ವಿಶ್ವ ಹಾಕಿ ಲೀಗ್ 
ಕ್ರೀಡೆ

ವನಿತೆಯರಿಗೆ ಹೀನಾಯ ಸೋಲು

ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಲು ಪ್ರಯತ್ನಿಸುತ್ತಿರುವ ಭಾರತ ಮಹಿಳಾ ಹಾಕಿ ತಂಡ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡುವಲ್ಲಿ ಮತ್ತೆ ಎಡವಿದೆ.

ಆ್ಯಂಟ್ವೆರ್ಪ್: ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಲು ಪ್ರಯತ್ನಿಸುತ್ತಿರುವ ಭಾರತ ಮಹಿಳಾ ಹಾಕಿ ತಂಡ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡುವಲ್ಲಿ ಮತ್ತೆ ಎಡವಿದೆ.

ಮಂಗಳವಾರ ನಡೆದ ವಿಶ್ವ ಹಾಕಿ ಸೆಮಿಫೈನಲ್ ಲೀಗ್‍ನ ಮಹಿಳೆಯರ ಎರಡನೇ ಪಂದ್ಯದಲ್ಲಿ ರೀತು ರಾಣಿ ನೇತೃತ್ವದ ಭಾರತ ತಂಡ, ನ್ಯೂಜಿಲೆಂಡ್ ವಿರುದ್ಧ 0-5 ಗೋಲುಗಳ ಅಂತರದ  ಹೀನಾಯ ಸೋಲನುಭವಿಸಿ ತತ್ತರಿಸಿದೆ.

ಆರಂಭಿಕ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ 0-1 ಗೋಲಿನಿಂದ ಸೋಲನುಭವಿಸಿದ್ದ ಭಾರತ ವನಿತೆಯರು, ನ್ಯೂಜಿಲೆಂಡ್ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಭರವಸೆಯಲ್ಲಿದ್ದರು. ಆದರೆ,  ನ್ಯೂಜಿಲೆಂಡ್ ಆಟಗಾರ್ತಿಯರ ಆಕ್ರಮಣಕಾರಿ ಆಟದ ಮುಂದೆ ಮಂಕಾದ ಭಾರತೀಯ ಆಟಗಾರ್ತಿಯರು ಮತ್ತೆ ಸೋಲಿನ ತಿವಿತಕ್ಕೆ ಗುರಿಯಾದರು.ಮೊದಲಿಗೆ ಪಂದ್ಯದ 10ನೇ ನಿಮಿಷದಲ್ಲಿ  ಅತ್ಯುತ್ತಮ ಪಾಸ್ ಗಳ ಮೂಲಕ ಡಿ ಬಾಕ್ಸ್ ಪ್ರವೇಶಿಸಿದ ಕಿವೀಸ್ ಆಟಗಾರ್ತಿಯರು, ಗೋಲು ದಾಖಲಿಸಲು ಪ್ರಯತ್ನಿಸಿದರಾದರೂ, ಭಾರತದ ಗೋಲ್‍ಕೀಪರ್ ಅದನ್ನು ತಡೆದರು.

ಆದರೆ ಹಿಮ್ಮುಖವಾಗಿ ಚಿಮ್ಮಿದ ಚೆಂಡನ್ನು ಮತ್ತೆ ಹಿಡಿತಕ್ಕೆ ಪಡೆದ ನ್ಯೂಜಿಲೆಂಡ್ ಗೆಮ್ ಫಿಲನ್ ತಂಡಕ್ಕೆ ಮೊದಲ ಗೋಲು ತಂದುಕೊಟ್ಟರು. 17ನೇ ನಿಮಿಷದಲ್ಲಿ ಮತ್ತೆ ಸಂಘಟಿತ ದಾಳಿ  ನಡೆಸಿದ ನ್ಯೂಜಿಲೆಂಡ್ ಎರಡನೇ ಗೋಲು ದಾಖಲಿಸಿತು. ಈ ವೇಳೆ ಗೆಮ್ ನೀಡಿದ ಪಾಸ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ಒಲಿವಿಯಾ ಮೆರ್ರಿ ಚೆಂಡನ್ನು ಗೋಲು ಪೆಟ್ಟಿಗೆಯೊಳಗೆ  ನುಸುಳಿಸಿದರು. ಈ ಮೂಲಕ ಪಂದ್ಯದ ಆರಂಭಿಕ ಎರಡು ಕ್ವಾರ್ಟರ್‍ನಲ್ಲಿ ನ್ಯೂಜಿಲೆಂಡ್ 2-0 ಅಂತರದ ಮುನ್ನಡೆ ಕಾಯ್ದುಕೊಂಡಿತು.

ಆರಂಭದಲ್ಲೇ ಭಾರತೀಯ ಆಟಗಾರ್ತಿಯರ ಮೇಲೆ ಬಿಗಿ ಹಿಡಿತ ಸಾಧಿಸಿದ ಕಿವೀಸ್ ಪಡೆ, ನಂತರದ ಹಂತದಲ್ಲಿ ಮತ್ತಷ್ಟು ಸವಾರಿ ನಡೆಸಿತು. 42ನೇ ನಿಮಿಷದಲ್ಲಿ ಮೆರ್ರಿ ಚೆಂಡನ್ನು ಡಿಬಾಕ್ಸ್‍ನ ಒಳಗೆ ತಂದು ಗೆಮ್ ಫಿಲನ್‍ಗೆ ಪಾಸ್ ನೀಡಿದರು. ಗೆಮ್ ಇದನ್ನು ವ್ಯರ್ಥವಾಗಿಸದೆ ಗೋಲು ದಾಖಲಿಸಿದರು. 53ನೇ ನಿಮಿಷದಲ್ಲಿ ಕ್ರಿಸ್ಟನ್ ಪಿಯರ್ಸ್ ಆಕರ್ಷಕ ಪ್ರದರ್ಶನ ನೀಡಿ ಭಾರತದ ಗೋಲ್‍ಕೀಪರ್ ಅವರನ್ನು ವಂಚಿಸಿ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದರು. ಅಂತಿಮ ಕ್ಷಣದಲ್ಲಿ ಅಂದರೆ, 57ನೇ ನಿಮಿಷದಲ್ಲಿ ಮತ್ತೆ ಗಮನ ಸೆಳೆದ ಪಿಯರ್ಸ್, ಎರಡನೇ ಗೋಲು ಹೊಡೆದು ತಂಡದ ಗೆಲುವಿನ ಅಂತರವನ್ನು ಇನ್ನಷ್ಟು ಹೆಚ್ಚಿಸಿದರು.

ಇತ್ತ ಭಾರತೀಯ ಆಟಗಾರ್ತಿಯರಿಂದ ಯಾವುದೇ ರೀತಿಯ ಪರಿಣಾಮಕಾರಿ ಪ್ರತಿರೋಧ ಎದುರಾಗದಿರುವುದು ನ್ಯೂಜಿಲೆಂಡ್ ತಂಡಕ್ಕೆ ವರವಾಗಿ ಪರಿಣಮಿಸಿತು. ಭಾರತ ವನಿತೆಯರು ತಮ್ಮ  ಮೂರನೇ ಪಂದ್ಯದಲ್ಲಿ ಬುಧವಾರ ಪೊಲೆಂಡ್ ವಿರುದ್ಧ ಸೆಣಸಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT