ಭಾರತ ತಂಡ ಗುಂಪು-1ರ `ಡಿ' ವಿಭಾಗದಲ್ಲಿ ಸ್ಥಾನ ಪಡೆದಿದ್ದು, ಮೂರು ಬಾರಿ ಚಾಂಪಿಯನ್ ಆಗಿರುವ ದಕ್ಷಿಣ ಕೊರಿಯಾ ಮತ್ತು ಮಲೇಷ್ಯಾ ತಂಡಗಳ ಜತೆ ಸ್ಥಾನ ಹೊಂದಿದೆ.
ಸುಧೀರ್ ಮನ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ವಿಶ್ವ ಬ್ಯಾಡ್ಮಿಂಟನ್ ಒಕ್ಕೂಟ ಬುಧವಾರ ಅಧಿಕೃತವಾಗಿ ತಿಳಿಸಿದೆ. ತಂಡಗಳ ರ್ಯಾಂಕಿಂಗ್ ಆಧಾರದ ಮೇಲೆ ತಂಡಗಳನ್ನು ಗುಂಪುಗಳಾಗಿ ವಿಂಗಡಣೆ ಮಾಡಲಾಗುವುದು. ಈ ಹಿಂದೆ ಗುಂಪಗಳಲ್ಲಿ ಆಯ್ಕೆ ಮಾಡಲಾಗಿದ್ದ ತಂಡಗಳಲ್ಲಿ ರ್ಯಾಂಕಿಂಗ್ ವ್ಯತ್ಯಾಸವಿದ್ದ ಕಾರಣ ಈ ಬದಲಾವಣೆ ಮಾಡಲಾಗಿದೆ. ಈಗಾಗಲೇ ಪ್ರಕಟಿಸಿದ್ದ ಮೊದಲ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಅಮೆರಿಕಾ ಎರಡನೇ ಗುಂಪಿಗೆ ಸೇರಿಸಲಾಗಿದೆ. ಇನ್ನು ಎರಡನೇ ಗುಂಪಿನಲ್ಲಿ ಸ್ಥಾನ ಪಡೆದಿದ್ದ ರಷ್ಯಾ ಮೊದಲ ಗುಂಪಿಗೆ ಸೇರಿದೆ.
ಅಮೆರಿಕ ತಂಡದಲ್ಲಿ ಅನರ್ಹ ಆಟಗಾರರನ್ನು ಆಯ್ಕೆ ಮಾಡಿದ್ದರಿಂದ ಈ ಗೊಂದಲ ಏರ್ಪಟ್ಟಿತು. ಈ ಆಟಗಾರರು ಅಮೆರಿಕದ ವ್ಯಾಪ್ತಿಗೆ ಒಳಪಡುತ್ತರಾದರೂ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಅರ್ಹರಾಗಿಲ್ಲ ಎಂದು ವಿಶ್ವ ಬ್ಯಾಡ್ಮಿಂಟನ್ ಒಕ್ಕೂಟ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ತಂಡಗಳ ರ್ಯಾಂಕಿಂಗ್ ಅಂಕಗಳನ್ನು ಮರು ಲೆಕ್ಕಾ ಹಾಕಿದ ನಂತರ ಅಮೆರಿಕ 16ನೇ ಸ್ಥಾನ ಪಡೆದಿದೆ. ಇನ್ನು ರಷ್ಯಾ 12ನೇ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಈ ಎರಡು ತಂಡಗಳಗುಂಪುಗಳು ಬದಲಾದವು.
ಭಾರತ ತಂಡ ಗುಂಪು-1ರ ಡಿ ವಿಭಾಗದಲ್ಲಿ ಸ್ಥಾನ ಪಡೆದಿದ್ದು, ಮೂರು ಬಾರಿ ಚಾಂಪಿಯನ್ ಆಗಿರುವ ದಕ್ಷಿಣ ಕೊರಿಯÁ ಮತ್ತು ಮಲೇಷ್ಯಾ ತಂಡಗಳ ಜತೆ ಸ್ಥಾನ ಹೊಂದಿದೆ. ಪ್ರತಿ ಸುತ್ತು 5 ಪಂದ್ಯಗಳನ್ನು ಒಳಗೊಂಡಿದ್ದು, ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್, ಡಬಲ್ಸ್ ಹಾಗೂ ಮಿಶ್ರ ಡಬಲ್ಸ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಗುಂಪು-1ರಲ್ಲಿ ಒಟ್ಟು 12 ತಂಡಗಳು ಪಾಲ್ಗೊಳ್ಳಲಿದ್ದು, ಅವಗಳನ್ನು ನಾಲ್ಕು ಗುಂಪುಗಳಲ್ಲಿ ವಿಭಜಿಸಲಾಗಿದೆ. ಒಟ್ಟಾರೆ 35 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು, ನಾಲ್ಕು ಗುಂಪುಗಳಲ್ಲಿ ವಿಂಗಡಿಸಲಾಗಿದೆ.