ಟೀಂ ಇಂಡಿಯಾ ಆಟಗಾರರ ಅರ್ಧ ತಲೆ ಬೋಳಿಸಿರುವ ಚಿತ್ರ 
ಕ್ರೀಡೆ

ಬಾಂಗ್ಲಾ ಪತ್ರಿಕೆಯೊಂದರಲ್ಲಿ ಭಾರತೀಯ ಕ್ರಿಕೆಟಿಗರ ಅರ್ಧ ತಲೆ ಬೋಳಿಸಿದ ಜಾಹೀರಾತು!

ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಸೋತಿರಬಹುದು. ಆದರೆ ಇದನ್ನೇ ದೊಡ್ಡ ಸಾಧನೆ ಎಂದು ಬೀಗುತ್ತಿರುವ ಬಾಂಗ್ಲಾದೇಶ ಇಡೀ ಪ್ರಪಂಚವನ್ನೇ ಗೆದ್ದಂತೆ ಆಡುತ್ತಿದೆ.

ನವದೆಹಲಿ: ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಸೋತಿರಬಹುದು. ಆದರೆ ಇದನ್ನೇ ದೊಡ್ಡ ಸಾಧನೆ ಎಂದು ಬೀಗುತ್ತಿರುವ ಬಾಂಗ್ಲಾದೇಶ ಇಡೀ ಪ್ರಪಂಚವನ್ನೇ ಗೆದ್ದಂತೆ ಆಡುತ್ತಿದೆ.

ಎರಡನೇ ಪಂದ್ಯ ಸೋತಿದ್ದೇ ತಡ ಅಂದು ಮೈದಾನದಲ್ಲೇ ಮೌಕ ಮೌಕ ಹಾಡನ್ನು ಹಾಡುವ ಮೂಲಕ ಭಾರತೀಯ ತಂಡವನ್ನು ಬಾಂಗ್ಲಾ ಅಭಿಮಾನಿಗಳು ಅವಮಾನಿಸಿದ್ದರು. ಇದು ಸಾಲದೆಂಬಂತೆ ಕ್ರೀಡಾ ಸ್ಫೂರ್ತಿ ಮರೆತಿರುವ ಬಾಂಗ್ಲಾದೇಶ ದಿನ ಪತ್ರಿಕೆಯೊಂದು ಭಾರತದ ಆಟಗಾರರನ್ನು ಅವಮಾನಿಸಿದ್ದು, ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

3 ಪಂದ್ಯಗಳ ಮೂಲಕ 13 ವಿಕೆಟ್ ಗಳಿಸಿ ಬಾಂಗ್ಲಾದೇಶ ಗೆಲುವಿಗೆ ಕಾರಣನಾಗಿದ್ದ ಯುವ ಆಟಗಾರ ಮುಸ್ತಾಫಿಜುರ್ ರೆಹಮಾನ್​ಭಾರತೀಯ ಆಟಗಾರರಾದ ಅಜಿಂಕ್ಯಾ ರಹಾನೆ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಮಹೇಂದ್ರ ಸಿಂಗ್ ಧೋನಿ, ಶಿಖರ್ ಧವನ್ ಹಾಗೂ ಆರ್. ಅಶ್ವಿನ್ ಹಿಂದೆ ನಿಂತು ಕೈಯಲ್ಲಿ ಚಾಕುವೊಂದನ್ನು ಹಿಡಿದು ಅರ್ಧ ತಲೆ ಬೋಳಿಸಿರುವಂತಾ ಜಾಹಿರಾತು ನೀಡಿರುವುದನ್ನು ಐಬಿಎನ್ ಪತ್ರಿಕೆ ವರದಿ ಮಾಡಿದೆ.

ಬಾಂಗ್ಲಾದೇಶದ ಪತ್ರಿಕೆಯೊಂದು ಭಾರತೀಯ ಆಟಗಾರರ ಅರ್ಧ ಕೇಶ ಮುಂಡನದ ಫೋಟೋ ಹಾಕುವ ಮೂಲಕ ಅವಮಾನಿಸಿದೆ.

ಬಾಂಗ್ಲಾದೇಶ ವಿರುದ್ಧ ನಡೆದ ಮೂರು ಏಕದಿನ ಪಂದ್ಯದಲ್ಲಿ ಭಾರತ ಎರಡು ಪಂದ್ಯಗಳನ್ನು ಸೋತಿತ್ತು. ಇದರಿಂದಾಗಿ ಸರಣಿ ಬಾಂಗ್ಲಾದೇಶ ಕೈವಶವಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT