ಪರ್ತ್: ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ತಮ್ಮ ವಿಶ್ವಕಪ್ ಪಂದ್ಯಾವಳಿಯಲ್ಲಿ ಮೊದಲ ಭಾರಿಗೆ ಭರ್ಬರಿ ಶತಕ ಬಾರಿಸಿದ್ದಾರೆ.
ಪರ್ತ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ವಾರ್ನರ್ 133 ಎಸೆತಗಳಲ್ಲಿ 178 ರನ್ ಗಳಿಸಿದ್ದಾರೆ. ಇದರೊಂದಿಗೆ ಆಸ್ಟ್ರೇಲಿಯಾ 44 ಓವರ್ ಗೆ 3 ವಿಕೆಟ್ ನಷ್ಟಕ್ಕೆ 355 ರನ್ ಗಳಿಸಿದೆ.
ಆರಂಭಿಕರಾಗಿ ಕಣಕ್ಕೀಳಿದ ಪಿಂಚ್ ಕೇವಲ 4 ರನ್ ಗಳಿಸಿ ಔಟಾದರು. ಈ ವೇಳೆ ಸ್ಫೋಟಕವಾಗಿ ಬ್ಯಾಟ್ ಬೀಸಿದ ಡೇವಿಡ್ ವಾರ್ನರ್ ಆಸ್ಟ್ರೇಲಿಯಾದ ರನ್ ಗತಿಯನ್ನು ಏರಿಸಿದರು. ಸ್ಮಿತ್ ಶತಕ ಅಂಚಿನಲ್ಲಿ ಎಡವಿದ್ದು, 95 ರನ್ ಗಳಿಸಿ ಔಟಾಗಿದ್ದಾರೆ. ಮ್ಯಾಕ್ಸ್ ವೇಲ್ 57 ರನ್ ಗಳಿಸಿ ಆಟವಾಡುತ್ತಿದ್ದಾರೆ.
ಆಫ್ಘಾನಿಸ್ತಾನ ಪರ ಶಪೂರ್ ಝರ್ದನ್ 2 ವಿಕೆಟ್ ದಾವ್ಲಾತ್ ಝರ್ದನ್ 1 ವಿಕೆಟ್ ಪಡೆದಿದ್ದಾರೆ.