ಬಿಸಿಸಿಐ 
ಕ್ರೀಡೆ

ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಬಿಸಿಸಿಐ ಟೆಂಡರ್ ಆಹ್ವಾನ

ಮೈಕ್ರೋಮ್ಯಾಕ್ಸ್ ಜತೆಗಿನ ಶೀರ್ಷಿಕೆ ಪ್ರಾಯೋಜಕತ್ವ ಒಪ್ಪಂದ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂಬರುವ ಸಾಲಿನ ಪ್ರಾಯೋಜಕತ್ವಕ್ಕೆ ಬಿಸಿಸಿಐ ಟೆಂಡರ್ ಕರೆದಿದೆ.

ನವದೆಹಲಿ: ಪ್ರಸಕ್ತ ದೇಶೀಯ ಕ್ರಿಕೆಟ್ ಋತು ಅಂತ್ಯವಾಗುತ್ತಿದ್ದಂತೆ ಮೈಕ್ರೋಮ್ಯಾಕ್ಸ್ ಜತೆಗಿನ ಶೀರ್ಷಿಕೆ ಪ್ರಾಯೋಜಕತ್ವ ಒಪ್ಪಂದ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂಬರುವ ಸಾಲಿನ ಪ್ರಾಯೋಜಕತ್ವಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಟೆಂಡರ್ ಕರೆದಿದೆ.

2019 ವರೆಗೆ ಭಾರತದಲ್ಲಿ ಆಯೋಜಿಸಲಾಗಿರುವ ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಪಂದ್ಯಾವಳಿಯ ಶೀರ್ಷಿಕೆ ಪ್ರಾಯೋಜಕತ್ವ ವಹಿಸಿಕೊಳ್ಳಲು ಈಗ ಟೆಂಡರ್ ಕರೆಯಲಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 2015 -16 , 2016  -2017 , 2017 -2018 ಮತ್ತು 2018 -19 ನೇ ಸಾಲಿನ ಕ್ರಿಕೆಟ್ ಋತುವಿನಲ್ಲಿ ತವರಿನಲ್ಲಿ ನಡೆಯಲಿರಿರುವ ದೇಶೀಯ ಹಾಗೂ ಅಂತಾರಾಷ್ಟ್ರೀಯ ಪಂದ್ಯಾವಳಿಗಳಿಗೆ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ಟೆಂಡರ್ ಆಹ್ವಾನ ಪ್ರಕಟಿಸಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ತಿಳಿಸಿದ್ದಾರೆ.

ಈ ಒಪ್ಪಂದದಲ್ಲಿ ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್ ಟೂರ್ನಿ ವೇಳೆ ಪ್ರಾಯೋಜಕತ್ವದ ಲೋಗೊ, ಶೀರ್ಷಿಕೆ ಪ್ರಾಯೋಜಕತ್ವ ಎಂಬ ಅಧಿಕೃತ ಸ್ಥಾನ ನೀಡಲಾಗುವುದು. ಅಲ್ಲದೆ ಪಂದ್ಯ ನಡೆಯುವ ಮೈದಾನದಲ್ಲಿ ಆ ಕಂಪನಿಯ ಲೋಗೊ ಬಳಕೆ, ಪ್ರಸಾರ ಪ್ರಾಯೋಜಕತ್ವದ ಲೋಗೊ ಹಾಗೂ ಯಾತ್ರೆ ಹಕ್ಕುಗಳನ್ನು ಪಡೆಯಬಹುದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?