ಸಿಡ್ನಿ: ವಿಶ್ವಕಪ್ ಟೂರ್ನಿಯ ಎರಡು ಸೆಮಿ ಫೈನಲ್ ಪಂದ್ಯಗಳಿಗೆ ಅಂಪೈರ್ ಹಾಗೂ ಅಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಮಾ. 24ರಂದು ಮಂಗಳವಾರ ಆಕ್ಲೆಂಡ್‍ನಲ್ಲಿ
ನಡೆಯಲಿರುವ ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಪಂದ್ಯಕ್ಕೆ ರೆಫ ರಿಯಾಗಿ ಡೇವಿಡ್ ಬೂನ್, ಮೈದಾನದ ಅಂಪೈರ್‍ಗಳಾಗಿ ಇಯಾನ್ ಗೌಲ್ಡ್ ಮತ್ತು ರಾಡ್ ಟಕ್ಕರ್, ಮೂರನೇ ಅಂಪೈರ್ ಆಗಿ ನಿಗೆಲ್ ಲಾಂಗ್, ನಾಲ್ಕನೇ ಅಂಪೈರ್ ಆಗಿ ಬ್ರೂಸ್ ಆಕ್ಸೆನ್ ಫಾ ರ್ಡ್ ಆಯ್ಕೆಯಾಗಿದ್ದಾರೆ. ಗುರುವಾರ ಮಾ.26ರಂದು ಸಿಡ್ನಿಯಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯಕ್ಕೆ ರಂಜನ್ ಮಧುಗಲೆ ಪಂದ್ಯದ ರೆಫರಿಯಾಗಿ, ಕುಮಾರ ಧರ್ಮಸೇನಾ ಮತ್ತು ರಿಚರ್ಡ್ ಕೆಟಲ್‍ಬರ್ಗ್ ಮೈದಾನದ ಅಂಪೈರ್‍ಗಳಾಗಿ, ಮಾರೈಸ್ ಎರಾಸ್ಮಸ್ ಮೂರನೇ ಅಂಪೈರ್ ಆಗಿ, ರಿಚರ್ಡ್ ಇಲ್ಲಿಂಗ್‍ವರ್ಥ್ ನಾಲ್ಕನೇ
ಅಂಪೈರ್ ಆಗಿ ಆಯ್ಕೆ ಯಾಗಿದ್ದಾರೆ. ಇನ್ನು ಮಾ.29ರಂದು ಮೆಲ್ಬರ್ನ್‍ನಲ್ಲಿ ನಡೆಯಲಿರುವ ಫೈ ನಲ್ ಪಂದ್ಯಕ್ಕೆ ಇನ್ನಷ್ಟೇ ಅಂಪೈರ್ ಹಾಗೂ ಅಧಿಕಾರಿಗಳನ್ನು ಆಯ್ಕೆ ಮಾಡಬೇಕಿದೆ.