ಭಾರತ-ಆಸ್ಟ್ರೇಲಿಯಾ ಸೆಮಿಫೈನಲ್ ಪಂದ್ಯಾವಳಿ 
ಕ್ರೀಡೆ

ಭಾರತ-ಆಸೀಸ್ ಪಂದ್ಯದ ಟಿಕೆಟ್ ಗೆ ಭಾರಿ ಬೇಡಿಕೆ

ವಿಶ್ವಕಪ್ ಟೂರ್ನಿಯಲ್ಲಿ ಗುರುವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಆತಿಥೇಯ ಆಸ್ಟ್ರೇಲಿಯಾ ಫರಸ್ಪರ ಮುಖಾಮುಖಿಯಾಗಲಿದ್ದು, ಟಿಕೆಟ್ ಗೆ ಭಾರಿ ಬೇಡಿಕೆ ಹೆಚ್ಚಾಗಿದೆ...

ಸಿಡ್ನಿ: ವಿಶ್ವಕಪ್ ಟೂರ್ನಿಯಲ್ಲಿ ಗುರುವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಆತಿಥೇಯ ಆಸ್ಟ್ರೇಲಿಯಾ ಫರಸ್ಪರ ಮುಖಾಮುಖಿಯಾಗಲಿದ್ದು, ಟಿಕೆಟ್ ಗೆ ಭಾರಿ ಬೇಡಿಕೆ ಹೆಚ್ಚಾಗಿದೆ.

ಈ ಪಂದ್ಯದಲ್ಲಿ 44 ಸಾವಿರ ಪ್ರೇಕ್ಷಕರ ಸಾಮರ್ಥ್ಯ ಹೊಂದಿರುವ ಸಿಡ್ನಿ ಕ್ರಿಕೆಟ್ ಮೈದಾನ ಭರ್ತಿಯಾಗುವ ನಿರೀಕ್ಷೆಗಳಿವೆ. ಈ ಪಂದ್ಯದ ಟಿಕೆಟ್ ಗೆ ನಿಗದಿತ ದರಕ್ಕಿಂತ ಹೆಚ್ಚಿನ ಮೊತ್ತ ನೀಡಲು ಅಭಿಮಾನಿಗಳು ಸಿದ್ದರಾಗಿದ್ದಾರೆ. ನನ್ನ ಬಳಿ ಪಂದ್ಯದ ಟಿಕೆಟ್ ಇದೆ. ಸೆಮಿಫೈನಲ್ ಪಂದ್ಯವನ್ನು ವೀಕ್ಷಿಸಲು ತೆರಳುತ್ತೇನೆ ಎಂದು ಕೆಲವರಿಗೆ ಹೇಳಿದಾಗ, ಟಿಕೆಟ್ ಗಾಗಿ ದೊಡ್ಡ ಮೊತ್ತವನ್ನು ನೀಡಿ ಖರೀದಿಸಲು ಮುಂದಾಗುತ್ತಿದ್ದಾರೆ ಎಂದು ಸಿಡ್ನಿಯಲ್ಲಿ ನೆಲೆಸಿರುವ ಎಂಜಿನಿಯರ್ ಉದ್ಯೋಗಿ ಧ್ರುವ ಚಂದ್ರ ತಿಳಿಸಿದ್ದಾರೆ.

ನಾನು 90 ಆಸ್ಟ್ರೇಲಿಯನ್ ಡಾಲರ್ ನೀಡಿ ಟಿಕೆಟ್ ಖರೀದಿಸಿದ್ದು, ಟಿಕೆಟ್ ಗಾಗಿ 1000ದಿಂದ 1500 ಆಸ್ಟ್ರೇಲಿಯನ್ ಡಾಲರ್ ನೀಡಲು ಸಿದ್ದರಾಗಿದ್ದಾರೆ. ಕಳೆದ ನವೆಂಬರ್ ತಿಂಗಳಲ್ಲಿ ಟಿಕೆಟ್ ಖರೀದಿಸಿದ್ದೆ, ಈಗ ನಾನು ಟಿಕೆಟ್ ಅನ್ನು ಮಾರುವುದಿಲ್ಲ. ಇದು ಕಾನೂನು ಬಾಹೀರವಾಗುತ್ತದೆ ಎಂದು ಅವರು ಹೇಳಿದ್ದಾರೆ. ಯಾವುದೇ ತಂಡಗಳು ಬಂದರು ಪಂದ್ಯ ನೋಡಬೇಕೆಂದು ಬಯಸಿದ್ದೆ. ಆದರೆ ಭಾರತ ಹಾಗೂ ಆಸ್ಟ್ರೇಲಿಯಾ ಈ ಪಂದ್ಯದಲ್ಲಿ ಸೆಣಸುತ್ತಿರುವುದು ನನ್ನ ಅದೃಷ್ಟ. ಈ ಪಂದ್ಯ ಕುತೂಹಲದಿಂದ ಕೂಡಿರುವ ನಿರೀಕ್ಷೆ ಇದೆ ಎನ್ನುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