ಕ್ರೀಡೆ

ಐಸಿಸಿ ವರ್ಲ್ಡ್ ಇಲೆವೆನ್ ತಂಡದಲ್ಲಿಲ್ಲ ಒಬ್ಬ ಟೀಂ ಇಂಡಿಯಾ ಆಟಗಾರ!

Vishwanath S

ಆಸ್ಟ್ರೇಲಿಯಾ ಗೆಲುವಿನೊಂದಿಗೆ 2015ರ ವಿಶ್ವಕಪ್ ಮುಕ್ತಾಯಗೊಂಡಿದ್ದು, ವಿಶ್ವಕಪ್ ಸರಣಿ ಮುಗಿದ ಬೆನ್ನಲ್ಲೇ ಆಟಗಾರರ ಪ್ರದರ್ಶನದ ಆಧಾರದ ಮೇಲೆ ಐಸಿಸಿ ವರ್ಲ್ಡ್ ಇಲೆವೆನ್ ತಂಡವನ್ನ ಆಯ್ಕೆ ಮಾಡಿದೆ.

ಈ ಐಸಿಸಿ ವರ್ಲ್ಡ್ ಇಲೆವನ್ ತಂಡದಲ್ಲಿ ಭಾರತ ತಂಡ ಯಾವೊಬ್ಬ ಆಟಗಾರನೂ ಈ ತಂಡದಲ್ಲಿಲ್ಲ. ಸೆಮಿಫೈನಲ್ ನಲ್ಲಿ ಸೋಲುಂಡು ಟೂರ್ನಿಯಿಂದ ನಿರ್ಗಮಿಸಿದ್ದ ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿತ್ತು. ಆದರೂ ಇಲೆವನ್ ತಂಡದಲ್ಲಿ ಸ್ಥಾನ ಗಳಿಸದೆ ಇರುವುದು ಸೋಜಿಗ.

ಇದೇ ವೇಳೆ ಫೈನಲ್ ಗೆ ಲಗ್ಗೆಯಿಟ್ಟು ಚೊಚ್ಚಲ ವಿಶ್ವಕಪ್ ಗೆಲ್ಲುವ ಆಸೆಯನ್ನು ಕೈ ಚೆಲ್ಲಿದ್ದರೂ ನ್ಯೂಜಿಲೆಂಡ್ ನ ಐವರು ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾದ ಮೂವರು ಕ್ರಿಕೆಟಿಗರು ಇಲ್ಲಿದ್ದಾರೆ. ದಕ್ಷಿನ ಆಫ್ರಿಕಾದ ಇಬ್ಬರು ಮತ್ತು ಶ್ರೀಲಂಕಾದ ಒಬ್ಬ ಆಟಗಾರನಿಗೆ ಸ್ಥಾನ ಸಿಕ್ಕಿದೆ.

ನ್ಯೂಜಿಲೆಂಡ್ ನಾಯಕ ಸರಣಿಯಲ್ಲಿ 188.50 ಸ್ಟ್ರೈಕ್ ರೇಟ್‘ನಲ್ಲಿ 328 ರನ್ ಸಿಡಿಸಿರುವ ಬ್ರೆಂಡನ್ ಮೆಕಲಮ್ ತಂಡದ ನಾಯಕರಾಗಿದ್ದಾರೆ.

ಐಸಿಸಿ ವರ್ಲ್ಡ್ ಇಲೆವೆನ್ ತಂಡ ಇಂತಿದೆ.

ಬ್ರೆಂಡನ್ ಮೆಕಲಮ್ (ನಾಯಕ, ನ್ಯೂಜಿಲೆಂಡ್)
ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್)
ಎ.ಬಿ ಡಿವಿಲಿಯರ್ಸ್ (ದಕ್ಷಿಣ ಆಫ್ರಿಕಾ)
ಸ್ಟೀವನ್ ಸ್ಮಿತ್ (ಆಸ್ಟ್ರೇಲಿಯಾ)
ಕುಮಾರ ಸಂಗಕ್ಕರ(ಶ್ರೀಲಂಕಾ, ಕೀಪರ್ಬ್ಯಾಟ್ಸ್‘ಮನ್)
ಕೋರೆ ಅಂಡರ್ಸನ್ (ನ್ಯೂಜಿಲೆಂಡ್)
ಗ್ಲೇನ್ ಮ್ಯಾಕ್ಸ್‘ವೆಲ್ (ಆಸ್ಟ್ರೇಲಿಯಾ)
ಡ್ಯಾನಿಯಲ್ ವೆಟ್ಟೋರಿ (ನ್ಯೂಜಿಲೆಂಡ್)
ಮೊರ್ನೆ ಮಾರ್ಕೆಲ್ (ದಕ್ಷಿಣ ಆಫ್ರಿಕಾ)
ಟ್ರೆಂಟ್ ಬೋಲ್ಟ್ (ನ್ಯೂಜಿಲೆಂಡ್)
ಮಿಶೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ)
ಬ್ರೆಂಡನ್ ಟೇಲರ್ (ಜಿಂಬಾಬ್ವೆ, 12ನೇ ಆಟಗಾರ)

SCROLL FOR NEXT