸಿರ್ 53, ವಿರಾಟ್ ಕೊಹ್ಲಿ ಎಲ್‍ಬಿ ನಾಸಿರ್ 23, ಧೋನಿ ಸಿ ಸೌಮ್ಯ ಬಿ ಮುಸ್ತಾಫಿಜುರ್ 47, ರಾಯುಡು ಸಿ ನಾಸಿರ್ ಬಿ ರುಬೇಲ್ 0, ಸುರೇಶ್ ರೈನಾ ಸಿ ಲಿಟ್ಟನ್ ಬಿ ಮುಸ್ತಾಫಿಜುರ್ 34, ಜಡೇಜಾ ಬಿ ಮುಸ್ತಾಫಿಜುರ್ 19, ಅಕ್ಷರ್ ಪಟೇಲ್ ಎಲ್‍ಬಿ ಮುಸ್ತಾಫಿಜುರ್ 0, ಅಶ್ವಿನ್ ಸಿ ಲಿಟ್ಟನ್ ಬಿ ಮುಸ್ತಫಿಜುರ್ 4, ಭುವನೇಶ್ವರ್ ಸಿ ಲಿಟ್ಟನ್ ಬಿ ರುಬೇಲ್ 3, ಧವಳ್ ಕುಲಕರ್ಣಿ ಅಜೇಯ 2. ಇತರೆ 15 (ಲೆಗ್‍ಬೈ 6, ವೈಡ್ 8, ನೋಬಾಲ್ 1).
ವಿಕೆಟ್ ಪತನ: 1--0, 2--74, 3--109, 4--110,
5--163, 6--174, 7--174, 8--184, 9--196,
10--200.
ಬೌಲಿಂಗ್ ವಿವರ: ಮುಸ್ತಾಫಿಜುರ್ 10-0-43-6,
ತಸ್ಕಿನ್ ಅಹ್ಮದ್ 4-0-24-0, ಮಶ್ರಫೆಮೊರ್ತಾಜಾ
7-0-35-0, ನಾಸಿರ್ ಹುಸೇನ್ 10-0-33-2,
ರುಬೇಲ್ ಹುಸೇನ್ 7-0-26-2, ಶಕೀಬ್
7-0-33-0.
ಬಾಂಗ್ಲಾದೇಶ 38 ಓವರ್‍ಗಳಲ್ಲಿ 200ಕ್ಕೆ 4
(ಡಕ್ವರ್ತ್ ಲೂಯಿಸ್ ನಿಯಮಾನುಸಾರ)
ತಮೀಮï ಇಕ್ಬಾಲ್ ಸಿ ಧವನ್ ಬಿ ಕುಲಕರ್ಣಿ 13,
ಸೌಮ್ಯ ಸರ್ಕಾರ್ ಎಲ್‍ಬಿ ಬಿ ಅಶ್ವಿನ್ 34, ಲಿಟ್ಟನ್
ದಾಸ್ ಸಿ ಧೋನಿ ಬಿ ಪಟೇಲ್ 36, ಮುಷ್ಫೀಕರ್
ರನೌಟ್ 31, ಶಕೀಬ್ ಅಲ್ ಹಸನ್ ಅಜೇಯ 51,
ಸಬ್ಬೀರ್ ರಹಮಾನ್ 22. ಇತರೆ 13 (ಲೆಗ್‍ಬೈ 4,
ವೈಡ್ 9).
ವಿಕೆಟ್ ಪತನ: 1--34, 2--86, 3--98, 4--152.
ಬೌಲಿಂಗ್ ವಿವರ: ಭುವನೇಶ್ವರ್ ಕುಮಾರ್
5-0-32-0, ಧವಳ್ ಕುಲಕರ್ಣಿ 7-0-42-1,
ಅಶ್ವಿನ್ 10-2-32-1, ರವೀಂದ್ರ ಜಡೇಜಾ
7-0-28-0, ಅಕ್ಷರ್ ಪಟೇಲ್ 7-0-48-1,
ಸುರೇಶ್ ರೈನಾ 2-0-14-0.
ಪಂದ್ಯಶ್ರೇಷ್ಠ:ಮುಸ್ತಫಿಜುರ್ ರಹಮಾನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ಅಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ; TMC, RJD, ಮಿತ್ರಪಕ್ಷಗಳಿಂದಲೂ ಅರ್ಜಿ

ಸ್ಮಿತ್ ಮಚ್ಚರ್ ಬಗ್ಗೆ ಮೌನವೇಕೆ: ನನ್ನ ಆದರ್ಶ ಧ್ರುವ ರಾಠಿ ಅಲ್ಲ: ಶಿವಸೇನೆ UBT ತೊರೆದ ರಾಷ್ಟ್ರೀಯ ವಕ್ತಾರ ಆನಂದ್ ದುಬೆ!

ಮಧ್ಯಪ್ರದೇಶ: ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾ ಮರಿ ಸಾವು!

'ದೇಶಕ್ಕೆ ಬೇಕಿರುವುದು ಸಾಕ್ಷ್ಯವೇ ಹೊರತು ಆರೋಪಗಳಲ್ಲ; ರಾಹುಲ್ ಗಾಂಧಿಯದ್ದು 'ಪೊಳ್ಳು' ಪ್ರತಿಭಟನೆ, ಆರೋಪ: ಬಿಜೆಪಿ ವಾಗ್ದಾಳಿ

ಗುಟ್ಟಾಗಿ ಮದುವೆಯಾಗಿದ್ದಾರಾ ನಟಿ ತ್ರಿಶಾ?: ಲಂಡನ್ ಸೆಲ್ಫಿಯಲ್ಲಿನ ಲಾಕೆಟ್ ನ ಗುಟ್ಟೇನು!