ನವದೆಹಲಿ: ವಿಶ್ವಕಪ್ ಕ್ರಿಕೆಟ್ ಲೀಗ್ ಪಂದ್ಯಗಳು ಮುಕ್ತಾಯಗೊಂಡಿದ್ದು, ಮಾ. 18ರಿಂದ ಕ್ವಾಟರ್‌ಫೈನಲ್ ಪಂದ್ಯಗಳು ಆರಂಭಗೊಳ್ಳಲಿದೆ. ಮೊದಲ ಕ್ವಾಟರ್‌ಫೈನಲ್ ಪಂದ್ಯ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳ ನಡುವೆ ನಡೆಯಲಿದೆ.
ವಿಶ್ವಕಪ್ ನ ಲೀಗ್ ನ ಕೊನೆಯ ಪಂದ್ಯ ಅಡಿಲೇಡ್ ಓವಲ್ ನಲ್ಲಿ ಪಾಕಿಸ್ತಾನ ಮತ್ತು ಐರ್ಲೆಂಡ್ ಮಧ್ಯೆ ನಡೆದಿದ್ದು, ಐರ್ಲೆಂಡ್ ವಿರುದ್ಧ ಪಾಕ್ ಜಯ ಗಳಿಸಿ ಕ್ವಾಟರ್‌ಫೈನಲ್ ಪ್ರವೇಶಿಸಿದೆ.
ಕ್ವಾಟರ್‌ಫೈನಲ್ ನಲ್ಲಿ ಸೆಣಸಲಿರುವ ತಂಡಗಳು
ಮಾ. 18 ದಕ್ಷಿಣ ಆಫ್ರಿಕಾ-ಶ್ರೀಲಂಕಾ
ಮಾ. 19 ಭಾರತ-ಬಾಂಗ್ಲಾದೇಶ
ಮಾ. 20 ಆಸ್ಟ್ರೇಲಿಯಾ-ಪಾಕಿಸ್ತಾನ
ಮಾ. 21 ನ್ಯೂಜಿಲೆಂಡ್-ವೆಸ್ಟ್ ಇಂಡೀಸ್