ವೆಸ್ಟ್ ಇಂಡೀಸ್ ಆಟಗಾರ ಡರೇನ್ ಸಾಮಿ (ಸಂಗ್ರಹ ಚಿತ್ರ) 
ಕ್ರೀಡೆ

ಭಾರತದಲ್ಲಿ ಹೋಳಿ ಆಚರಣೆ, ಪರ್ತ್ ನಲ್ಲಿ ನಮ್ಮ ಜಯದ ಸಂಭ್ರಮಾಚರಣೆ: ಸಾಮಿ

ಶುಕ್ರವಾರ ಭಾರತದಲ್ಲಿ ಹೋಳಿ ಹಬ್ಬವನ್ನು ಆಚರಿಸಬಹುದು ಆದರೆ ನಾವು ಪರ್ತ್ ನಲ್ಲಿ ನಮ್ಮ ಜಯದ ಸಂಭ್ರಮಾಚರಣೆಯನ್ನು ಆಚರಿಸುತ್ತೇವೆ..

ಪರ್ತ್: ಶುಕ್ರವಾರ ಭಾರತದಲ್ಲಿ ಹೋಳಿ ಹಬ್ಬವನ್ನು ಆಚರಿಸಬಹುದು ಆದರೆ ನಾವು ಪರ್ತ್ ನಲ್ಲಿ ನಮ್ಮ ಜಯದ ಸಂಭ್ರಮಾಚರಣೆಯನ್ನು ಆಚರಿಸುತ್ತೇವೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಆಟಗಾರ ಡರೆನ್ ಸಾಮಿ ಹೇಳಿದ್ದಾರೆ.

ಇದೇ ಶುಕ್ರವಾರ ಪರ್ತ್ ನ ವಾಕಾ ಮೈದಾನದಲ್ಲಿ ವೆಸ್ಟ್ ಇಂಡೀಸ್ ಮತ್ತು ಭಾರತ ಕ್ರಿಕೆಟ್ ತಂಡಗಳು ಪರಸ್ಪರ ಮುಖಾಮುಖಿಯಾಗುತ್ತಿದ್ದು, ಕ್ರೀಡಾ ಪ್ರೇಮಿಗಳಲ್ಲಿ ಸಾಕಷ್ಟು ಉತ್ಸಕತೆ ಮನೆ ಮಾಡಿದೆ. ಈ ನಡುವೆ ವಿಂಡೀಸ್ ಆಟಗಾರ ಡರೇನ್ ಸಾಮಿ ಅವರ ಹೇಳಿಕೆ ಪಂದ್ಯದ ರೋಚಕತೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಭಾರತದ ವಿರುದ್ಧ ವಿಂಡೀಸ್ ತಂಡ ಗೆದ್ದೇ ಗೆಲ್ಲುತ್ತದೆ ಎಂದು ಸಾಮಿ ವಿಶ್ವಾಸದಿಂದ ಹೇಳಿದ್ದಾರೆ.

ಪರ್ತ್ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡರೇನಾ ಸಾಮಿ, ಮುಂಬರುವ ಭಾರತದ ವಿರುದ್ಧದ ಪಂದ್ಯದಲ್ಲಿ ನಾವು ಗೆಲ್ಲುತ್ತೇವೆ. ಆದರೆ ಭಾರತ ಒಂದು ಉತ್ತಮ ತಂಡ ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರಸ್ತುತ ಆ ತಂಡ ಉತ್ತಮ ಫಾರ್ಮ್ ನಲ್ಲಿದ್ದು, ನಾವು ಕೂಡ ಅಂತಹುದೇ ಉತ್ತಮ ಆಟವನ್ನು ಪ್ರದರ್ಶಿಸಿದರೆ ಗೆದ್ದೇ ಗೆಲ್ಲುತ್ತೇವೆ ಎಂದು ಸಾಮಿ ಹೇಳಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾ ಮತ್ತು ಐರ್ಲೆಂಡ್  ವಿರುದ್ಧದ ಪಂದ್ಯದ ಸೋಲಿನ ಕುರಿತು ಮಾತನಾಡಿದ ಸಾಮಿ, ಖಂಡಿತ ತಂಡದಲ್ಲಿ ಹಿರಿಯರ ಅನುಭವದ ಕೊರತೆ ಇದೆ. ಆದರೂ ಯುವ ನಾಯಕ ಜೇಸನ್ ಹೋಲ್ಡರ್ ಉತ್ತಮವಾಗಿ ತಂಡವನ್ನು ನಿಭಾಯಿಸುತ್ತಿದ್ದಾರೆ ಎಂದು ಸಾಮಿ ಹೇಳಿದರು.

ಒಟ್ಟಾರೆ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಪಂದ್ಯದ ರೋಚಕತೆ ಹೆಈಗಾಗಲೇ ಐಪಿಎಲ್ ನಲ್ಲಿ ಕೂಡಿ ಆಡಿರುವ ಈ ಎರಡೂ ತಂಡದ ಆಟಗಾರರಿಗೆ ಪರಸ್ಪರರ ದೌರ್ಬಲ್ಯ ತಿಳಿದಿದ್ದು, ಇದೇ ಮುಂದಿನ ಪಂದ್ಯದ ರೋಚಕತೆಯನ್ನು ಹೆಚ್ಚಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT