ಬಲ್ಬೀರ್ ಸಿಂಗ್ ಮತ್ತು ಅವರ ಮಡದಿ, ಸತ್ನಮ್ ಸಿಂಗ್ 
ಕ್ರೀಡೆ

ಸತ್ನಮ್ ಸಿಂಗ್ ಬಾಸ್ಕೆಟ್‌ಬಾಲ್ ಆಟಗಾರನಾಗಿದ್ದು ಹೇಗೆ? ಇಲ್ಲಿದೆ ಅವನ ಕಥೆ

ಬಲ್ಬೀರ್‌ನ ಎರಡನೇ ಮಗ ಸತ್ನಮ್ ಎತ್ತರಕ್ಕೆ ಬೆಳೆಯತೊಡಗಿದ್ದ. ಅಪ್ಪನಂತೆ ಮಗ ಅಜಾನುಬಾಹುವಾಗಿ ಬೆಳೆದು ನಿಂತಿದ್ದ...

ಚೆನ್ನೈ: 70ರ ದಶಕದಲ್ಲಿ ಬಲ್ಲೋ ಕೆ ಗ್ರಾಮದಲ್ಲಿನ ರೈತಾಪಿ ಕುಟುಂಬಗಳು ಬಲ್ಬೀರ್ ಸಿಂಗ್ ಭಮರಾ ಅವರು ಎತ್ತರಕ್ಕೆ ಬೆಳೆಯುತ್ತಿರುವುದನ್ನು ಕಂಡು ಅಚ್ಚರಿ ಪಡುತ್ತಿದ್ದರು. ಆತ 6 ಅಡಿ ಎತ್ತರಕ್ಕೆ ಬೆಳೆದಾಗ ಅಲ್ಲಿಗೆ ಬೆಳವಣಿಗೆ ನಿಂತುಹೋಗುತ್ತದೆ ಎಂದು ಅವರ ಅಮ್ಮ ಅಂದುಕೊಂಡಿದ್ದರು. ಆದರೆ ಆತ ಏಳು ಅಡಿ 2 ಇಂಚು ಬೆಳೆದು ಎಲ್ಲರಿಗೂ ಅಚ್ಚರಿ ಮೂಡಿಸಿದ. ಸತ್ನಮ್ ಸಿಂಗ್ ಅವರ ಅಪ್ಪ ಬಲ್ಬೀರ್ ಸಿಂಗ್ ಆ ಗ್ರಾಮದಲ್ಲಿರುವ ಅತೀ ಉದ್ದ ವ್ಯಕ್ತಿ ಎಂದು ಗುರುತಿಸಿಕೊಳ್ಳಲಾರಂಭಿಸಿದರು.

ಲುಧಿಯಾನದಿಂದ ಅಮೃತಸರಕ್ಕೆ ಪ್ರಯಾಣ ಮಾಡುವಾಗಲೆಲ್ಲ ಜನರು ನಾನೊಬ್ಬ ಬಾಸ್ಕೆಟ್ ಬಾಲ್ ಆಟಗಾರ ಎಂದೇ ಅಂದುಕೊಳ್ಳುತ್ತಿದ್ದರು. ಆವಾಗ ನನಗೆ ಬಾಸ್ಕೆಟ್ ಬಾಲ್ ಏನೆಂದು ಗೊತ್ತಿರಲಿಲ್ಲ. ಆದರೆ ನಗರಕ್ಕೆ ಕೆಲಸಕ್ಕೆಂದು ಹೋದ ನನ್ನ ಗೆಳೆಯರು ನಾನೊಬ್ಬ ಉತ್ತಮ ಬಾಸ್ಕೆಟ್ ಬಾಲ್ ಆಟಗಾರನಾಗಬಲ್ಲೆ ಎಂದು ಹೇಳುತ್ತಿದ್ದರು. ಅವರು ಹೇಳುವುದನ್ನು ನಾನ್ಯಾವತ್ತೂ ಗಂಭೀರವಾಗಿ ಪರಿಗಣಿಸಲೇ ಇಲ್ಲ.

