ರಣಜಿ ಟ್ರೋಫಿ ಗೆದ್ದ ಕರ್ನಾಟಕ ತಂಡ 
ಕ್ರೀಡೆ

ಪ್ರದರ್ಶನ ಹೆಮ್ಮೆ ತಂದಿದೆ; ಸಾಧಿಸುವುದು ಮತ್ತಷ್ಟಿದೆ

ದೇಶಿಯ ಕ್ರಿಕೆಟ್‍ನಲ್ಲಿ ತಮ್ಮ ಪ್ರಭುತ್ವ ಉಳಿಸಿಕೊಂಡು ರಾಜ್ಯದ ಕೀರ್ತಿಯನ್ನು ಉತ್ತುಂಗಕ್ಕೆ ಕರೆದೊಯ್ದ ಕರ್ನಾಟಕದ ಆಟಗಾರರು ಮತ್ತೆ ಈ ವರ್ಷವೂ...

ಬೆಂಗಳೂರು: ದೇಶಿಯ ಕ್ರಿಕೆಟ್‍ನಲ್ಲಿ ತಮ್ಮ ಪ್ರಭುತ್ವ ಉಳಿಸಿಕೊಂಡು ರಾಜ್ಯದ ಕೀರ್ತಿಯನ್ನು ಉತ್ತುಂಗಕ್ಕೆ ಕರೆದೊಯ್ದ ಕರ್ನಾಟಕದ ಆಟಗಾರರು ಮತ್ತೆ ಈ ವರ್ಷವೂ
ಪ್ರಶಸ್ತಿಯೊಂದಿಗೆ ತವರಿಗೆ ಹಿಂತಿರುಗಿದ್ದಾರೆ.  ಫೈ ನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಐತಿಹಾಸಿಕ ಗೆಲವು ದಾಖಲಿಸಿದ ನಂತರ, ಶುಕ್ರವಾರ ತವರಿಗೆ ಆಗಮಿಸಿದ ನಾಡಿನ ಹೆಮ್ಮೆಯ ಪುತ್ರರಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸನ್ಮಾನ ಮಾಡಿ ಗೌರವಿಸಿತು. ವಿಮಾನ ನಿಲ್ದಾಣದಿಂದ ನೇರವಾಗಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿದ ತಂಡದ ಸದಸ್ಯರಿಗೆ ಅಭೂತಪೂರ್ವ ಸ್ವಾಗತ ಕಾದಿತ್ತು. ಪ್ರತಿಯೊಬ್ಬ ಸದಸ್ಯರಲ್ಲೂ ಹೆಮ್ಮೆಯ ಭಾವ ಹಾಗೂ ಸಂಭ್ರಮ ಬಿಂಬಿಸುತ್ತಿತ್ತು. ಈ ವೇಳೆ ತಮ್ಮ ಅನುಭವ ಹಂಚಿಕೊಂಡ ಆಟಗಾರರು, ಸತತ ಎರಡನೇ ಬಾರಿಗೆ ರಣಜಿ ಟ್ರೋಫಿ ಪ್ರಶಸ್ತಿಯನ್ನು ಮತ್ತೆ ವಶಪಡಿಸಿಕೊಂಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲೂ ಇದೇ ಪ್ರದರ್ಶನ ಮುಂದುವರಿಸಿಕೊಂಡು ಹೋಗುವ ವಿಶ್ವಾಸ ವ್ಯಕ್ತಪಡಿಸಿದರು.ಈ ವೇಳೆ ಮಾತನಾಡಿದ ನಾಯಕ ವಿನಯ್ ಕುಮಾರ್, ಈ ತಂಡ ಮುನ್ನಡೆಸುವುದೇ ಅದೃಷ್ಟ. ಸಾಮರ್ಥ್ಯಕ್ಕೆ ತಕ್ಕಂತೆ ಆಡಿದರೆ ಈ ಬಾರಿ ಪ್ರಶಸ್ತಿ ಉಳಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ ಎಂದು ತಂಡದ ಸದಸ್ಯರಿಗೆ ಪಂದ್ಯಾವಳಿ ಮುನ್ನವೇ ತಿಳಿಸಿದ್ದೆ. ಪ್ರಶಸ್ತಿ ಗೆಲ್ಲುವುದು ದೊಡ್ಡ ಸಾಧನೆಯಾದರೆ, ಆ ಪ್ರಶಸ್ತಿಯನ್ನು ಮತ್ತೆ ಉಳಿಸಿಕೊಳ್ಳುವುದು ಮತ್ತೊಂದು ವಿಶೇಷ ಸಾಧನೆ. 1998ರ ಸಮಯದಲ್ಲಿ ಭಾರತ ತಂಡದಲ್ಲಿ ಅರ್ಧದಷ್ಟು ರಾಜ್ಯದ ಆಟಗಾರರಿದ್ದರು. ಆ ವೈಭವ ಕೆಲವೇ ದಿನಗಳಲ್ಲಿ ಮತ್ತೆ ಬರಲಿದೆ ಎಂಬ ವಿಶ್ವಾಸವಿದೆ ಎಂದರು. ಈಗ ಸಾಧಿಸಿರುವುದು ಹೆಮ್ಮೆ ತಂದಿದೆ. ಅದಕ್ಕಿಂತ ಮುಖ್ಯವಾಗಿ ಸಾಧಿಸಲು ಮುಂದೆ ಇರುವ ಗುರಿ ಮತ್ತಷ್ಟಿದೆ. ಹಾಗಾಗಿ ಸಂಭ್ರಮಕ್ಕಿಂತ ಹೆಚ್ಚಾಗಿ ಆ ಗುರಿ ಸಾಧನೆಯತ್ತ ಗಮನ ಹರಿಸುತ್ತೇವೆ. ಕರ್ನಾಟಕ ಜನತೆಯ ಪ್ರೀತಿ ಅಭಿಮಾನ  ಆಶಿರ್ವಾದ ಈ ಯಶಸ್ಸಿಗೆ ಕಾರಣ. ಅವರಿಗೆ ಧನ್ಯವಾದಗಳು. ಮುಂದಿನ ದಿನಗಳಲ್ಲೂ ನೀವು ಹೆಮ್ಮೆಪಡುವಂತ ಸಾಧನೆ  ಮಾಡುತ್ತೇವೆ ಎಂದು ಹೇಳಿದರು.ಸಾಧಕರಿಗೆ ಸೂಕ್ತ ಬಹುಮಾನ: ಕರ್ನಾಟಕ ತಂಡದ ಸದಸ್ಯರನ್ನು ಸನ್ಮಾನಿಸಿ ಮಾತನಾಡಿದ ಕೆಎಸ್‍ಸಿಎ ಕಾರ್ಯದರ್ಶಿ ಬೃಜೇಶ್ ಪಟೇಲ್, ಭಾರತೀಯ ಕ್ರಿಕೆಟ್‍ನಲ್ಲಿ ತಮ್ಮ ಪಾರುಪತ್ಯವನ್ನು ಮುಂದುವರಿಸಿರುವ ಕರ್ನಾಟಕ ತಂಡಕ್ಕೆ ಸೂಕ್ತ ಬಹುಮಾನ ನೀಡುತ್ತೇವೆ. ಪ್ರಸಕ್ತ ಋತುವಿನಲ್ಲಿ ಇನ್ನು ಎರಡು ಪಂದ್ಯಾವಳಿಗಳು ನಡೆಯ ಬೇಕಿವೆ. ಎಲ್ಲವೂ ಮುಕ್ತಾಯಗೊಂಡ ನಂತರ ಈ ಸಾಧಕರಿಗೆಸೂಕ್ತ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.ವಿನಯ್ ತಂಡಕ್ಕೆ ಅಬಿsನಂದನೆಗಳು. ಅವರ ಸಾಧನೆಯಿಂದನಾವೆಲ್ಲರು ಹೆಮ್ಮೆ ಪಡುತ್ತೇವೆ. ಕಳೆದ ವರ್ಷ ಈ ತಂಡ ಮೊದಲ ಪ್ರಶಸ್ತಿ ಗೆದ್ದಿತ್ತು. ಈಗ ಅದನ್ನು ಉಳಿಸಿಕೊಂಡಿದೆ. ರಾಜ್ಯದ ಆಟಗಾರರು ಇದೇ ರೀತಿಯ ಪ್ರದರ್ಶನ ಮುಂದುವರಿಸಿಕೊಂಡು ಹೋಗಲಿ ಎಂದು ಹಾರೈಸುತ್ತೇನೆ. ಮುಂದಿನ ದಿನಗಳಲ್ಲಿ ಕರ್ನಾಟಕದ ಬಹುತೇಕ ಆಟಗಾರರನ್ನು ಭಾರತ ತಂಡದಲ್ಲಿ ನೋಡಲು ಇಚ್ಛಿಸುತ್ತೇನೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ಅಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ; TMC, RJD, ಮಿತ್ರಪಕ್ಷಗಳಿಂದಲೂ ಅರ್ಜಿ

