ಕ್ರೀಡೆ

ಬಾಲಕಿಗೆ ಲೈಂಗಿಕ ಕಿರುಕುಳ ಫುಟ್ಬಾಲಿಗ ಜಾನ್ಸನ್ ಬಂಧನ

Mainashree

ಲಂಡನ್: ಹದಿಹರೆಯದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದಡಿ ಇಂಗ್ಲೆಂಡ್ ಹಾಗೂ ಸ್ಯುಂಡರ್‍ಲ್ಯಾಂಡ್ ಫುಟ್ಬಾಲಿಗ ಆ್ಯಡಮ್ ಜಾನ್ಸನ್ ಅವರನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೊಳಪಡಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.

ಜಾನ್ಸನ್ ಅವರಿಂದ ದೌರ್ಜನ್ಯಕ್ಕೊಳಗಾಗಿದ್ದ ಬಾಲಕಿಯ ವಿವರಗಳನ್ನು ಪೊಲೀಸರು ನೀಡಿಲ್ಲ. ಜಾಮೀನಿನ ಮೇಲೆ ಜಾನ್ಸನ್ ಅವರನ್ನು ಬಿಡುಗಡೆಗೊಳಿಸಿದ್ದರೂ ಅವರ ವಿಚಾರಣೆ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅತ್ತ, ಸ್ಯುಂಡರ್ ಲ್ಯಾಂಡ್ ಫುಟ್ಬಾಲ್ ಕ್ಲಬ್ ಫುಟ್ಬಾಲ್ ತಂಡದ ಆಡಳಿತ ಮಂಡಳಿ ಜಾನ್ಸನ್ ಅವರನ್ನು ಅಮಾನತುಗೊಳಿಸಿದ್ದು, ತನಿಖೆ ಪೂರ್ಣಗೊಳ್ಳುವವರೆಗೂ ಈ ಶಿಕ್ಷೆ ಮುಂದುವರಿಯುತ್ತದೆ ಎಂದಿದೆ.

SCROLL FOR NEXT