ಘಟನೆಯಲ್ಲಿ ಸಾವನ್ನಪ್ಪಿದ ಕ್ರೀಡಾಪಟುಗಳಾದ ಫ್ಲಾರೆನ್ಸ್ ಆರ್ಥಡ್, ಅಲೆಕ್ಸಿಸ್ ವಸ್ಟೈನ್ ಹಾಗೂ ಕ್ಯಾಮಿಲ್ಲೆ ಮುಫ್ಫತ್ 
ಕ್ರೀಡೆ

ಅರ್ಜೆಂಟೈನಾದಲ್ಲಿ ಹೆಲಿಕಾಪ್ಟರ್ ಡಿಕ್ಕಿ: ಒಲಂಪಿಕ್ಸ್ ಕ್ರೀಡಾಪಟುಗಳು ಸೇರಿ10 ಮಂದಿ ಸಾವು

ಫ್ರೆಂಚ್ ಕ್ರೀಡಾ ಪಟುಗಳ ಗುಂಪೊಂದು ಟಿವಿ ರಿಯಾಲಿಟಿ ಶೋ ಚಿತ್ರೀಕರಣಕ್ಕೆಂದು ಹೆಲಿಕಾಪ್ಟರ್ ನಲ್ಲಿ ತೆರಳುತ್ತಿದ್ದ ವೇಳೆ ಆಗಸದಲ್ಲಿ ಮತ್ತೊಂದು ಹೆಲಿಕಾಪ್ಟರ್ ಡಿಕ್ಕಿ ಹೊಡೆದ ಪರಿಣಾಮ ಒಲಂಪಿಕ್ಸ್ ಕ್ರೀಡಾಪಟು ಸೇರಿದಂತೆ 10 ಕ್ಕೂ ಮಂದಿ ಸಾವನ್ನಪ್ಪಿರುವ ಘಟನೆ ಉತ್ತರ ಅರ್ಜೆಂಟೈನಾ...

ಬ್ಯೂನಸ್ ಐರೀಸ್: ಫ್ರೆಂಚ್ ಕ್ರೀಡಾ ಪಟುಗಳ ಗುಂಪೊಂದು ಟಿವಿ ರಿಯಾಲಿಟಿ ಶೋ ಚಿತ್ರೀಕರಣಕ್ಕೆಂದು ಹೆಲಿಕಾಪ್ಟರ್ ನಲ್ಲಿ ತೆರಳುತ್ತಿದ್ದ ವೇಳೆ ಆಗಸದಲ್ಲಿ ಮತ್ತೊಂದು ಹೆಲಿಕಾಪ್ಟರ್ ಡಿಕ್ಕಿ ಹೊಡೆದ ಪರಿಣಾಮ ಒಲಂಪಿಕ್ಸ್ ಕ್ರೀಡಾಪಟು ಸೇರಿದಂತೆ 10 ಕ್ಕೂ ಮಂದಿ ಸಾವನ್ನಪ್ಪಿರುವ ಘಟನೆ ಉತ್ತರ ಅರ್ಜೆಂಟೈನಾದಲ್ಲಿ ಮಂಗಳವಾರ ನಡೆದಿದೆ.

ದುರ್ಘಟನೆಯಲ್ಲಿ ಲಂಡನ್ ಒಲಂಪಿಕ್ಸ್ ಚಾಂಪಿಯನ್ ಈಜುಪಟು ಕ್ಯಾಮಿಲ್ಲೆ ಮುಫ್ಫತ್, ಸೇಲರ್ ನಲ್ಲಿ ಚಾಂಪಿಯನ್ ಆಗಿ ಖ್ಯಾತಿಗಳಿಸಿದ್ದ ಫ್ಲಾರೆನ್ಸ್ ಆರ್ಥಡ್ ಹಾಗೂ ಒಲಂಪಿಕ್ ಬಾಕ್ಸರ್ ಅಲೆಕ್ಸಿಸ್ ವಸ್ಟೈನ್ ಸೇರಿದಂತೆ ಟಿವಿ ರಿಯಾಲಿಟಿ ಶೋಗೆ ಸೇರಿದ ಹಲವಾರು ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಮೃತರಲ್ಲಿ ಬಹುತೇಕರು ಫ್ರಾನ್ಸ್ ಪ್ರಜೆಗಳಾಗಿದ್ದು, ಅರ್ಜೆಂಟೈನಾಗೆ ಸೇರಿದ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಎರಡು ಹೆಲಿಕಾಪ್ಟರ್ ಗಳು ಟಿವಿ ವಾಹಿನಿಗಾಗಿ ಚಿತ್ರವೊಂದರ ಚಿತ್ರೀಕರಣ ನಡೆಸುತ್ತಿದ್ದಾಗ ಈ ಡಿಕ್ಕಿ ಸಂಭಸಿದೆ. ಡಿಕ್ಕಿ ಹೊಡೆಯುತ್ತಿದ್ದಂತೆ  ಎರಡು ಹೆಲಿಕಾಪ್ಟರ್ ಗಳಲ್ಲೂ ಬೆಂಕಿ ಹೊತ್ತಿಕೊಂಡಿದೆ. ನಂತರ ಇದ್ದಕ್ಕಿದ್ದಂತೆ ನೆಲಕ್ಕಪ್ಪಳಿಸಿದೆ  ನೋಡನೋಡುತ್ತಿದ್ದಂತೆ ಚಿತ್ರೀಕರಣದಲ್ಲಿ ತೊಡಗಿದ್ದ ಸಿಬ್ಬಂದಿಗಳು ಹಾಗೂ ಕ್ರೀಡಾ ಪಟುಗಳು ಸುಟ್ಟು ಕರಕಲಾಗಿದ್ದರು ಎಂದು ಪ್ರತ್ಯಕ್ಷ ದರ್ಶಿಯೊಬ್ಬ ಮಾಹಿತಿ ನೀಡಿದ್ದಾನೆ ಎಂದು ಲಾ ರಿಯೋಜಾ ಪ್ರಾಂತ್ಯ ಸರ್ಕಾರದ ವಕ್ತಾರ ಡೈಸೆಲ್ ಕುನಿಯೋ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿರುವ ಅಗ್ನಿಶಾಮಕ ಸಿಬ್ಬಂದಿಗಳು ಕಾರ್ಯಾಚರಣೆ ಮುಂದುವರೆಸಿದ್ದಾರೆ. ಮೃತರ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆಗಳಿರುವುದಾಗಿ ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ

ನಾನೀಗ DCM, ಡಿಕೆ.ಶಿವಕುಮಾರ್ CM, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್

ಶಕ್ತಿ, ಜ್ಞಾನ, ಸಂಸ್ಕೃತಿ, ಸಮಾನತೆಯ ಸಂಗಮ ಮೈಸೂರು ದಸರಾ: ಸಿಎಂ ಡಿಕೆ ಶಿವಕುಮಾರ್