ವೆಲ್ಲಿಂಗ್ಟನ್: ನಾಯಕ ಎಬಿ ಡಿ ವಿಲೆಯರ್ಸ್ (99) ಹಾಗೂ ಫರ್ಹಾನ್ ಬೆಹರ್ದೀನ್ (64) ಅವರ ಅಮೋಘ ಆಟದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಯುಎಇ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.
ದಕ್ಷಿಣ ಆಫ್ರಿಕಾದ 342 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿದ ಯುಎಇ ತಂಡ 47.3 ಓವರ್ ಗಳಲ್ಲಿ 195 ಸ್ಕೋರಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು .
ಟಾಸ್ ಗೆದ್ದ ಯುಎಇ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ದಕ್ಷಿಣ ಆಫ್ರಿಕಾದ ಆರಂಭ ಕಳಪೆಯಾಗಿತ್ತು. ಭರವಸೆ ಆಟಗಾರ ಹಶೀಂ ಆಮ್ಲಾ 12 ರನ್ ಗಳಿಸಿ ಔಟಾಗಿದ್ದು, ಡಿ ಕಾಕ್ 26 ರನ್ ಗಳಿಸಿ ಪೆವಿಲಿಯನ್ ಸೇರಿದರು. ನಂತರ ರೋಸೋ ಹಾಗೂ ಎಬಿ ಡಿ ವಿಲೆಯರ್ಸ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು. ಪ್ರಸ್ತುತ ಪಂದ್ಯದಲ್ಲಿ ಎಬಿ ಡಿವಿಲೆಯರ್ಸ್ 99 ರನ್(82ಎ, 6x4, 4x6) ಗಳಿಸಿ ಕಮ್ರಾನ್ ಶಜಾದ್ ಗೆ ವಿಕೆಟ್ ಒಪ್ಪಿಸಿದರು. ರೋಸೋ 43 ರನ್ ಗಳಿಸಿ ಔಟಾದರೆ, ಡೇವಿಡ್ ಮಿಲ್ಲರ್ 49ರನ್ ಗಳಿಸಿ ಅರ್ಧ ಶತಕ ವಂಚಿತ ರಾದರು . ಕೊನೆ ಹಂತದಲ್ಲಿ ಫರ್ಹಾನ್ ಬೆಹರ್ದೀನ್ 31 ಎಸೆತಗಳಲ್ಲಿ 64 ರನ್ (5x4,3X6) ಗಳಿಸುವ ಮೂಲಕ ತಂಡದ ಸ್ಕೋರ್ ಹೆಚ್ಚಿಸಿದರು. ಆದಾಗ್ಯೂ, ದ. ಆಫ್ರಿಕಾ 50 ಓವರ್ ಗಳಲ್ಲಿ 6 ವಿಕೆಟ್ ಗಳಿಸಿ 341ಸ್ಕೋರ್ ಮಾಡಿತು. ಯುಎಇ ಪರ ಮಹಮ್ಮದ್ ನವೀದ್ 63ಕ್ಕೆ3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.
ದ. ಆಫ್ರಿಕಾದ 342 ರನ್ ಗುರಿ ಬೆನ್ನು ಹತ್ತಿದ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡ ಆರಂಭಿಕ ಆಘಾತ ಅನುಭವಿಸಿತು. ತಂಡದ ಮೊತ್ತ 29 ಆಗಿದ್ದಾಗ ಬೆರೆಂಜರ್ 5 ರನ್ ಗಳಿಸಿ ಮಾರ್ಕೆಲ್ ಗೆ ವಿಕೆಟ್ ಒಪ್ಪಿಸಿದರು. ನಂತರ ಅಮ್ಜದ್ ಅಲಿ 21 ರನ್, ಖುರಂ ಖಾನ್ 12ರನ್ ಗಳಿಸಿ ಪೆವಿಲಿಯನ್ ಸೇರಿದರು. ಶೈಮಾನ್ ಅನ್ವರ್ ಉತ್ತಮ ಬ್ಯಾಟಿಂಗ್ ಆಟ ಪ್ರದರ್ಶನ ನೀದರೂ 39 ರನ್ ಗಳಿಸಿ ಔಟಾದರು. ಉಳಿದಂತೆ ಸ್ವಪ್ನಿಲ್ ಪಾಟೀಲ್ 57 ರನ್ ಗಳಿಸಿ ಅಜೇಯರಾಗಿ ಉಳಿದರು. ದಕ್ಷಿಣ ಆಫ್ರಿಕಾ ಪರ ಫಿಲ್ಯಾಂಡರ್, ಮಾರ್ಕೆಲ್ ಹಾಗೂ ನಾಯಕ ಎಬಿ ಡಿವಿಲೆಯರ್ಸ್ ತಲಾ 2 ವಿಕೆಟ್ ಕಿತ್ತರು. ಸ್ಟೇನ್, ಡುಮಿನಿ, ತಾಹೀರ್ ತಲಾ 1 ವಿಕೆಟ್ ಪಡೆದರು.
ಎಬಿ ಡಿ ವಿಲೆಯರ್ಸ್ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು.