ಭಾರತ ವನಿತೆಯರ ಹಾಕಿ ತಂಡ 
ಕ್ರೀಡೆ

ಪೋಲೆಂಡ್ ವಿರುದ್ಧ ಭಾರತ ಪ್ರಾಬಲ್ಯ

ತಮ್ಮ ಅತ್ಯುತ್ತಮ ಪ್ರದರ್ಶನವನ್ನು ಮುಂದುವರಿಸಿರುವ ಭಾರತ ವನಿತೆಯರ ಹಾಕಿ ತಂಡ ವಿಶ್ವ ಹಾಕಿ ಲೀಗ್‍ನ 2ನೇ ಸುತ್ತಿನ ಟೂರ್ನಿಯಲ್ಲಿ...

ನವದೆಹಲಿ: ತಮ್ಮ ಅತ್ಯುತ್ತಮ ಪ್ರದರ್ಶನವನ್ನು ಮುಂದುವರಿಸಿರುವ ಭಾರತ ವನಿತೆಯರ ಹಾಕಿ ತಂಡ ವಿಶ್ವ ಹಾಕಿ ಲೀಗ್‍ನ 2ನೇ ಸುತ್ತಿನ ಟೂರ್ನಿಯಲ್ಲಿ ಚಾಂಪಿಯನ್ ಆಗಿದೆ. ಈ ಮೂಲಕ ಸೆಮಿ ಫೈನಲ್ ಟೂರ್ನಿಗೆ ಪ್ರವೇಶಿಸಿದೆ.
ಭಾನುವಾರ ಮೇಜರ್ ಧ್ಯಾನ್‍ಚಂದ್ ಕ್ರೀಡಾಂಗಣದಲ್ಲಿ ನಡೆದ  ಫೈನಲ್ ಪಂದ್ಯದಲ್ಲಿ ಭಾರತ ವನಿತೆಯರು ಪೋಲೆಂಡ್ ವಿರುದಟಛಿ 3-1 ಗೋಲುಗಳ ಅಂತರದಲ್ಲಿ ಗೆಲವು ದಾಖಲಿಸಿದ್ದಾರೆ. ಈ ಮೂಲಕ ಭಾರತದ ವನಿತೆಯರು
ಜೂನ್‍ನಲ್ಲಿ ನಡೆಯಲಿರುವ ಸೆಮಿ ಫೈನಲ್ ಸುತ್ತಿಗೆ ಪ್ರವೇಶಿಸಲಿದ್ದಾರೆ. ಪಂದ್ಯದ ಆರಂಭದಲ್ಲೇ ಅಂದರೆ 15ನೇ ನಿಮಿಷದಲ್ಲಿ ವಂದನಾ ಕಟಾರಿಯಾ ಗೋಲು ದಾಖಲಿಸುವ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಟ್ಟರು, ಇದಾದ ತಕ್ಷಣವೇ 17ನೇ ನಿಮಿಷದಲ್ಲಿ  ಪೋ ಲೆಂಡ್‍ನ ವಲಾಸೆಕ್ ಒರಿಯಾನ ಗೋಲು ದಾಖಲಿಸಿ ಆತಿಥೇಯರಿಗೆ ತೀವ್ರ ಸ್ಪರ್ಧೆ ನೀಡಿದರು.
44ನೇ ನಿಮಿಷದಲ್ಲಿ ರಾಣಿ ಗೋಲು ದಾಖಲಿಸಿ ತಂಡಕ್ಕೆ ಮತ್ತೆ ಮುನ್ನಡೆ ತಂದುಕೊಟ್ಟರು. ಈ ಪಂದ್ಯದ ಮೂಲಕ ಭಾರತದ ಪರ 200ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡುವ ಸಾಧನೆ ಮÁಡಿದ ರೀತು ರಾಣಿ 59ನೇ ನಿಮಿಷದಲ್ಲಿ ಗೋಲು ದಾಖಲಿಸುವ ಮೂಲಕ ಗೆಲವು ಖಚಿತಪಡಿಸಿದರು.
ಮಲೇಷ್ಯಾಗೆ 3 ನೇ ಸ್ಥಾನ: ವನಿತೆಯರ ವಿಶ್ವಹಾಕಿ ಲೀಗ್ ಪಂದ್ಯಾವಳಿಯಲ್ಲಿ ಮಲೇಷ್ಯಾ ತಂಡ ಮೂರನೇ ಸ್ಥಾನಗಳಿಸಿದೆ. ಭಾನುವಾರ ನಡೆದ ಪಂದ್ಯದಲ್ಲಿ ಮಲೇಷ್ಯಾ ತಂಡ ಥಾಯ್ಲೆಂಡ್ ವಿರುದ್ಧ 3-0ಗೋಲುಗಳ ಅಂತರದಲ್ಲಿ ಜಯ ಗಳಿಸಿತು. ಪಂದ್ಯದ 11ನೇ ನಿಮಿಷದಲ್ಲಿ ನೊರಾಜಿನ್ ಸುಮಾಂಟ್ರಿ, 29ನೇ ಮತ್ತು 49ನೇ ನಿಮಿಷದಲ್ಲಿ ಫಾಜಿಲಾ ಸಿಲ್ವೆಸ್ಟರ್ ಸಿಲಿನ್ ಗೋಲು ದಾಖಲಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Geneva ಸಭೆಯಲ್ಲಿ ಭಾರತದ ವಿರುದ್ಧ ಟೀಕೆ; ‘ರಾಜಕೀಯ ಪ್ರೇರಿತ ಹೇಳಿಕೆಗಳ ಒಪ್ಪಲ್ಲ’ ಎಂದ MEA, ವಿಶ್ವಸಂಸ್ಥೆ ಸಮಿತಿ ವಿರುದ್ಧ ಕಿಡಿ..!

'ವಿರೋಧವಿದ್ದರೂ ಮೋಹನ್ ಭಾಗವತ್ ಅಮೆರಿಕಕ್ಕೆ ಯಾಕೆ ಹೋದ್ರು? ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ನಾನಾ ಪಟೋಲೆ ಪ್ರಶ್ನೆ!

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!