ಸ್ಮಿತ್ ಮಚ್ಚರ್ ಬಗ್ಗೆ ಮೌನವೇಕೆ: ನನ್ನ ಆದರ್ಶ ಧ್ರುವ ರಾಠಿ ಅಲ್ಲ: ಶಿವಸೇನೆ UBT ತೊರೆದ ರಾಷ್ಟ್ರೀಯ ವಕ್ತಾರ ಆನಂದ್ ದುಬೆ!

ಮಧ್ಯಪ್ರದೇಶ: ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾ ಮರಿ ಸಾವು!

'ದೇಶಕ್ಕೆ ಬೇಕಿರುವುದು ಸಾಕ್ಷ್ಯವೇ ಹೊರತು ಆರೋಪಗಳಲ್ಲ; ರಾಹುಲ್ ಗಾಂಧಿಯದ್ದು 'ಪೊಳ್ಳು' ಪ್ರತಿಭಟನೆ, ಆರೋಪ: ಬಿಜೆಪಿ ವಾಗ್ದಾಳಿ

ಗುಟ್ಟಾಗಿ ಮದುವೆಯಾಗಿದ್ದಾರಾ ನಟಿ ತ್ರಿಶಾ?: ಲಂಡನ್ ಸೆಲ್ಫಿಯಲ್ಲಿನ ಲಾಕೆಟ್ ನ ಗುಟ್ಟೇನು!