ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ವರೆಗೂ ಟೀಂ ಇಂಡಿಯಾಕ್ಕೆ ಯಾವುದೇ ಮುಖ್ಯ ಕೋಚ್ ನೇಮಕವಾಗುವು ಸಾಧ್ಯತೆಯಿಲ್ಲ ಎಂದು ಕ್ರಿಕ್ ಇನ್ಫೋ ವರದಿ ಮಾಡಿದೆ.
ಸದ್ಯಕ್ಕೆ ಹಂಗಾಮಿಯಾಗಿ ಮುಖ್ಯ ಕೋಚ್ ಆಗಿರುವ ರವಿಶಾಸ್ತ್ರಿ ಹಾಗೂ ಅವರ ಸಹಾಯಕ ಕೋಚ್ ಗಳಾದ ಸಂಜಯ್ ಬಂಗಾರ್, ಬಿ ಅರುಣ್ ಹಾಗೂ ಆರ್ ಶ್ರೀಧರ್ ಅವರ ಅವಧಿ ಮತ್ತೆರಡು ವರ್ಷಗಳವರೆಗೆ ಮುಂದುವರಿಯುವ ಸಾಧ್ಯತೆಗಳಿವೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾಕ್ಕೆ 2016ರ ಟಿ20 ವಿಶ್ವಕಪ್ ಗೆ ಮುಖ್ಯ ಕೋಚ್ ಇಲ್ಲದೆ ಕಣಕ್ಕಿಳಿಯಬಹುದು ಎನ್ನಲಾಗಿದೆ.