ಕ್ರೀಡೆ

ಫೈನಲ್ ಪಂದ್ಯಕ್ಕೆ ಧರ್ಮಸೇನಾ, ರಿಚರ್ಡ್ ಅಂಪೈರಿಂಗ್

Srinivasamurthy VN

ದುಬೈ: ಶ್ರೀಲಂಕಾದ ಕುಮಾರ ಧರ್ಮಸೇನಾ ಹಾಗೂ ಇಂಗ್ಲೆಂಡ್‍ನ ರಿಚರ್ಡ್ ಕೆಟಲ್ ಬುರೊ ಅವರು ಭಾನುವಾರ ನಡೆಯಲಿರುವ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆನ್-ಫೀಲ್ಡ್ ಅಂಪೈರ್ ಗಳಾಗಿ ನಿಯುಕ್ತಿಗೊಂಡಿದ್ದಾರೆ.

ವಿಶ್ವಕಪ್ ಫೈನಲ್‍ನಲ್ಲಿ ಆಟಗಾರನಾಗಿ ಆಡಿ, ಇದೀಗ ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯಕ್ಕೆ ಅಂಪೈರ್ ಆದ ಪ್ರಪ್ರಥಮ ವ್ಯಕ್ತಿ ಎಂಬ ಹಿರಿಮೆಗೆ ಧರ್ಮಸೇನಾ ಭಾಜನರಾಗಿದ್ದಾರೆ. 1996 ವಿಶ್ವಕಪ್‍ನಲ್ಲಿ ಶ್ರೀಲಂಕಾ ತಂಡದಲ್ಲಿ ಧರ್ಮಸೇನಾ ವರು ಆಡಿದ್ದರು. ಮೆಲ್ಬರ್ನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಗಳು ಕಪ್ ಗಾಗಿ ಸೆಣಸಲಿವೆ.

ತೀವ್ರ ಕುತೂಹಲ ಕೆರಳಸಿರುವ ಈ ಪಂದ್ಯದಲ್ಲಿ ಶ್ರೀಲಂಕಾದ ರಂಜನ್ ಮುದುಗಲೆ ರೆಫರಿಯಾಗಿ ಕಾರ್ಯ ನಿರ್ವಹಿಸಲಿದ್ದು, ಮರಾಯಿಸ್ ಎರಾಸ್ಮಸ್ ಅವರು ಮೂರನೇ ಅಂಪೈರ್ ಆಗಿ ಹಾಗೂ ಇಯಾನ್ ಗೌಲ್ಡ್ ನಾಲ್ಕನೇ ಅಂಪೈರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಶುಕ್ರವಾರ ಹೊರಡಿಸಲಾದ ಐಸಿಸಿಯ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

SCROLL FOR NEXT