ವಿರಾಟ್ ಕೊಹ್ಲಿ 
ಕ್ರೀಡೆ

ನಾವು ಸೆಮಿಫೈನಲ್ಸ್ ತಲುಪಿದ್ದು ಹಲವರಿಗೆ ಆಶ್ಚರ್ಯವಾಗಿದೆ, ನಮಗಲ್ಲ: ವಿರಾಟ್ ಕೊಹ್ಲಿ

ವಿಶ್ವಕಪ್ ಸರಣಿಗೂ ಮುಂಚೆ ನಡೆದ ಆಸ್ಟ್ರೇಲಿಯಾ ಪ್ರವಾಸದ ದಯನೀಯ ಸೋಲಿನ ನಂತರ ಭಾರತ ಸೆಮಿಫೈನಲ್ಸ್ ತಲುಪುತ್ತದೆ ಎಂದು ಬಹಳ ಜನ

ಸಿಡ್ನಿ: ಕ್ರಿಕೆಟ್ ವಿಶ್ವಕಪ್ ಸರಣಿಗೂ ಮುಂಚೆ ನಡೆದ ಆಸ್ಟ್ರೇಲಿಯಾ ಪ್ರವಾಸದ ದಯನೀಯ ಸೋಲಿನ ನಂತರ ಭಾರತ ಸೆಮಿಫೈನಲ್ಸ್ ತಲುಪುತ್ತದೆ ಎಂದು ಬಹಳ ಜನ ಊಹಿಸಿರಲಿಕ್ಕಿಲ್ಲ. ಆದರೆ ಆಟಗಾರರು ತಮ್ಮ ಮೇಲಿನ ನಂಬಿಕೆ ಕಳೆದುಕೊಳ್ಳುವುದಿಲ್ಲ, ಇದೆ ವಿಮರ್ಶಕರನ್ನು ಚಕಿತಗೊಳಿಸಲು ಸಹಕಾರಿಯಾಗಿದೆ ಎಂದಿದ್ದಾರೆ ವಿರಾಟ್ ಕೊಹ್ಲಿ.

"ಪ್ರಾಮಾಣಿಕವಾಗಿ ಹೇಳಬೇಕೆಂದರೆ ಬಹಳಷ್ಟು ಜನ ನಾವು ಸೆಮಿಫೈನಲ್ಸ್ ತಲುಪುತ್ತೇವೆ ಎಂದು ನಂಬಲಿಲ್ಲ. ಆದುದರಿಂದ ಬಹಳಷ್ಟು ಜನರನ್ನು ಆಶ್ಚರ್ಯಚಕಿತಗೊಳಿಸಿದ್ದೇವೆ. ಆದರೆ ನಮಗೆ ಆಶ್ಚರ್ಯವಾಗಿಲ್ಲ" ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

"ನಮ್ಮ ಬಲದ ಮೇಲೆ, ನಮ್ಮ ಸಾಮರ್ಥ್ಯದ ಮೇಲೆ ನಮಗೆ ನಂಬಿಕೆ ಇತ್ತು" ಎಂದಿದ್ದಾರೆ.

ಇಲ್ಲಿಯವರೆಗೂ ವಿಶ್ವಕಪ್-೨೦೧೫ರ ಸರಣಿಯಲ್ಲಿ ಆಡಿರುವ ಯಾವ ಪಂದ್ಯವನ್ನು ಸೋಲದೆ, ಸೆಮಿಫೈನಲ್ಸ್ ತಲುಪಿರುವ ಭಾರತ ತಂಡ, ಸೆಮಿಫೈನಲ್ಸ್ ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸುವ ವಿಶ್ವಾಸದಲ್ಲಿದೆ.

"ಬ್ಯಾಟ್ಸಮನ್ ಗಳ ಉತ್ತಮ ಆಟ ತಂಡದ ಗೆಲುವಿಗೆ ಹೆಚ್ಚು ಸಹಕಾರಿಯಾಗಿದೆ ಎಂದು ವಿರಾಟ್ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್