ನನಗೆ ಎಲ್ಲವೂ ಕೃಷಿಯೇ ಆಗಿತ್ತು. ಹದಿಹರೆಯದಲ್ಲಿ ಹಾಕಿ ಆಡುವುದನ್ನು ಬಿಟ್ಟರೆ ಬೇರೆ ಯಾವ ಆಟವನ್ನೂ ನಾನು ಆಡಿರಲಿಲ್ಲ. ಗದ್ದೆಯಲ್ಲಿ ದುಡಿಯುವುದನ್ನು ಬಿಟ್ಟರೆ ಯಾವುದೇ ಆಟ ಆಡಲಿಕ್ಕೆ ನನಗೆ ಸಮಯ ಇರಲಿಲ್ಲ. ಆಗ ಟೀವಿ ಇರಲಿಲ್ಲ, ಎಲ್ಲದಕ್ಕೂ ರೇಡಿಯೋವನ್ನು ಅವಲಂಬಿಸುತ್ತಿದ್ದೆವು. ಆಗ ಕ್ರೀಡೆಯಲ್ಲಿ ಭಾರತ ಗೆದ್ದರೆ ನಾವು ಪಂಜಾಬ್‌ನಲ್ಲಿ ಪ್ರಾರ್ಥಿಸುತ್ತಿದ್ದೆವು.

2000 ಇಸವಿಯಲ್ಲಿ ಬಲ್ಲೋ ಕೆ ಗ್ರಾಮ ಮತ್ತೆ ಬಲ್ಬೀರ್‌ನತ್ತ ಗಮನ ಹರಿಸಿತು. ಬಲ್ಬೀರ್‌ನ ಎರಡನೇ ಮಗ ಸತ್ನಮ್ ಎತ್ತರಕ್ಕೆ ಬೆಳೆಯತೊಡಗಿದ್ದ. ಅಪ್ಪನಂತೆ ಮಗ ಅಜಾನುಬಾಹುವಾಗಿ ಬೆಳೆದು ನಿಂತಿದ್ದ. 9 ಹರೆಯಲ್ಲಿ ಸತ್ನಮ್ 6 ಅಡಿ ಬೆಳೆದಿದ್ದ. ಅವನು ಯಾವ ರೀತಿ  ಬೆಳೆದ ಎಂದರೆ 5 ಅಡಿ 2 ಇಂಚು ಎತ್ತರವಿರುವ ಅವನ ಅಮ್ಮನಿಗೆ ಮಗನಿಗೆ ಏಳೂವರೆ ಅಡಿ ಎತ್ತರವಿರುವ ಬಾಗಿಲಿನಲ್ಲಿ ಒಳಗೆ ಬರಲು ಸಾಧ್ಯವೆ? ಎಂಬ ಚಿಂತೆ ಬಂದಿತ್ತು.

ಸತ್ನಮ್ ಎತ್ತರೆತ್ತರ ಬೆಳೆಯುತ್ತಿರುವುದನ್ನು ನೋಡಿ ಅಪ್ಪ ಬಲ್ಬೀರ್‌ಗೆ ಮಗನನ್ನು ಬಾಸ್ಕೆಟ್ ಬಾಲ್ ಆಟಗಾರನನ್ನಾಗಿ ಮಾಡಬೇಕೆಂಬವ ಹಂಬಲವುಂಟಾಯಿತು. ನಗರದಲ್ಲಿರುವ ನನ್ನ ಗೆಳೆಯರು ನನ್ನ ಎತ್ತರವನ್ನು ವ್ಯಂಗ್ಯ ಮಾಡುತ್ತಿದ್ದದ್ದು ನೆನಪಾಯಿತು. ಬಾಸ್ಕೆಟ್ ಬಾಲ್ ಆಟಗಾರನನ್ನಾಗಿ ಮಾಡಬೇಕೆಂಬ ನನ್ನ ಆಸೆಯನ್ನು ಸತ್ನಮ್ ಮೇಲೆ ಹೇರಲು ನನಗಿಷ್ಟವಿರಲಿಲ್ಲ. ಆದರೆ ಅವನಿಗೊಂದು ಅವಕಾಶ ಕೊಟ್ಟು ನೋಡೋಣ. ಇದರಿಂದಾಗಿ ಅವನಿಗೆ ಸರ್ಕಾರಿ ಕೆಲಸ ಸಿಕ್ಕಿದರೂ ಆಯ್ತು ಎಂದು ಮನಸಲ್ಲೇ ಲೆಕ್ಕ ಹಾಕಿದೆ. ಆ ಕಾಲದಲ್ಲಿ ನಮ್ಮ ಗ್ರಾಮದಿಂದ ಹಲವಾರು ಯುವಕರು ಸ್ಪೋರ್ಟ್ ಕೋಟಾ ಮೂಲಕ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡಿದ್ದರು.

