ಸಿಡ್ನಿ: ವಿಶ್ವಕಪ್ ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾಕ್ಕೆ ಭಾರತದ ಸವಾಲಿನ ಜೊತೆಗೆ ಗ್ಯಾಲರಿಯಲ್ಲಿ ಕೂರುವ 30 ಸಾವಿರ ಭಾರತೀಯ ಅಭಿಮಾನಿಗಳನ್ನು ಎದುರಿಸಬೇಕಾಗಿದೆ.
ಆಯೋಜಕರ ಪ್ರಕಾರ 44 ಸಾವಿರ ಪ್ರೇಕ್ಷಕರ ಸಾಮರ್ಧ್ಯ ಹೊಂದಿರುವ ಮೈದಾನದಲ್ಲಿ, ಈ ಪಂದ್ಯಕ್ಕಾಗಿ ಶೇ.70 ರಷ್ಟು ಟಿಕೆಟ್ ಅನ್ನು ಭಾರತೀಯ ಅಭಿಮಾನಿಗಳು ಖರೀದಿಸಿದ್ದಾರೆ. ಹಾಗಾಗಿ ಭಾರತ ಹೆಚ್ಚು ಅಭಿಮಾನಿಗಳ ಬೆಂಬಲ ಪಡೆಯಲಿದ್ದು, ಭಾರತಕ್ಕೆ ಅನುಕೂಲಕರ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ. ಹಾಗಾಗಿ, ಟ್ವೀಟ್ ಮಾಡಿರುವ ಕ್ಲಾರ್ಕ್, ಆಸ್ಟ್ರೇಲಿಯಾದ ಅಭಿಮಾನಿಗಳು ಆ ಪಂದ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು. ನಿಮ್ಮ ಬೆಂಬಲ ನಮಗೆ ಅಗತ್ಯವಿದೆ ಎಂದು ವಿನಂತಿಸಿಕೊಂಡಿದ್ದಾರೆ.