ಕ್ರೀಡೆ

ಫಿಫಾ ಅಧ್ಯಕ್ಷ ಸೆಪ್ಟ್ ಬ್ಲಾಟರ್ ರಾಜೀನಾಮೆ ಪ್ರಹಸನ

Srinivasamurthy VN

ಜ್ಯೂರಿಚ್: ಫಿಫಾ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಸೆಪ್ ಬ್ಲಾಟರ್ ಇದೀಗ ಅಂತಾರಾಷ್ಟ್ರೀಯ ಪುಟ್ಬಾಲ್ ಸಂಸ್ಥೆಯ ಅಧ್ಯಕ್ಷೀಯ ಪದವಿಯನ್ನು ನಾಟಕದ ವೇದಿಕೆಯನ್ನಾಗಿ ಮಾಡಿಕೊಂಡಿದ್ದಾರೆ. ಶುಕ್ರವಾರ ವಿವಿಧ ಮಾಧ್ಯಮಗಳಲ್ಲಿ ಪ್ರಕಟಗೊಂಡ ಗೊಂದಲಕಾರಿ ವರದಿಗಳು ಇದನ್ನು ಸಾಕ್ಷೀಕರಿಸಿವೆಯಲ್ಲದೆ, ಜಾಗತಿಕ ಮಟ್ಟದಲ್ಲಿ ಫಿಫಾದೊಳಗಿನ ವಿಚಾರಗಳನ್ನು ಮತ್ತಷ್ಟು ಗೋಜಲಾಗಿಸಿದವು.

ರಾಜಿನಾಮೆ ನೀಡಿಲ್ಲ ಎಂದರು!
ಶುಕ್ರವಾರ ಸಂಜೆ ವೇಳೆಗೆ ಬಿಬಿಸಿ ಜಾಲತಾಣದಲ್ಲಿ ಪ್ರಕಟಗೊಂಡ ಸುದ್ದಿಯೊಂದು ಎಲ್ಲರನ್ನೂ ಚಕಿತಗೊಳಿಸಿತು. ಸೆಪ್ ಬ್ಲಾಟರ್ ಅವರು, ತಾವು ಫಿಫಾ ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡಿಲ್ಲ ಎಂದು ಆ ವರದಿಯಲ್ಲಿ ಹೇಳಲಾಗಿತ್ತು.

ವರದಿ ಸುಳ್ಳೆಂದಿತು ಫಿಫಾ!
ಆದರೆ, ಈ ಸುದ್ದಿ ಜಗತ್ತಿಗೆ ಗೊತ್ತಾದ ಕೆಲವೇ ಗಂಟೆಗಳಲ್ಲಿ `ಎಫ್ ಸ್ಪೋರ್ಟ್ಸ್' ಜಾಲತಾಣದಲ್ಲಿ ಇದಕ್ಕೆ ತದ್ವಿರುದ್ಧವಾದ ಸುದ್ದಿಯೊಂದು ಹೊರಬಿತ್ತು. ಬಿಬಿಸಿ ನೀಡಿದ್ದ ಸುದ್ದಿಗೆ ಸ್ಪಶ್ಟನೆ ಎಂಬಂತೆ ಮೂಡಿಬಂದ ಈ ವರದಿಯಲ್ಲಿ ಹೇಳಿಕೆ ನೀಡಿದ ಫಿಫಾ ಕಚೇರಿ, ಸೆಪ್ ಬ್ಲಾಟರ್ ಅವರು ರಾಜಿನಾಮೆಯನ್ನು ಹಿಂಪಡೆಯುವ ಅಥವಾ ರಾಜಿನಾಮೆ ಸಲ್ಲಿಸಿಲ್ಲ ಎಂಬ ಸುದ್ದಿಗಳು ಕೇವಲ ವದಂತಿಗಳಷ್ಟೇ. ನೂತನ ಅಧ್ಯಕ್ಷರ ಆಯ್ಕೆಯಾದ ಮೇಲೆ ಬ್ಲಾಟರ್ ಅವರು ಕಚೇರಿ ತೆರವುಗೊಳಿಸುವುದು ಖಚಿತ ಎಂದು ಈ ವರದಿಯಲ್ಲಿ ಹೇಳಲಾಯ್ತು. ಈ ಎರಡೂ ವರದಿಗಳಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಎನ್ನುವುದು ಕೇವಲ ಬ್ಲಾಟರ್‍ಗಷ್ಟೇ ಗೊತ್ತಿರುವ ವಿಚಾರವಾದರೂ, ಜಾಗತಿಕ ಫುಟ್ಬಾಲ್ ಅಭಿಮಾನಿಗಳನ್ನು ಮಾತ್ರ ಅಯೋಮಯಗೊಳಿಸಿದವು.

SCROLL FOR NEXT