ಕ್ರೀಡೆ

ವಿಶ್ವ ಹಾಕಿ ಲೀಗ್ ಸೆಮಿಫೈನಲ್ : ಇಂದು ಇಂಡೋ-ಪಾಕ್ ಸೆಣಸಾಟ

Sumana Upadhyaya

ಆ್ಯಂಟ್ವೆರ್ಪ್(ಬೆಲ್ಜಿಯಂ): ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳಾದ ಭಾರತ ಹಾಗೂ ಪಾಕಿಸ್ತಾನ ಮತ್ತೊಮ್ಮೆ ಮುಖಾಮುಖಿಯಾಗುತ್ತಿದ್ದು, ಹಾಕಿ ಪ್ರಿಯರ ನಾಡಿಮಿಡಿತವನ್ನು ಜೋರಾಗಿಸಿದೆ.

ಹಾಕಿ ವಿಶ್ವ ಲೀಗ್ ಸೆಮಿಫೈನಲ್ ನ ಗುಂಪು ಹಂತದ ಮೂರನೇ ಪಂದ್ಯದಲ್ಲಿ ಸರ್ದಾರ್ ಸಿಂಗ್ ಸಾರಥ್ಯದ ಟೀಂ ಇಂಡಿಯಾ, ಪಾಕಿಸ್ತಾನವನ್ನು ಸವಾಲಿಗೆ ದಿಟ್ಟ ಉತ್ತರ ನೀಡಲು ಸಜ್ಜಾಗಿದೆ.

ಮೊದಲ ಪಂದ್ಯದಲ್ಲಿ ಫ್ರಾನ್ಸ್ ಒಡ್ಡಿದ ಭಾರೀ ಪೈಪೋಟಿಯನ್ನು 3-2 ಗೋಲುಗಳ ಅಂತರದಿಂದ ಹತ್ತಿಕ್ಕಿದ್ದ ಭಾರತ ತಂಡ, ಬಳಿಕ ನಡೆದ ಪಂದ್ಯದಲ್ಲಿ ಪೋಲೆಂಡ್ ಎದುರು ಏಕಪಕ್ಷೀಯವಾಗಿ ಪ್ರದರ್ಶನದೊಂದಿಗೆ 3-0 ಗೋಲುಗಳಿಂದ ವಿಜೃಂಭಿಸಿತ್ತು.

ಕಳೆದ ವರ್ಷ ಭಾರತದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತವನ್ನು ಕೂದಲೆಳೆಯ ಅಂತರದಿಂದ ಮಣಿಸಿ ಅಂಗಳದಲ್ಲೇ ಅಂಗಿಗಳನ್ನು ಬಿಚ್ಚಿ ಕುಣಿದಾಡಿ ವಿವಾದ ಎಬ್ಬಿಸಿದ್ದ ಪಾಕ್ ತಂಡಕ್ಕೆ ದಿಟ್ಟ ಪ್ರತ್ತ್ಯುತ್ತರ ನೀಡುವ ತವಕದಲ್ಲಿ ಸರ್ದಾರ್ ಪಡೆ ಸನ್ನದ್ಧವಾಗಿದೆ.

SCROLL FOR NEXT