ಕ್ರೀಡೆ

ಬೋಲ್ಟ್ ಗೆ ಜಸ್ಟಿನ್ ಗ್ಯಾಟ್ಲಿನ್ ಪಂಥಾಹ್ವಾನ?

Vishwanath S

ಯುಜೆನೆ(ಅಮೆರಿಕ): ಅಮೆರಿಕದ ವಿವಾದಾತ್ಮಕ ಓಟಗಾರ ಜಸ್ಟಿನ್ ಗ್ಯಾಟ್ಲಿನ್ ಯುಎಸ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದು, ಮುಂಬರುವ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ತಮ್ಮ ಪ್ರತಿಸ್ಪರ್ಧಿಗಳಿಗೆ ವಿಶೇಷವಾಗಿ ವಿಶ್ವ ಶರವೇಗಿ ಉಸೇನ್ ಬೋಲ್ಟ್ ಗೆ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ನಡೆದ ಪುರುಷರ 200 ಮೀ. ಓಟದಲ್ಲಿ ಗ್ಯಾಟ್ಲಿನ್, 19.57 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಈ ಮೂಲಕ ಪ್ರಸಕ್ತ ಸಾಲಿನಲ್ಲಿ ಗ್ಯಾಟ್ಲಿನ್ 100 ಮೀ. ಮತ್ತು 200 ಮೀ. ಓಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಈ ಮೂಲಕ ವಿಶ್ವ ದಾಖಲೆ ಹೊಂದಿರುವ ಒಲಿಂಪಿಕ್ಸ್ ಚಾಂಪಿಯನ್ ಜಮೈಕಾದ ಉಸೇನ್
ಬೋಲ್ಟ್ ಅವರಿಗೆ ಭರ್ಜರಿ ಪಂಥಾಹ್ವಾನವನ್ನೇ ನೀಡಿದ್ದಾರೆ.

ಇದಲ್ಲದೆ ಗ್ಯಾಟ್ಲಿನ್ ತಮ್ಮ ಈ ಹಿಂದಿನ ವೃತ್ತಿಜೀವನದ ಸಾಧನೆ (19.68 ಸೆ.) ಉತ್ತಮಗೊಳಿಸಿದ್ದಾರೆ. ಬೋಲ್ಟ್ ಇತ್ತೀಚೆಗೆ ನಡೆದಿದ್ದ ನ್ಯೂಯಾರ್ಕ್ ಡೈಮಂಡ್ ಲೀಗ್‍ನ 200 ಮೀ. ಓಟವನ್ನು 2 ನಿಮಿಷದ ಒಳಗೆ ಪೂರೈಸುವಲ್ಲಿ ವಿಫಲರಾಗಿದ್ದರು.

ಈ ಕಣದಲ್ಲಿ ಉತ್ತಮ ಪ್ರದರ್ಶನ ನೀಡಿ ನನ್ನ ಫಾರ್ಮ್ ಅನ್ನು ತಿಳಿಸಬೇಕೆಂದುಕೊಂಡಿದ್ದೆ, ಅಂದುಕೊಂಡದ್ದನ್ನು ಯಶಸ್ವಿಯಾಗಿ ಪೂರೈಸಿದ್ದಕ್ಕೆ ಖುಷಿಯಾಗಿದೆ'' ಎಂದು ಗ್ಯಾಟ್ಲಿನ್ ತಿಳಿಸಿದ್ದಾರೆ. ಅಂದ್ಹಾಗೆ 2010ರಲ್ಲಿ ಡೋಪಿಂಗ್ ಪ್ರಕರಣದಲ್ಲಿ ಸಿಕ್ಕಿ 4 ವರ್ಷಗಳ ನಿಷೇಧಕ್ಕೆ ಗುರಿಯಾಗಿದ್ದ ಗ್ಯಾಟ್ಲಿನ್, ವಿಶ್ವ ದಾಖಲೆಯ ವೇಗದ ಓಟದ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದಿದ್ದಾರೆ. ಉಸೇನ್ ಬೋಲ್ಟ್ (19.19 ಸೆ.) ಅಗ್ರಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಯೊಹಾನ್ ಬ್ಲೇಕ್, ಮೈಕಲ್ ಜಾನ್ಸನ್ ಮತ್ತು ವಾಲ್ಟರ್ ಡಿಕ್ಸ್ ಕಾಣಿಸಿಕೊಂಡಿದ್ದಾರೆ.

SCROLL FOR NEXT