ಹೀಗೆ ಬಲ್ಬೀರ್ ಸತ್ನಮ್‌ನ್ನು ಅಲ್ಲಿನ ಸ್ಥಳೀಯ ಬಾಸ್ಕೆಟ್ ಬಾಲ್ ಮೈದಾನಕ್ಕೆ ಕರೆದುಕೊಂಡು ಹೋದರು. ಸತ್ನಮ್‌ಗೆ ಅದ್ಯಾವುದರಲ್ಲಿಯೂ ಆಸಕ್ತಿ ಇರಲಿಲ್ಲ. ಅವನು ಅಲ್ಲಿಗೆ ಹೋದಾಗ ಅಳುತ್ತಿದ್ದ. ಆಮೇಲೆ ಮನೆಯಲ್ಲಿ ಆತ ಕಲ್ಲುಗಳನ್ನು ತೆಗೆದು ಮೇಲಕ್ಕೆ ಎಸೆಯುತ್ತಿರುವುದನ್ನು ನೋಡಿದೆ. ಹಾಗೆ ನಾನು ಲುಧಿಯಾನದಿಂದ ಬಾಸ್ಕೆಟ್ ಬಾಲ್ ಖರೀದಿಸಿ ಬಾಸ್ಕೆಟ್‌ಬಾಲ್ ನೆಟ್ ತಂದು ಮನೆಯ ಗೋಡೆಯಲ್ಲಿ ತೂಗುಹಾಕಿದೆ. ಅಲ್ಲಿಂದ ಅವನು ಬಾಸ್ಕೆಟ್ ಬಾಲ್ ಆಡಲು ತೊಡಗಿದ್ದು, ನಂತರ ಹಿಂದೆ ತಿರುಗಿ ನೋಡಲಿಲ್ಲ. ಅವನು ಆಡುತ್ತಿರುವುದನ್ನು ನೋಡಲು ನಾನು ಮಧ್ಯರಾತ್ರಿಯೂ ಎದ್ದು ಕುಳಿತಿರುತ್ತಿದ್ದೆ.

ಆಮೇಲೆ ಅವನ ಜೀವನಕ್ಕೆ ಹೊಸ ತಿರುವು ಸಿಕ್ಕಿತು. ಲುಧಿಯಾನಾ ಬಾಸ್ಕೆಟ್ ಬಾಲ್ ಅಕಾಡೆಮಿಯಲ್ಲಿ ಬಾಸ್ಕೆಟ್ ಬಾಲ್ ಯುವ ಆಟಗಾರರಿಗೆ ಪ್ರವೇಶ ನೀಡುವ ಬಗ್ಗೆ ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯನ್ನು ಅವ ಓದಿ ಹೇಳಿದ್ದ. ಕೆಲವು ದಿನಗಳ ನಂತರ ನಾನು ಅವನನ್ನು ಅಲ್ಲಿಗೆ ಕರೆದುಕೊಂಡು ಹೋದೆ. ಅವನ ಎತ್ತರ ನೋಡಿ ಕೋಚ್ ತುಂಬಾ ಖುಷಿ ಪಟ್ಟರು. ಅಲ್ಲಿಂದ ಮುಂದೆ ನಡೆದಿದ್ದು ಎಲ್ಲವೂ ಸುಂದರ ಪಯಣ ಎಂದು ಅಪ್ಪ ಬಲ್ಬೀರ್ ಮಗ ಸತ್ನಮ್ ಬಗ್ಗೆ ಖುಷಿಯಿಂದ ಹೇಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

SCROLL FOR NEXT