ಅಡಿಲೇಡ್: ವಿಶ್ವಕಪ್ ಕ್ರಿಕೆಟ್‌ನ ಲೀಗ್ ಹಂತದ ಅಂತಿಮ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಪಾಕಿಸ್ಥಾನ ಐರ್ಲೆಂಡ್ ವಿರುದ್ದ 7 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.
ಅಡಿಲೇಡ್ ಓವಲ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಐರ್ಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕ ಪೋರ್ಟರ್‌ಫೀಲ್ಡ್‌ರ ಶತಕದ ನೆರವಿನಿಂದಾಗಿ ಐರ್ಲೆಂಡ್ ತಂಡ 237 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ 46ನೇ ಓವರ್ ನಲ್ಲಿ ಗುರಿ ತಲುಪಿತು.
ಪಾಕ್ ಅರಂಭಿಕ ಆಟಗಾರ ಸಫ್ ರಾಜ್ ಅಹಮದ್‌ರ ಭರ್ಜರಿ ಶತಕ ಪಾಕಿಸ್ತಾನಕ್ಕೆ ಗೆಲುವು ತಂದುಕೊಟ್ಟಿತ್ತು. 46.1 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 241 ರನ್ ಗಳಿಸಿತು. ಇದರೊಂದಿಗೆ ಪಾಕ್ ಕ್ವಾಟರ್‌ಫೈನಲ್ ಪ್ರವೇಶಿಸಿತು.
ಪಾಕ್ ಪರ ಸಫ್ ರಾಜ್ ಅಜೇಯ 101, ಶೆಹಜಾದ್ 63, ಸೊಹೈಲ್ 3 ಮಿಸ್ಬಾ 39 ,ಉಮರ್ ಅಕ್ಮಲ್ ಅಜೇಯ 20 ರನ್ ಗಳಿಸಿದರು.
ಐರ್ಲೆಂಡ್ ಬೌಲರ್ ಗಳಾದ ಕ್ಯುಸಾಕ್, ಥಾಮ್ಪ್ ಸನ್ ತಲಾ 1 ವಿಕೆಟ್ ಪಡೆದರು.
ಐರ್ಲೆಂಡ್ ಪರ ಪೋರ್ಟರ್ ಫೀಲ್ಡ್ 107, ಸ್ಟರ್ಲಿಂಗ್ 3, ಜೋಯ್ಸ11, ನೀಲ್ ಓಬ್ರಿಯಾನ್ 12, ಬಾಲ್ಬರೀನ್ 18, ವಿಲ್ಸನ್ 29, ಕೆವಿನ್ ಓಬ್ರಿಯಾನ್ 8, ಥೊಮ್ಸನ್ 12, ಮೂನಿ 13, ಡಾಕ್ರೆಲ್ 11, ಕ್ಯುಸಾಕ್ ಅಜೇಯ 1 ರನ್ ಗಳಿಸಿದರು.
ಪಾಕ್ ಪರ ವಹಾಬ್ ರಿಯಾಜ್ 3, ಸೊಹೈಲ್ ಖಾನ್, ರಾಹತ್ ಅಲಿ ತಲಾ 2 ವಿಕೆಟ್, ಎಹಸಾನ್ ಮತ್ತು ಹ್ಯಾರಿಸ್ ಸೊಹೈಲ್ ತಲಾ 1 ವಿಕೆಟ್ ಪಡೆದರು.