ಶೇನ್ ವ್ಯಾಟ್ಸನ್ ಮತ್ತು ವಹಾಬ್ ವಾಗ್ವಾದ 
ಕ್ರೀಡೆ

ವ್ಯಾಟ್ಸನ್, ವಹಾಬ್‍ಗೆ ದಂಡ

ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಮಾತಿನ ಚಕಮಕಿ ನಡೆಸಿದ ಪಾಕ್ ವೇಗಿ ವಹಾಬ್ ರಿಯಾಜ್ ಮತ್ತು ಆಸೀಸ್ ಆಲ್ರೌಂಡರ್ ಶೇನ್ ವ್ಯಾಟ್ಸನ್...

ಅಡಿಲೇಡ್: ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಮಾತಿನ ಚಕಮಕಿ ನಡೆಸಿದ ಪಾಕ್ ವೇಗಿ ವಹಾಬ್ ರಿಯಾಜ್ ಮತ್ತು ಆಸೀಸ್ ಆಲ್ರೌಂಡರ್ ಶೇನ್ ವ್ಯಾಟ್ಸನ್ ಗೆ ಐಸಿಸಿ ದಂಡ ವಿಧಿಸಿದೆ. ವಿಶ್ವಕಪ್ ಆರಂಭಕ್ಕೂ ಮುನ್ನ ಮೈದಾನದಲ್ಲಿ ಅಸಭ್ಯ ವರ್ತನೆ ತಡೆಯುವ ನಿಟ್ಟಿನಲ್ಲಿ ಅಂತಾರಾಷ್ಟ್ರಿಯ ಕ್ರಿಕೆಟ್ ಮಂಡಳಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟ ಸೂಚನೆ ನೀಡಿತ್ತು. ಈ ಪಂದ್ಯದಲ್ಲಿ ವಹಾಬ್ ಮತ್ತು ವ್ಯಾಟ್ಸನ್ ಸಾಕಷ್ಟು ಮಾತುಕತೆ ನಡೆಸಿದ್ದಾರೆ. ಹಾಗಾಗಿ ವ್ಯಾಟ್ಸನ್ ವಿರುದ್ಧ ಅನುಚಿತ ವರ್ತನೆಗಾಗಿ ವಹಾಬ್‍ಗೆ ಪಂದ್ಯದ ಶೇ.50ರಷ್ಟು ದಂಡ ವಿಧಿಸಲಾಯಿತು. ನಂತರ ವಹಾಬ್ ಜತೆ ವಾಗ್ವಾದ ನಡೆಸಿದ್ದಕ್ಕಾಗಿ ವ್ಯಾಟ್ಸನ್‍ಗೆ ಪಂದ್ಯದ ಶೇ.15ರಷ್ಟು ದಂಡವಿಧಿಸಿತು.
ಈ ಇಬ್ಬರು ಆಟಗಾರರು ಯಾವುದೇ ವಿಚಾರಣೆಗೂ ಮುಂದಾಗದೇ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ. ಈ ಇಬ್ಬರೂ ಆಟಗಾರರು ಪಂದ್ಯದ ನಂತರ ಕೈಕುಲುಕಿ ರಾಜಿಯಾಗಿದ್ದರು. ನಂತರ ಮಾತನಾಡಿದ್ದ ವಹಾಬ್, ವ್ಯಾಟ್ಸನ್ ಅಥವಾ ಮಿಚೆಲ್ ಸ್ಟಾರ್ಕ್ ವಿರುದ್ಧ ಯಾವುದೇ ಕೋಪವಿಲ್ಲ ಎಂದು ತಿಳಿಸಿದ್ದರು.


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತದಲ್ಲಿ ಇಂಧನ ಬಿಕ್ಕಟ್ಟು: ರಾಜ್ಯಗಳ ಮುಖ್ಯಮಂತ್ರಿ ಜೊತೆಗೆ ಪ್ರಧಾನಿ ಮೋದಿ ಸಭೆ, ಸಿಎಂ ಸಿದ್ದರಾಮಯ್ಯ ಗೈರು!

ಶ್ರೀನಗರ-ಲೇಹ್ ಹೆದ್ದಾರಿಯ ಝೋಜಿಲಾ ಪಾಸ್ ನಲ್ಲಿ ಭಾರಿ ಹಿಮಪಾತ: ಏಳು ಮಂದಿ ದುರ್ಮರಣ, ಐವರಿಗೆ ಗಾಯ! Video

ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತದಿಂದ 15 ದಿನಕ್ಕೊಮ್ಮೆ 7000 ಕೋಟಿ ಆದಾಯ ನಷ್ಟ!

IPL 2026: RCB vs SRH, ಆಸ್ಟ್ರೇಲಿಯಾದ ಈ ಸ್ಟಾರ್ ವೇಗಿ ಆಡಲ್ಲ! ಫ್ಯಾನ್ಸ್ ಗೆ ನಿರಾಸೆ

ಇರಾನ್‌ನ ಉನ್ನತಾಧಿಕಾರಿ ಅರಘ್ಚಿ, ಗಾಲಿಬಾಫ್'ರನ್ನು ಕೊಲ್ಲದಂತೆ ಇಸ್ರೇಲ್ ತಡೆದಿದ್ದೇ ನಾವು: Pakistan

SCROLL FOR NEXT