ರಾಫೆಲ್ ನಡಾಲ್ 
ಕ್ರೀಡೆ

ವಿಂಬಲ್ಡನ್ ಟೆನಿಸ್ ಟೂರ್ನಿ ನಡಾಲ್ ಗೆ 10 ನೇ ಶ್ರೇಯಾಂಕ

ವರ್ಷದ ಮೂರನೇ ಗ್ರಾಂಡ್ ಸ್ಲಾಮ್ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಸ್ಪೇನ್ ನ ರಾಫೆಲ್ ನಡಾಲ್ ಇದೇ ಮೊದಲ ಬಾರಿಗೆ 10 ನೇ ಶ್ರೇಯಾಂಕ ಪಡೆದಿದ್ದಾರೆ.

ಲಂಡನ್: ವರ್ಷದ ಮೂರನೇ ಗ್ರಾಂಡ್ ಸ್ಲಾಮ್ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಆಟಗಾರರ ಶ್ರೇಯಾಂಕ ಬಿಡುಗಡೆಯಾಗಿದ್ದು ವಿಶ್ವದ ನಂ.1 ಆಟಗಾರ ಸರ್ಬಿಯಾದ ನೋವಾಕ್ ಜೊಕೋವಿಕ್ ಆಗ್ರಾ ಶ್ರೇಯಾಂಕ ಸಂಪಾದಿಸಿದ್ದಾರೆ. ಸ್ಪೇನ್ ನ ರಾಫೆಲ್ ನಡಾಲ್ ಇದೇ ಮೊದಲ ಬಾರಿಗೆ 10 ನೇ ಶ್ರೇಯಾಂಕ ಪಡೆದಿದ್ದಾರೆ.

ಗಾಯದ ನಿಮಿತ್ತ ತೀವ್ರ ಕುಸಿತ ಕಂಡಿರುವ ನಡಾಲ್, ಪ್ರೀಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತ ಆಟಗಾರರನ್ನು ಎದುರಿಸುವ ಸಾಧ್ಯತೆಗಳಿವೆ. ಇನ್ನು ವಿಂಬಲ್ಡನ್ ನಲ್ಲಿ ಏಳು ಬಾರಿ ಚಾಂಪಿಯನ್ ಆಗಿರುವ ಸ್ವಿಸ್ ಆಟಗಾರ ರೋಜರ್ ಫೆಡರರ್ ಗೆ ಎರಡನೆ ಶ್ರೇಯಾಂಕ ಲಭಿಸಿದ್ದರೆ, 2013 ರ ಚಾಂಪಿಯನ್ ಹಾಗೂ ಆತಿಥೇಯ ಆಟಗಾರ ಆಂಡಿ ಮರ್ರೆ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಇದೇ 29 ರಿಂದ ಆರಂಭವಾಗಲಿರುವ ಪ್ರತಿಷ್ಠಿತ ಟೆನಿಸ್ ಟೂರ್ನಿ ಜುಲೈ 12 ವರೆಗೂ ನಡೆಯಲಿದೆ. ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದು ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿರುವ ಸ್ವಿಜರ್ಲೆಂಡ್ ನ ಸ್ವಾನಿಸ್ಲಾಸ್ ವಾವ್ರಿಂಕಾ ನಾಲ್ಕನೇ ಶ್ರೇಯಾಂಕ ಪಡೆದಿದ್ದಾರೆ. ಮರ್ರೆ ಮೂರನೇ ಶ್ರೇಯಾಂಕ ಪಡೆದಿರುವ ಹಿನ್ನೆಲೆಯಲ್ಲಿ ಸೆಮಿಫೈನಲ್ ತಲುಪಿದರೆ, ಆ ಸುತ್ತಿನಲ್ಲಿ ಜೊಕೋವಿಚ್  ಅಥವಾ ಫೆಡರರ್ ಅವರನ್ನು ಎದುರಿಸುವ ಸಂಭವವಿದೆ.

ಭಾರತದ ಪ್ರಮುಖ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಸ್ವಿಜರ್ಲೆಂಡ್ ನ ಆಕೆಯ ಜತೆಯಾಟಗಾರ್ತಿ ಮಾರ್ಟಿನಾ ಹಿಂಗಿಸ್ ಜೋಡಿ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಅಗ್ರ ಶ್ರೇಯಾಂಕ ಸಂಪಾದಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?